Breaking News

ರಾಜ್ಯದಲ್ಲಿ ಶೀಘ್ರ ಶಾಲೆ ಆರಂಭ ಇನ್ನೆರಡು ದಿನದಲ್ಲಿ ಫೈನಲ್ ನಿರ್ಧಾರ..!

ಜನವರಿ 1 ರಿಂದ ಶಾಲೆ ಪ್ರಾರಂಭ....

SHARE......LIKE......COMMENT......

ಬೆಂಗಳೂರು:

ಶಾಲೆ ಪ್ರಾರಂಭಕ್ಕೆ ತಜ್ಞರ ತಂಡ ಸಲಹೆ ನೀಡಿದ್ದು, ಶಾಲೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜನವರಿ 1 ರಿಂದ ಶಾಲೆ ಪ್ರಾರಂಭ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಎರಡು ದಿನಗಳಲ್ಲಿ ಸಿಎಂ ಯಡಿಯೂರಪ್ಪ ಜೊತೆ ಸಭೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು. ಶಾಲಾ ಪ್ರಾರಂಭ ಅಂತಿಮ ನಿರ್ಧಾರ ಸಿಎಂ ತೆಗೆದುಕೊಳ್ಳುತ್ತಾರೆ. SSLC ಮತ್ತು 2 PUC ತರಗತಿ ಮೊದಲು ಪ್ರಾರಂಭ ಮಾಡುತ್ತೇವೆ ಎಂದು ಹೇಳಿದ್ದು, ನಂತರ ಉಳಿದ ತರಗತಿ‌ ಪ್ರಾರಂಭ ಕುರಿತು ನಿರ್ಧಾರ ಮಾಡುವುದಾಗಿ ಶಿಕ್ಷಣ ಇಲಾಖೆ ಹೇಳಿದೆ.

ಶಾಲಾ ಪ್ರಾರಂಭದ ವೇಳೆ ತಾಂತ್ರಿಕ ಸಮಿತಿ‌ ಕೊಟ್ಟ ಮಾರ್ಗಸೂಚಿ ಪಾಲನೆ ಮಾಡುತ್ತೇವೆ. ಈ ವರ್ಷ ಪರೀಕ್ಷೆ ಸ್ವಲ್ಪ ತಡವಾಗಿ ಜೂನ್ ಜುಲೈನಲ್ಲಿ ನಡೆಸುತ್ತೇವೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯ ನೀಡಿ, ತೊಂದರೆ ಆಗದಂತೆ ವೇಳಾಪಟ್ಟಿ ರಚನೆ ಮಾಡುತ್ತೇವೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. ವಿದ್ಯಾಗಮ ಮತ್ತಷ್ಟು ಮುಂಜಾಗ್ರತಾ ಕ್ರಮದಿಂದ ಪ್ರಾರಂಭ ಆಗುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳನ್ನು ಮನಸ್ಸಲ್ಲಿ ಇಟ್ಟುಕೊಂಡು ಪ್ರಾರಂಭ ಮಾಡಲಾಗುತ್ತಿದೆ.

ತಜ್ಞರ ವರದಿ ಮೇಲೆ ಮತ್ತೆ ಕಾರ್ಯಕ್ರಮ ಜಾರಿಗೆ ತರಲಾಗುತ್ತದೆ. ಖಾಸಗಿ ಶಾಲೆಗಳು ಫೀಸ್ ಗಾಗಿ ಡಿಮ್ಯಾಂಡ್ ಮಾಡುತ್ತಿರುವ ವಿಚಾರದ ಬಗ್ಗೆಯೂ ಈಗಾಗಲೇ ಅವರ ಜೊತೆ ಮಾತಾಡಿದ್ದೇನೆ. ನಿಮ್ಮ ಮತ್ತು ಮಕ್ಕಳ ಪೋಷಕರ ಜೊತೆ ಉತ್ತಮ ಭಾಂದವ್ಯ ಇರಬೇಕು. ಆ ರೀತಿ ನೋಡಿಕೊಳ್ಳಿ ಎಂದು ಹೇಳಿದ್ದೇನೆ ಎಂದರು. ಶಾಲಾ ಕಾಲೇಜು ಪ್ರಾರಂಭವಾದ್ರೆ ಮಕ್ಕಳಿಗೆ ಕೋವಿಡ್ ಟೆಸ್ಟ್ ಮಾಡಿಸಬೇಕು. ಇದರ ಬಗ್ಗೆ ಚರ್ಚೆ ಮಾಡಿ ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು……