Breaking News

ಲಾಕ್ ಡೌನ್ ಮುಗಿಯಿತು, ಇನ್ನು ಅನ್ ಲಾಕ್ ಶುರು..!

ಗಮನದಲ್ಲಿಡಿ ಈ 10 ಸಂಗತಿ....

SHARE......LIKE......COMMENT......

1. ಸಾಮಾಜಿಕ ಅಂತಕ (ದೈಹಿಕ ಅಂತರ): ಪ್ರತಿಯೊಬ್ಬರು ಸಾಮಾಜಿಕ/ದೈಹಿಕ ಅಂತರವನ್ನು ಕಾಪಾಡಬೇಕು. ಅಂಗಡಿಗಳಲ್ಲಿಯೂ ಸಾಮಾಜಿಕ ಅಂತರ ಇರಬೇಕು. ಒಮ್ಮೆ ಐದಕ್ಕಿಂತ ಹೆಚ್ಚು ಜನ ಇರಬಾರದು.

2.ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು: ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಒಂದು ವೇಳೆ ಉಗುಳುವುದು ಕಂಡುಬಂದರೆ ದಂಡ ವಿಧಿಸಲು ಸೂಚಿಸಲಾಗಿದೆ.

3.ಸಭೆ/ಸಮಾರಂಭ: ಬೃಹತ್‌ ಸಮಾರಂಭ, ಸಾರ್ವಜನಿಕ ಸಮಾರಂಭಕ್ಕೆ ನಿಷೇಧ ಮುಂದುವರಿದಿದೆ.

4.ಮುಖ ಕವಚ (ಫೇಸ್‌ ಮಾಸ್ಕ್‌): ಸಾರ್ವಜನಿಕ ಸ್ಥಳಗಳಲ್ಲಿ, ಕಚೇರಿಗಳಲ್ಲಿ, ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಲೇಬೇಕು.

5.ವರ್ಕ್‌ ಫ್ರಮ್‌ ಹೋಮ್‌: ಎಲ್ಲಿ ಸಾಧ್ಯವೋ, ಯಾವ ಸಂಸ್ಥೆಗೆ ವರ್ಕ್‌ ಫ್ರಮ್‌ ಹೋಮ್‌ ಸಾಧ್ಯವೋ ಅವುಗಳನ್ನು ಮುಂದುವರಿಸಬಹುದು.

6.ಮದ್ಯ, ತಂಬಾಕು ನಿಷೇಧ: ಮದ್ಯ ಸೇವನೆ, ತಂಬಾಕು ಜಗಿಯುವುದು, ಪಾನ್‌ ಮಸಾಲ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

7.ಕೆಲಸದ ಸಮಯ: ಕಚೇರಿಗಳಲ್ಲಿ, ಅಂಗಡಿಗಳಲ್ಲಿ, ವಾಣಿಜ್ಯ ಕೇಂದ್ರಗಳಲ್ಲಿ ಪಾಳಿಗಳಲ್ಲಿ ಕೆಲಸ ಮಾಡಲು ಅನುಮತಿ ನೀಡಬೇಕು.

8.ಸ್ಯಾನಿಟೈಸ್‌: ಕಚೇರಿಗಳಲ್ಲಿ, ಅಂಗಡಿಗಳಲ್ಲಿ ಹಾಗೂ ಸಾಮಾನ್ಯವಾಗಿ ಜನರು ಮುಟ್ಟುವ ಜಾಗಗಳನ್ನು (ಡೋರ್‌ ಲಾಕ್‌, ಮೆಟ್ಟಿಲು ಪಕ್ಕದ ರೇಲಿಂಗ್‌, ಲಿಫ್ಟ್‌ ಬಟನ್‌) ಕಡ್ಡಾಯವಾಗಿ ಸ್ಯಾನಿಟೈಸ್‌ ಮಾಡಬೇಕು.

9.ಆರೋಗ್ಯ ತಪಾಸಣೆ/ಸ್ವಚ್ಛತೆ: ಎಲ್ಲ ಕಡೆಗಳಲ್ಲಿಯೂ ಉಷ್ಣ ತಪಾಸಣೆ (ಧರ್ಮಲ್‌ ಸ್ಕ್ಯಾನಿಂಗ್‌) ಕಡ್ಡಾಯವಾಗಿ ಮಾಡಲೇಬೇಕು.

10.ಸಾಮಾಜಿಕ/ದೈಹಿಕ ಅಂತರ: ಮನೆಯ ಹೊರಗಡೆ ಬಂದ ಕೂಡಲೇ ಕಡ್ಡಾಯವಾಗಿ ಎಲ್ಲರೂ ಸಾಮಾಜಿಕ/ದೈಹಿಕ ಅಂತರವನ್ನು ಕಾಪಾಡಬೇಕು. ಕಚೇರಿಯಲ್ಲಿ ಸಿಬ್ಬಂದಿ ಕೂಡ ಇದನ್ನು ಕಡ್ಡಾಯವಾಗಿ ಪಾಲಿಸಬೇಕು……