ಬೆಂಗಳೂರು:
ಡಿಸೆಂಬರ್ ತಿಂಗಳು ಬಂತು ಅಂದ್ರೆ ಸಾಕು ಎಲ್ಲೆಲ್ಲೂ ಕ್ರಿಸ್ಮಸ್ ಹಾಗೂ ನ್ಯೂ ಇಯರ್ ಕೇಕ್ಗಳ ಹವಾ ಶುರುವಾಗುತ್ತೆ.. ಅದ್ರಲ್ಲೂ ಕೇಕ್ ಪ್ರಿಯರು ಕೇಕ್ ಶೋ ಯಾವಾಗ ಸ್ಟಾರ್ಟ್ ಆಗುತ್ತೆ ಅಂತ ಕಾತುರದಿಂದ ಕಾಯುತ್ತಿರುತ್ತಾರೆ. ಕೊರೊನ ಬಂದ್ಮೇಲೆ ಯೆಲ್ಲೋ ಆಚೆ ಹೋಗಕ್ಕೆ ಆಗಿಲ್ಲ , ಮನೆಯಲಿದ್ದು ಸಕತ್ ಬೋರ್ ಆಗಿದೆ . ಮಕ್ಕಳು ಕೂಡ ಕೊಂಚ ರಿಲ್ಯಾಕ್ಸ್ ಆಗಬೇಕು ಅಂತ ಕಾಯುತ್ತಿದ್ದಾರೆ ಅನ್ನೋವ್ರಿಗೆಲ್ಲ ಬ್ರೇಕ್ ನೀಡಲು ನಗರದಲ್ಲಿ ಕೇಕ್ ಶೋ ಆರಂಭವಾಗಿದೆ. ಯೆಸ್, ಎಂಟ್ರಿ ಆಗುತ್ತಿದ್ದಂತೆ ಲಯನ್ ಕಿಂಗ್ ಚಿತ್ರದ ಒಂದು ಕೇಕ್ ವಾವ್ ಅನಿಸೋ ಹಾಗೆ ಮಾಡುತ್ತೆ , ಅದರ ಪಕ್ಕದಲ್ಲಿ ಇಟಲಿಯ ವಾಲುವ ಗೋಪುರ ಅಂತೂ ಸೂಪರ್ ಆಗಿದೆ ಅಷ್ಟೇ ಅಲ್ಲ ಕೋರೊನಾ ವೈರಸ್, ನಾಟ್ಯ ದೇವರು ನಟರಾಜ್, ಮದುವೆಯ ಕೇಕ್, ಚಿನ್ನದ ಡ್ರ್ಯಾಗನ್, ಟಾಮ್ ಆ್ಯಂಡ್ ಜೆರಿ, ಗಣಪತಿ ದೇವರು, ಪ್ಯಾರಿಸ್ ಐಫೆಲ್ ಟವರ್ ಹೀಗೆ ಹತ್ತು ಹಲವು ಕಲಾಕೃತಿಗಳು ಕೇಕ್‌ಗಳು ರೂಪದಲ್ಲಿ ಮೂಡಿಬಂದಿವೆ.
ಒಂದೊಂದು ಕೇಕ್ ಕೂಡ ಒಂದೊಂದು ಕಥೆಯನ್ನು ಸಾರಿ ಹೇಳುತ್ತಿದೆ. ಇಂತಹ ಕೇಕ್ ಲೋಕ ಧರೆಗಿಳಿದಿರೋದು ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್ನಲ್ಲಿ ಜನವರಿ 3 ರ ವರೆಗೆ ಕೇಕ್ ಉತ್ಸವವನ್ನು ಆಯೋಜಿಸಲಾಗಿದೆ. ಈ ಪ್ರದರ್ಶನದಲ್ಲಿ ಶುಗರ್ ಸ್ಕಲ್ಪ್ಟ್‌ನ ಸುಮಾರು 60 ಕ್ಕೂ ಹೆಚ್ಚು ನಳಪಾಕ ಪ್ರವೀಣರು, ವಿವಿಧ ಡಿಸೈನ್ಗಳ ಕೇಕ್ಗಳನ್ನ ತಯಾರಿಸಿದ್ದಾರೆ. ಇನ್ನೂ ಕೊರೊನ ಹಿನ್ನೆಲೆ ಒಂದು ಬಾರಿಗೆ ಕೇವಲ 200 ಜನರನ್ನ ಮಾತ್ರ ಪ್ರವೇಶಕ್ಕೆ ಅವಕಾಶವಿದೆ..ಕೋವಿಡ್‌ನಿಂದಾಗಿ ಜನರು ಆರ್ಥಿಕವಾಗಿ ತತ್ತರಿಸಿ ಹೊಗಿರುವುದ್ರಿಂದ ಪ್ರವೇಶ ದರವನ್ನ ಕೊಂಚ ಕಡಿಮೆ ಮಾಡಿಕೊಳ್ಳಲಾಗಿದ್ದು, ಪ್ರವೇಶ ದರದ ಬೆಲೆ 90 ರೂಪಾಯಿ ಮಾಡಲಾಗಿದೆ…….