Breaking News

ಗೋಮಾತೆಯನ್ನು ಪೂಜಿಸುವುದರಿಂದ ಯಾವ ಫಲ ಫಲಿಸುತ್ತದೆ..?

ಗೋಮಾತೆಯ ಪಂಚಾಮೃತ ಹಾಗೂ ಗೋಮೂತ್ರದ ಪವಿತ್ರತೇನು....

SHARE......LIKE......COMMENT......

:

ಹಿಂದೂ ಧರ್ಮದಲ್ಲಿ ಗೋಮಾತೆಗೆ ಪೂಜ್ಯನೀಯ ಸ್ಥಾನವೇಕೆ?

ಹಿಂದೂಗಳಿಗೆ ಗೋವೆಂದರೆ ಮಾತೆ, ದೇವತೆಯ ಸಮಾನ. ಗೋವಿನಲ್ಲಿ ಎಲ್ಲಾ ದೇವದೇವತೆಗಳಿದ್ದಾರೆ ಮತ್ತು ಗೋವು ಕೇಳಿದ್ದನ್ನು ಪರಿಪಾಲಿಸುತ್ತಾಳೆ ಎಂದು ಗೋವನ್ನು ಕಾಮಧೇನು ಎಂದು ಕರೆಯುತ್ತಾರೆ. ಕಾಮಧೇನು ಎಂದರೆ ಬೇಡಿದನ್ನು ಕೊಡುವುದು ಎನ್ನುವ ಅರ್ಥವಿದೆ. ಈ ಕಾಮಧೇನು ಎನ್ನುವ ಪದದ ಬಗ್ಗೆ ಭಗವದ್ಗೀತೆಯಲ್ಲಿ ಉಲ್ಲೇಖವಿದೆ.

ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಧೇನುನಾಮ್ ಆಸ್ಮಿ ಕಾಮಧುಕ ಎನ್ನುತ್ತಾನೆ. ಇದರರ್ಥ ಗೋವುಗಳಲ್ಲಿ ನಾನು ಕಾಮಧುಕ, ಬೇಡಿದನ್ನು ಕೊಡುವ ಗೋವು ಎಂದು. ಕಾಮಧುಕ ಎಂದರೆ ಕಾಮಧೇನು ಎಂದರ್ಥ. ಇದನ್ನೇ ಸುರಭಿ ಎನ್ನಲಾಗುತ್ತದೆ. ಹಾಗಾದರೆ ಸುರಭಿ ಯಾರು ಮತ್ತು ಏನು? ಭಗವಂತ ಶ್ರೀ ಕೃಷ್ಣನ ಶಕ್ತಿಯನ್ನೇ ಪಡೆಯಲು ಈ ಪ್ರಾಣಿಗೆ ಹೇಗೆ ಸಾಧ್ಯವಾಯಿತು? ಈ ಪ್ರಶ್ನೆಗಳಿಗೆ ವೇದವ್ಯಾಸರು ಬರೆದಿರುವ ಮಹಾಭಾರತದ ಅನುಶಾಸನ ಪರ್ವದಲ್ಲಿ ಉತ್ತರವನ್ನು ಕೊಟ್ಟಿದ್ದಾರೆ.

ಸುರಭಿ ಗೋವು ಅಂದರೇನು?

ಆಧ್ಯಾತ್ಮಕ ಲೋಕದಿಂದ ಹೊರಬಂದು ಎಲ್ಲಾ ಜೀವಗಳಿಗೆ ಲಾಭವನ್ನು ಉಂಟುಮಾಡಿದ್ದೇ ಸುರಭಿ ಗೋವು. ಸುರಭಿ ಗೋವಿನಿಂದಲೇ ಭಾರತದ ಗೋವುಗಳು ಹುಟ್ಟಿವೆ. ಇದರಿಂದಾಗಿ ಭಾರತದ ಗೋವುಗಳು ಪೂಜ್ಯನೀಯವಾಗಿದೆ. ಎಲ್ಲಾ ಸೃಷ್ಟಿಗಳಿಗೆ ಮಾತೆಯಾಗಿರುವ ಕಾರಣ ಗೋವನ್ನು ತುಂಬಾ ಪಾವಿತ್ರ್ಯವೆಂದು ಪರಿಗಣಿಸಲಾಗುತ್ತದೆ ಎನ್ನುವುದು ಧರ್ಮಗುರುಗಳ ಅಭಿಮತವಾಗಿದೆ.

33ಕೋಟಿ ದೇವತೆಗಳ, ದೇವತೆಯೆಂದು ಗೋಮಾತೆಯನ್ನು ಏಕೆ ಕರೆಯುತ್ತಾರೆ?

33 ಕೋಟಿ ದೇವತೆಗಳಿಗೂ ಗೋವು ಮಾತೆಯೆನ್ನುವುದು ಪುರಾಣಗಳಲ್ಲಿ ಉಲ್ಲೇಖವಿದೆ. ಗೋವನ್ನು ದೇವತೆಗಳ ದೇವತೆ ಎನ್ನುತ್ತಾರೆ. ಇದರಿಂದಾಗಿಯೇ ಸಾವಿರಾರು ವರ್ಷಗಳಿಂದಲೂ ಗೋವನ್ನು ಪೂಜ್ಯನೀಯವೆಂದು ಪರಿಗಣಿಸಲಾಗಿದೆ ಮತ್ತು ಗೋ ಮಾತೆಯನ್ನು ಪೂಜಿಸಲಾಗುತ್ತಿದೆ. ಗೋ ಮಾತೆಯ ಸೆಗಣಿ, ಮೂತ್ರ ಮತ್ತು ಹಾಲು ಅತೀ ಪಾವಿತ್ರ್ಯವೆಂದು ಪರಿಗಣಿಸಲಾಗಿದೆ. ಗೋವನ್ನು ಅದರ ಕರುವಿನಿಂದ ದೂರ ಮಾಡಬಾರದು. ಒಂದು ವೇಳೆ ಹೀಗೆ ಮಾಡಿದಲ್ಲಿ ಅದು ದೊಡ್ಡ ಪಾಪ ಎಂಬ ನಂಬಿಕೆಯಿದೆ. ಪುರಾತನ ಕಾಲದಲ್ಲಿ ಸೆಗಣಿಯನ್ನು ಕೂಡ ಪೂಜಿಸಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಸೆಗಣಿ ಬಿಡಿ, ಗೋವಿಗೆ ಕೂಡ ಗೌರವ ಸಲ್ಲಿಸುವುದನ್ನು ಮರೆಯುತ್ತಿದ್ದಾರೆ. ಗೋವಿನ ಹಾಲನ್ನು ಪ್ರತಿಯೊಂದು ಹಿಂದೂಗಳು ತಮ್ಮ ಮನೆಯಲ್ಲಿ ಪವಿತ್ರವೆಂದು ಪರಿಗಣಿಸಿ ಬಳಸುತ್ತಾರೆ.

ಗೋಮಾತೆಯ ಪಂಚಾಮೃತ ಹಾಗೂ ಗೋಮೂತ್ರದ ಪಾವಿತ್ರತೇನು?

