Breaking News

ಯಾವ ಮರಗಳನ್ನು ಪೂಜಿಸಿದರೆ ಯಾವ ಫಲಾನುಫಲಗಳು ಫಲಿಸುತ್ತದೆ..?

ಯಾವ ದೇವತೆಗಳಿಗೆ ಯಾವ ವೃಕ್ಷಗಳು ಪ್ರೀತಿಪಾತ್ರವಾದದ್ದು....

SHARE......LIKE......COMMENT......

:

ಮಂತ್ರ

ಮೂಲತಃ ಬ್ರಹ್ಮ ರೂಪಾಯ:, ಮಧ್ಯತಃ ವಿಷ್ಣು ರೂಪಯೇ,ಅಗ್ರತಃ ಶಿವ ರೂಪಾಯಃ ಶ್ರೀ ವೃಕ್ಷ ರಾಜಯೇ ನಮಃ”

ಹಿಂದೂ ಧರ್ಮದಲ್ಲಿ ವೃಕ್ಷಾರಾಧನೆಯ ಮಹತ್ವೇನು?

ಭಾರತವು ವಿಭಿನ್ನ ಪರಂಪರೆ ಮತ್ತು ಸಂಸ್ಕೃತಿಗಳ ತವರೂರು. ಆದರೆ ಕೆಲವೊಂದು ಸಂಪ್ರದಾಯಗಳು ಮತ್ತು ಆಚರಣೆಗಳು, ಇಡೀ ಭಾರತದಾದ್ಯಂತ ಒಂದೇ ರೀತಿ ಪಾಲಿಸಿಕೊಂಡು ಬರಲಾಗುತ್ತದೆ. ಅದರಲ್ಲಿಯೂ ಪ್ರಕೃತಿಯನ್ನು ಆರಾಧಿಸುವ ಬಗೆಯಂತು ಇಡೀ ದೇಶದಲ್ಲಿ ನಾವು ಎಲ್ಲಾ ಕಡೆಯಲ್ಲೂ ಸಹ ಕಾಣಬಹುದು. ಅಂತಹ ಆಚರಣೆಗಳಲ್ಲಿ ಮರಗಳ ಅಥವಾ ವೃಕ್ಷಗಳ ಆರಾಧನೆ. ಮರಗಳನ್ನು ಪೂಜಿಸುವುದರ ಹಿಂದೆ ಹಲವಾರು ಕಥೆಗಳನ್ನು ನಾವು, ವಿವಿಧ ಪ್ರಾಂತ್ಯಗಳಲ್ಲಿ ಕಾಣಬಹುದು. ಕೆಲವೊಂದು ಆಯಾ ರಾಜ್ಯ ಹಾಗೂ ಪ್ರಾಂತ್ಯಗಳಿಗೆ ಸೀಮಿತವಾಗಿದ್ದರೆ ಕೆಲವು ದೇಶದಾದ್ಯಂತ ಸಮಾನವಾಗಿವೆ. ಪೂಜನೀಯ ಸ್ಥಾನ ಪಡೆದಿರುವ ಹಲವು ವೃಕ್ಷಗಳು ನಾಡಿನಾದ್ಯಂತ ಜನರಿಗೆ ಪವಿತ್ರವಾಗಿವೆ.

ಅಷ್ಟೇ ಅಲ್ಲದೆ ‘ಕಲ್ಪವೃಕ್ಷ’ ಎಂದು ನಂಬಲಾಗುವ ಈ ವೃಕ್ಷಗಳು ಕೇವಲ ಧಾರ್ಮಿಕ ಮಹತ್ವ ಮಾತ್ರವಲ್ಲದೇ ತಮ್ಮ ರೋಗಪರಿಹಾರಕ ಗುಣಗಳಿಂದಲೂ ಜನರಿಗೆ ಆಪ್ತವಾಗಿವೆ. ವೃಕ್ಷಗಳು-ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನಿಗೆ ಸಮಾನ ಕೆಲವರ ಪ್ರಕಾರ ಪವಿತ್ರ ವೃಕ್ಷಗಳು, ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ರೂಪವಂತೆ. ಇವುಗಳ ಆರಾಧನೆಯು ಈ ಮೂವರ ಆರಾಧನೆಗೆ ಸಮ. ಅದಕ್ಕಾಗಿಯೇ “ಮೂಲತಃ ಬ್ರಹ್ಮ ರೂಪಾಯ:, ಮಧ್ಯತಃ ವಿಷ್ಣು ರೂಪಯೇ,ಅಗ್ರತಃ ಶಿವ ರೂಪಾಯಃ ಶ್ರೀ ವೃಕ್ಷ ರಾಜಯೇ ನಮಃ” ಎನ್ನುವ ಮಂತ್ರವು ಹುಟ್ಟಿಕೊಂಡಿತು. ಇದನ್ನು ಪಠಿಸುವುದರಿಂದ ಆಧ್ಯಾತ್ಮಿಕ ಮೋಕ್ಷ ದೊರೆಯುತ್ತದೆ.

