Breaking News

ಸಾಮಾಜಿಕ ಮಾಧ್ಯಮಗಳಲ್ಲಿ Bold Look ನೀಡುತ್ತಿದ್ದಾಳೆ ಈ ಬೆಡಗಿ..!

ರಿಯಾ ಸೆನ್ ನ ಮೋಹಕ ಭಾವಚಿತ್ರಗಳು....

ನವದೆಹಲಿ:

2001ರಲ್ಲಿ ಬಿಡುಗಡೆಯಾದ ಬಾಲಿವುಡ್ ಚಿತ್ರ ‘ಸ್ಟೈಲ್’ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿರುವ ನಟಿ ರಿಯಾ ಸೆನ್, ಸದ್ಯ ಬಿ-ಟೌನ್ ನಿಂದ ಅಂತರ ಕಾಯ್ದುಕೊಂಡಿದ್ದಾಳೆ. ಆದರೆ, ರಿಯಾ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಕ್ರೀಯಳಾಗಿದ್ದಾಳೆ. ಅವಳ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಿಮಗೆ ಆಕೆಯ ಹಲವು ಮೋಹಕ ಭಾವಚಿತ್ರಗಳು ಹಾಗೂ ವಿಡಿಯೋಗಳು ನೋಡಲು ಸಿಗಲಿವೆ. ಕೆಲ ದಿನಗಳ ಹಿಂದೆಯಷ್ಟೇ ರಿಯಾ ತನ್ನ ಟಾಪ್ ಲೆಸ್ ಭಾವಚಿತ್ರವನ್ನು ಹಂಚಿಕೊಂಡು ಇಂಟರ್ನೆಟ್ ಮೇಲೆ ಹೀಟೆಕ್ಕಿಸಿದ್ದಳು.

ಖ್ಯಾತ ಬಾಲಿವುಡ್ ಹಿರಿಯ ನಟಿ ಮುನ್ ಮುನ್ ಸೆನ್ ಅವರ ಪುತ್ರಿಯಾಗಿರುವ ರಿಯಾ ಸೆನ್ ಕೊನೆಯ ಬಾರಿಗೆ 2017 ರಲ್ಲಿ ಬಿಡುಗಡೆಯಾದ ಚಿತ್ರ ‘ಲೋನ್ಲಿ ಗರ್ಲ್’ ನಲ್ಲಿ ಕಾಣಿಸಿಕೊಂಡಿದ್ದಳು. ಈ ಚಿತ್ರದ ಬಳಿಕ ರಿಯಾ ಕೆಲ ವೆಬ್ ಸೀರಿಸ್ ಗಳಲ್ಲಿ ಕಾಣಿಸಿಕೊಂಡು ಬಳಿಕ ಬಿ-ಟೌನ್ ನಿಂದ ಸಂಪೂರ್ಣ ಅಂತರ ಕಾಯ್ದುಕೊಂಡಿದ್ದಾಳೆ. ಸದ್ಯ ರಿಯಾ ತನ್ನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಬೋಲ್ಡ್ ಭಾವಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾಳೆ. ಬಿಕನಿಯಲ್ಲಿ ಅವಳು ಹಂಚಿಕೊಳ್ಳುವ ಭಾವಚಿತ್ರಗಳು ಸಾಮಾಜಿಕ ಮಾಧ್ಯಮಗಳ ಮೇಲೆ ಸಾಕಷ್ಟು ವೈರಲ್ ಆಗಿವೆ.

2017ರಲ್ಲಿ ರಿಯಾ ತನ್ನ ಬಾಯ್ ಫ್ರೆಂಡ್ ಶಿವಂ ತಿವಾರಿ ಜೊತೆಗೆ ಹಸೆಮಣೆ ಏರಿ ..ಇದುವರೆಗೆ ಬಿ-ಟೌನ್ ಗೆ ಗುಡ್ ಬೈ ಹೇಳಿದ್ದಾಳೆ. ಆದರೂ ಕೂಡ ಆಕೆ ತನ್ನ ಹಾಟ್ ಫೋಟೋಗಳ ಮೂಲಕ ಸಾಮಾಜಿಕ ಮಾಧ್ಯಮಗಳ ಮೇಲೆ ಪಡ್ಡೆ ಹೈಕಳ ಕನಸಿಗೆ ಕಿಚ್ಚೆರೆಚುತ್ತಲೇ ಇರುತ್ತಾಳೆ……