ಪ೦ಚಗವ್ಯವೆ೦ದೇ ಪ್ರಸಿದ್ಧಿಯನ್ನು ಪಡೆದಿರುವ ಗೋವುಗಳ ಐದು ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ, ಗೋಮೂತ್ರ, ಹಾಗೂ ಗೋಮಯ (ಸೆಗಣಿ) ಇವೆಲ್ಲವುಗಳನ್ನೂ ಕೂಡ ಪೂಜೆಗಳಲ್ಲಿ ಹಾಗೂ ಅತ್ಯ೦ತ ಪವಿತ್ರವಾದ ಯಜ್ಞಯಾಗಾದಿಗಳ೦ತಹ ವಿಧಿಗಳಲ್ಲಿ ಬಳಸುತ್ತಾರೆ. ಕೌಟು೦ಬಿಕ ಗೋವೊ೦ದು ತನ್ನ ಅಮೃತದ೦ತಹ ಹಾಲಿನಿ೦ದ ಕುಟು೦ಬದ ಎಲ್ಲಾ ಮಕ್ಕಳಿಗೆ ಪೋಷಕಾ೦ಶಗಳನ್ನು ಒದಗಿಸಿ ಅವರನ್ನು ಧೃಢಕಾಯರನ್ನಾಗಿ ಬೆಳೆಸುತ್ತದೆ. ಗೋಮಯವು (ಸೆಗಣಿ) ಭಾರತಾದ್ಯ೦ತ ಎಲ್ಲಾ ಕುಟು೦ಬಗಳಲ್ಲಿಯೂ ಬಳಸಲ್ಪಡುವ ಒ೦ದು ಪ್ರಮುಖ ಇ೦ಧನವಾಗಿರುತ್ತದೆ. ಮಾತ್ರವಲ್ಲದೇ, ಗೋವಿನ ತಾಜಾ ಸೆಗಣಿಯು ಖನಿಜಗಳ ಆಗರವಾಗಿದ್ದು, ಇದೊ೦ದು ಉತ್ತಮವಾದ ಸಾವಯವ ಗೊಬ್ಬರವಾಗಿದೆ.

ರೈತನ ಕಾಲದಿಂದಲೂ ಗೋವಿನ ಸೆಗಣಿಯನ್ನು ಪವಿತ್ರವೆಂದು ಕಾಣಲಾಗುತ್ತಿತ್ತು. ಇಂದಿನ ದಿನಗಳಲ್ಲಿ ಹೆಚ್ಚಿನ ಹಿಂದೂಗಳು ತಮ್ಮ ಹಬ್ಬ ಹಾಗೂ ಇತರ ಕೆಲವು ಸಂದರ್ಭಗಳಲ್ಲಿ ಸೆಗಣಿಯನ್ನು ದೇವರ ಕೆಲಸಗಳಿಗೆ ಬಳಸುತ್ತಾರೆ. ಪುರಾಣಗಳಲ್ಲಿ ಇರುವಂತೆ ಮಲಗಿರುವ ಹಸುವನ್ನು ಎಬ್ಬಿಸಬಾರದು. ಇದು ಅದಕ್ಕೆ ಅಗೌರವ ತೋರಿಸಿದಂತೆ. ಹಿಂದೂಗಳ ಮನೆಯಲ್ಲಿ ಹಾಲಿಗೂ ಪಾವಿತ್ರ್ಯತೆಯನ್ನು ಕೊಡಲಾಗಿದೆ. ಅತ್ಯಂತ ಸಾಧು ಸ್ವಭಾವದ ಮತ್ತು ಸುಂದರ ಗೋವುಗಳು ಅಗಾಧ ಶಕ್ತಿಯನ್ನು ಹೊಂದಿದೆ. ಇವುಗಳನ್ನು ಪೂಜಿಸಿದರೆ ನಮಗೆ ಪುಣ್ಯ ಹಾಗೂ ಎದುರಾಗುವಂತಹ ಸಂಕಷ್ಟಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿದೆ.

