ಉಡುಪಿ:
ಬೆಂಗಳೂರಿನಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಅಲ್ಲದೆ, ಜಿಲ್ಲೆಗಳಲ್ಲಿ ಲಾಕ್‌ಡೌನ್ ಘೋಷಿಸುವ ಅಧಿಕಾರವನ್ನು ರಾಜ್ಯ ಸರ್ಕಾರ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗೆ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಕೊಡಗು ಜಿಲ್ಲಾಡಳಿತ ಜಿಲ್ಲೆಯ ಗಡಿಗಳನ್ನು ಸೀಲ್‌ಡೌನ್ ಮಾಡಲು ಮುಂದಾಗಿದೆ. ಹೀಗಾಗಿ ಜುಲೈ 15ರ ರಾತ್ರಿ 8 ಗಂಟೆಯಿಂದ ಉಡುಪಿ ಜಿಲ್ಲೆಗೆ ಯಾರು ಬರುವಂತಿಲ್ಲ ಉಡುಪಿ ಜಿಲ್ಲೆಯಿಂದ ಯಾರು ಹೊರಹೋಗುವಂತಿಲ್ಲ ಎಂದು ಜಿಲ್ಲಾಡಳಿತ ಆದೇಶಿಸಿದೆ. ಜಿಲ್ಲೆಯ ತಜ್ಞ ಆರೋಗ್ಯಾಧಿಕಾರಿಗಳ ಜೊತೆಗೆ ಮಂಗಳವಾರ ಮಹತ್ವದ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳ ಅಭಿಪ್ರಾಯವನ್ನು ಸಂಗ್ರಹಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.
ಲಾಕ್‌ಡೌನ್‌ಗಿಂತಲೂ ಗಡಿಗಳನ್ನು ಸೀಲ್ ಮಾಡುವುದು ಹೆಚ್ವು ಪರಿಣಾಮಕಾರಿ ಎಂಬುದು ಉಡುಪಿ ಜಿಲ್ಲಾಡಳಿತದ ಅಭಿಪ್ರಾಯವಾಗಿದೆ. ಸದ್ಯ ಉಡುಪಿ ಜಿಲ್ಲೆಗೆ ಹೊರಜಿಲ್ಲೆಗಳಿಂದ ಬರುವವರೇ ಅಪಾಯ ತಂದೊಡ್ಡುತ್ತಿದ್ದಾರೆ. ಅವರಿಂದಲೇ ಜಿಲ್ಲೆಯಲ್ಲಿ ಕೊರೋನಾ ಹಬ್ಬುತ್ತಿರುವುದು ದೃಢವಾಗಿದೆ. ಹೀಗಾಗಿ ಹೊರಗಿನವರ ಸಂಚಾರ ನಿರ್ಬಂಧಿಸಿದರೆ ಸೋಂಕು ನಿಯಂತ್ರಣ ಸಾಧ್ಯ ಎಂಬುದು ಜಿಲ್ಲಾಡಳಿತದ ವಾದ……