ಬೆಂಗಳೂರು:
ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಶೀಘ್ರದಲ್ಲೇ 90 ಮೆಟ್ರೋ ಫೀಡರ್ಗಳ ಬಸ್ಗಳು ಸಂಚಾರ ಶುರು ಮಾಡಲಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಮೆಟ್ರೋ ಫೀಡರ್ ಬಸ್ಗಳಿಗೆ ಅನುಮೋದನೆ ಸಿಕ್ಕ ಹಿನ್ನಲೆ ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ಬಸ್ಗಳು ಸಂಚರಿಸಲಿವೆ. ಈಗಾಗಲೇ ಟೆಂಡರ್ ಪ್ರಕಿಯೆ ಮುಗಿದಿದ್ದು, ಬಸ್ಗಳಿಗಾಗಿ ಬಿಎಂಆರ್ಸಿಎಲ್ ವತಿಯಿಂದ ಅಗತ್ಯ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮೆಟ್ರೋ ಮಾರ್ಗಗಳಿಂದ ಹತ್ತಿರದ ಬಡಾವಣೆಗಳಿಗೆ ಮೆಟ್ರೋ ಫೀಡರ್ ಬಸ್ ಗಳ ಕಾರ್ಯಾಚರಣೆ ನಡೆಯಲಿದ್ದು ನಗರದ ಸಾರಿಗೆ ಅಭಿವೃದ್ಧಿಗಾಗಿ ಬಿಎಂಟಿಸಿ ಹಾಗೂ ಬಿಎಂಆರ್ಸಿಎಲ್ ನಿಂದ ಉತ್ತಮ ವ್ಯವಸ್ಥೆ ಇದಾಗಿದೆ. ಎರಡನೇ ಹಂತದ ಮೆಟ್ರೋ ಸಂಚಾರ ಆರಂಭವಾದ್ರೂ ಮೆಟ್ರೋ ನಿಲ್ದಾಣಗಳಿಗೆ ಹೊಗಲು ಬರಲು ಯಾವುದೇ ಸಮಸ್ಯೆಯಿಲ್ಲ. ಮೆಟ್ರೋ ಫೀಡರ್ ಬಸ್ಗಳಿಗಾಗಿ ಬಿಎಂಆರ್ಸಿಎಲ್ ವತಿಯಿಂದ ಅಗತ್ಯ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಟ್ರಾಫಿಕ್ ಕಡಿಮೆ ಮಾಡಲು ಈ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದ ಮೆಟ್ರೋ ಪ್ರಯಾಣಿಕರು ಖಾಸಗಿ ವಾಹನ ಬಿಟ್ಟು ಬಸ್ಸಿನಲ್ಲಿ ಸಂಚರಿಸಬಹುದು……