ಸ೦ಜೀವಿನಿಗೆ ಸಮಾನವಾದ ಗೋವಿನ ಪ೦ಚಾಮೃತ

ಆಯುರ್ವೇದ ವಿಜ್ಞಾನವು ಕೇವಲ ಗಿಡಮೂಲಿಕೆಗಳಿ೦ದಷ್ಟೇ ಗುಣಪಡಿಸಲು ಸಾಧ್ಯವಾಗದ೦ತಹ ಅನೇಕ ಆರೋಗ್ಯ ಸ೦ಬ೦ಧೀ ಪರಿಸ್ಥಿತಿಗಳನ್ನು ಗುರುತಿಸಿದೆ. ಅ೦ತಹ ಆರೋಗ್ಯ ಸ೦ಬ೦ಧೀ ಪರಿಸ್ಥಿತಿಗಳ ಸುಧಾರಣೆಗಾಗಿ, ಪೀಡಿತನಾದ ವ್ಯಕ್ತಿಯ ಪೂರ್ವಜನ್ಮಕ್ಕೆ ಸ೦ಬ೦ಧಿಸಿದ ಪಾಪಕರ್ಮಗಳ ಶುದ್ದೀಕರಣವನ್ನು ಮಾಡಲು ಇ೦ತಹ ವೇದೋಕ್ತವಾದ ಯಜ್ಞಯಾಗಾದಿಗಳಾಧಾರಿತವಾದ ಮತ್ತಷ್ಟು ಗಹನವಾದ ಹಾಗೂ ಸೂಕ್ಷ್ಮವಾದ ಚಿಕಿತ್ಸಾವಿಧಾನಗಳ ಮೊರೆಹೋಗುವುದರ ಅವಶ್ಯಕತೆ ಇರುತ್ತದೆ. ಪವಿತ್ರಳಾದ ಗೋಮಾತೆಯು ಇ೦ತಹ ಸ೦ದರ್ಭಗಳಲ್ಲಿಯೂ ಪ೦ಚಾಮೃತದ ರೂಪದಲ್ಲಿ ತನ್ನ ಉತ್ಪನ್ನಗಳನ್ನು ಒದಗಿಸುವುದರ ಮೂಲಕ ತನ್ನ ಔದಾರ್ಯವನ್ನು ಮೆರೆಯುತ್ತಾಳೆ.

ಪ೦ಚಾಮೃತವು ಒ೦ದು ಅನುಗ್ರಹರೂಪಿಯಾದ ಪಾನೀಯವಾಗಿದ್ದು, ಯಜ್ಞದ ಮುಕ್ತಾಯವಾದ ನ೦ತರ ಪ್ರಸಾದದ ರೂಪದಲ್ಲಿ ಪ೦ಚಾಮೃತವನ್ನು ಹ೦ಚಲಾಗುತ್ತದೆ. ಪ೦ಚಾಮೃತದ ಅರ್ಥವು ಪವಿತ್ರವಾದ ದೇವಪ್ರಸಾದ ಅಥವಾ ದೇವತೆಗಳಿ೦ದ ಅನುಗ್ರಹಿಸಲ್ಪಡುವ ಅಮೃತವೆ೦ದಾಗುತ್ತದೆ. ಹೆಸರೇ ಸೂಚಿಸುವ೦ತೆ ಪ೦ಚಾಮೃತವು ಹಾಲು, ಮೊಸರು, ತುಪ್ಪ, ಜೇನುತುಪ್ಪ, ಹಾಗೂ ಸಕ್ಕರೆ – ಈ ಐದು ವಸ್ತುಗಳಿ೦ದ ಮಾಡಲ್ಪಟ್ಟಿರುತ್ತದೆ. ಈ ಸವಿಯಾದ, ಸಿಹಿಯಾದ ಪ್ರಸಾದವನ್ನು ಸೇವಿಸುವುದರ ಮೂಲಕ, ಪೂಜಾಕಾಲದಲ್ಲಿ ಆವಿರ್ಭವಿಸಿರಬಹುದಾದ ದೈವಿಕ ಚೈತನ್ಯವನ್ನು ವ್ಯಕ್ತಿಯೋರ್ವನು ತನ್ನಲ್ಲಿ ಸೇರಿಸಿಕೊ೦ಡ೦ತಾಗುತ್ತದೆ ಹಾಗೂ ಆ ದೈವಿಕ ಚೈತನ್ಯದ ಬಲದಿ೦ದ ಗುಣಮುಖನಾಗುತ್ತಾನೆ……