Breaking News

ಜನಾಂಗೀಯ ಹಿಂಸಾಚಾರಕ್ಕೆ ಬೆಚ್ಚಿಬಿದ್ದ ಟ್ರಂಪ್​​​..!

ವೈಟ್​ಹೌಸ್​ನಿಂದ ಬಂಕರ್​​ಗೆ ಶಿಫ್ಟ್ ಆದ ಅಮೆರಿಕ ಅಧ್ಯಕ್ಷ....

SHARE......LIKE......COMMENT......

ದೇಶ-ವಿದೇಶ:

ಅಮೆರಿಕದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದೆ. ಕಳೆದ ಶನಿವಾರ ಪೊಲೀಸ್ ಕಸ್ಟಡಿಯಲ್ಲಿದ್ದ ಒಬ್ಬ ಆಫ್ರಿಕಾ ಮೂಲದ ವ್ಯಕ್ತಿ ಮೃತಪಟ್ಟಿದ್ದರು. ಲಾಕಪ್​ ಡೆತ್​, ಪೊಲೀಸ್ ದೌರ್ಜನ್ಯ ಖಂಡಿಸಿ ಸುಮಾರು 12 ನಗರದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ರೊಚ್ಚಿಗೆದ್ದ ಜನ ಸರ್ಕಾರಿ ಕಚೇರಿಗಳು ಸೇರಿದಂತೆ ಅನೇಕ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಯರು-ಕರಿಯರ ನಡುವಿನ ಕಲಹಕ್ಕೆ ಅಮೆರಿಕ ಧಗಧಗ ಹೊತ್ತಿ ಉರಿಯತೊಡಗಿದೆ. ಪರಿಸ್ಥಿತಿ ನಿಯಂತ್ರಿಸಲು ಕರ್ಫ್ಯೂ ವಿಧಿಸಿದರೂ, ಲೆಕ್ಕಿಸದೇ ಹಿಂಸಾಚಾರಕ್ಕಿಳಿದಿದ್ದು, ಪೊಲೀಸರು ಲಾಠಿ ಬಿಸಿದ್ದಾರೆ. ಹಿಂಸಾಚರ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪೊಲೀಸರು ರಬ್ಬರ್ ಬುಲೆಟ್ ಬಳಸಿ, ಹತೋಟಿಗೆ ತರಲು ಯತ್ನಿಸಿದ್ರು. ವಾಟರ್​ ಜೆಟ್ ಬಳಸಿ, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸಪಟ್ರು. 1968 ರಲ್ಲಿ ಸಮಾಜ ಸುಧಾಕರ ಮಾರ್ಟಿನ್ ಲೂಥರ್ ಕಿಂಗ್ ಹತ್ಯೆಯ ಬಳಿಕ ಮೊದಲ ಬಾರಿ ಅಮೇರಿಕದಲ್ಲಿ ಬೃಹತ್ ಪ್ರಮಾಣದ ಹಿಂಸಾಚಾರಕ್ಕೆ ಸಾಕ್ಷಿಯಾಯ್ತು. ಸುಮಾರು 40 ಸಿಟಿಗಳಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಪರಿಸ್ಥಿತಿ ಮೇಲೆ ರಾಷ್ಟ್ರೀಯ ಭದ್ರತಾ ಪಡೆ ನಿಗಾವಹಿಸಿದೆ..