ಹಿಂದೂ ಧರ್ಮದಲ್ಲಿ ಮರಗಳು ಮೂರು ಲೋಕಗಳನ್ನು ಸೇರಿಸುವ ಕೊಂಡಿ ಸ್ವರ್ಗ, ಭೂಮಿ ಮತ್ತು ಪಾತಾಳಗಳೆಂಬ ಮೂರು ಲೋಕಗಳನ್ನು ಸಂಪರ್ಕಿಸುವ ಕೊಂಡಿ ಎಂದು ಪರಿಗಣಿಸಲಾಗಿದೆ. ಈ ಮರಗಳಿಗೆ ನಾವು ಸಮರ್ಪಿಸುವ ನೈವೇಧ್ಯವು ಮೂರು ಲೋಕಗಳಿಗೆ ಸಲ್ಲುತ್ತದೆ ಎಂಬ ಪ್ರತೀತಿ ಮನೆ ಮಾಡಿದೆ.

ದೇವತೆಗಳೇ ಮರಗಳನ್ನು ಪೂಜಿಸುತ್ತಿದ್ದರು ಹಾಗೂ ಯಾವ ವೃಕ್ಷಗಳು ಪ್ರೀತಿಪಾತ್ರವಾದದ್ದು?

ಇಂದ್ರನ ಉದ್ಯಾನವನದಲ್ಲಿ ಮಂದಾರ, ಪಾರಿಜಾತ, ಶಮಂತಕ, ಹರಿಚಂದನ ಮತ್ತು ಕಲ್ಪ ವೃಕ್ಷ ಅಥವಾ ಕಲ್ಪತರು ಎಂಬ ಐದು ವೃಕ್ಷಗಳು ಇವೆಯಂತೆ. ಭಾರತದಲ್ಲಿ ಜನರು ಏಕೆ ಮರಗಳನ್ನು ಪೂಜಿಸುತ್ತಾರೆ ಎಂಬ ಪ್ರಶ್ನೆ ಎದ್ದಾಗ, ಪುರಾಣಗಳಲ್ಲಿ ದೇವತೆಗಳೇ ಮರಗಳನ್ನು ಪೂಜಿಸುತ್ತಿದ್ದ ಉಲ್ಲೇಖಗಳು ನಮಗೆ ದೊರೆಯುತ್ತವೆ.

ಶ್ರೀಗಂಧದ- ಪಾರ್ವತಿಯ ನೆಚ್ಚಿನ ಮರ

ಸುವಾಸನೆ ಹಾಗೂ ಸೌಂದರ್ಯವರ್ಧಕವಾಗಿರುವ ಶ್ರೀಗಂಧದ ಮರವನ್ನು ಪಾರ್ವತಿಯ ನೆಚ್ಚಿನ ಮರವೆಂದು ಹೇಳಲಾಗಿದೆ. ಪಾರ್ವತಿ ಶ್ರೀಗಂಧದ ಕೊರಡನ್ನು ತನ್ನ ಬೆವರಿನೊಂದಿಗೆ ತೇದ ಬಳಿಕ ಪ್ರಾಪ್ತವಾದ ಅರೆಘನರೂಪದ ದ್ರಾವಣದಿಂದ ಗಣೇಶನನ್ನು ಸೃಷ್ಟಿಸಿದಳು ಎನ್ನಲಾಗುತ್ತದೆ. ಈ ನಂಬಿಕೆಯಿಂದ ಇಂದಿಗೂ ಶ್ರೀಗಂಧದ ದ್ರಾವಣವನ್ನು ಹಲವು ದೇವದೇವತೆಗಳ ಪೂಜೆಯಲ್ಲಿ ಬಳಸಲಾಗುತ್ತಿದೆ.

ಬಿಲ್ವಪತ್ರೆ

ಶಿವನಿಗೆ ಅತ್ಯಂತ ಪ್ರಿಯವಾದ ಈ ವೃಕ್ಷದ ಎಲೆಯನ್ನು ಅರ್ಪಿಸುವುದರಿಂದ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು ಎಂಬ ನಂಬಿಕೆಯಿದೆ. ಈ ಮರದ ಎಲೆಯಲ್ಲಿ ಮೂರು ದಳಗಳಿವೆ. ಸೃಷ್ಟಿ, ಸಂರಕ್ಷಣೆ ಹಾಗೂ ವಿನಾಶವನ್ನು ಈ ದಳಗಳು ಪ್ರತಿನಿಧಿಸುತ್ತವೆ ಎಂದು ನಂಬಲಾಗಿದೆ.

ದೈವಿಕ ಶಕ್ತಿ ಹೊಂದಿರುವ ವೃಕ್ಷಗಳು

ಬಿದಿರು

ಶ್ರೀಕೃಷ್ಣನ ಕೊಳಲು ಬಿದಿರಿನಿಂದ ತಯಾರಿಸಿದ್ದುದರಿಂದ ಬಿದಿರು ಮರವನ್ನ ಕೃಷ್ಣ ಪರಮಾತ್ಮನ ನೆಚ್ಚಿನ ವೃಕ್ಷವೆಂದು ಪರಿಗಣಿಸಲಾಗುತ್ತದೆ.

ಭಾಂಗ್ ಮರ

ಶಿವಾಲಯಗಳಿರುವಲ್ಲಿ ಸಾಧುಗಳು ಭಾಂಗ್ ಮರದ ಎಲೆಗಳಿಂದ ಹೊಗೆಸೇವನೆ ಮಾಡುತ್ತಿರುವುದನ್ನು ನೋಡಬಹುದು. ಈ ಮರದ ಎಲೆಗಳು ಅಮಲು ಬರಿಸಿದರೂ ಆವರಣದಲ್ಲಿ ಈ ಮರವಿರುವ ಮನೆಯಲ್ಲಿ ಸದಾ ಸಮೃದ್ಧಿ ಹಾಗೂ ಸಂಪತ್ತು ತುಳುಕುತ್ತಿರುತ್ತದೆ ಎಂದು ನಂಬಲಾಗುತ್ತದೆ. ಮಹಾಶಿವರಾತ್ರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಮರದ ಎಲೆಗಳನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಅಲ್ಲದೇ ಪ್ರಸಾದವನ್ನು ತಯಾರಿಸಲೂ ಈ ಎಲೆಗಳನ್ನು ಬಳಸಲಾಗುತ್ತದೆ.

ಕಲ್ಪವೃಕ್ಷ ಅಥವಾ ತೆಂಗಿನಮರ

ಕರಾವಳಿಯಲ್ಲಿ ಸಮೃದ್ಧವಾಗಿರುವ ತೆಂಗಿನಮರವನ್ನು ಕಡಿಯುವುದು ಅಪಶಕುನ ಎಂದು ಭಾರತದೆಲ್ಲೆಡೆ ನಂಬಲಾಗುತ್ತದೆ. ಈ ವೃಕ್ಷ ಮನೆಯ ಆವರಣದಲ್ಲಿರುವುದು ಶಾಂತಿ ಹಾಗೂ ಸಮೃದ್ಧಿಯ ಸಂಕೇತ ಎಂದು ನಂಬಲಾಗುತ್ತದೆ. ಶಿವನ ಪ್ರತಿನಿಧಿ ಎಂದು ನಂಬಲಾಗುವ ಈ ವೃಕ್ಷದ ಪ್ರತಿಯೊಂದೂ ಭಾಗಗಳು ಹಲವಾರು ಉಪಯೋಗಕ್ಕೆ ಬರುತ್ತವೆ. ತೆಂಗಿನ ಕಾಯಿ ಇಲ್ಲದೆ ಯಾವ ಪೂಜೆಯೂ ನಡೆಯದು. ಮರವಿರುವೆಡೆ ಮನೆ ಕಟ್ಟಿಸಬೇಕಾದರೆ ಮರವನ್ನು ಉರುಳಿಸದೇ ಮರವನ್ನು ಮನೆಯೊಳಗೇ ಬರುವಂತೆ ಕಟ್ಟಿಸುವುದು ಭಾರತೀಯರು ಈ ವೃಕ್ಷದ ಬಗ್ಗೆ ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ……