Breaking News

ರೆಬೆಲ್​​ ಪುತ್ರನ ಚಿತ್ರಕ್ಕೆ ಯಜಮಾನ ಸಾಥ್..!

ದರ್ಶನ್ ಜತೆ ಅಭಿಷೇಕ್ ಡ್ಯಾನ್ಸ್.....

SHARE......LIKE......COMMENT......

ಸಿನಿಮಾ:

ಅಂಬಿ ಪುತ್ರನ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್​ ದರ್ಶನ್ ಸಾಥ್ ನೀಡುತ್ತಿದ್ದಾರೆ.ಹೌದು,ಚಾಲೆಂಜಿಂಗ್ ಸ್ಟಾರ್​ ದರ್ಶನ್​​ ಅವರ ಸಾಕಷ್ಟು ಚಿತ್ರಗಳಲ್ಲಿ ರೆಬೆಲ್ ಸ್ಟಾರ್ ಅಂಬರೀಶ್​ ನಟಿಸಿದ್ದಾರೆ. ಈ ಮೂಲಕ ದರ್ಶನ್ ಗೆ ಅಂಬಿ ಸಾಥ್​ ನೀಡಿದ್ದರು. ಈಗ ದರ್ಶನ್ ಅಮರ್ ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ. ನಟ ದೇವರಾಜ್ ಹಾಗೂ ನಿರೂಪ್ ಭಂಡಾರಿ ಸಿಕ್ವೇನ್ಸ್​​ನ ಹಾಡಿನಲ್ಲಿ ದರ್ಶನ್ ಜತೆ ಅಭಿಷೇಕ್ ಡ್ಯಾನ್ಸ್ ಮಾಡಿದ್ದಾರೆ.

ಇದರ ಜತೆಗೆ ಚಿತ್ರದಲ್ಲಿ ದಾಸ ಖಡಕ್ ಡೈಲಾಗ್ ಕೂಡ ಹೊಡೆದಿದ್ದಾರೆ. ಈ ಹಾಡಿಗೆ ಧನಂಜಯ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಸಂದೇಶ್ ಪ್ರೋಡಕ್ಷನ್ಸ್ ಅದ್ಧೂರಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ನಿರ್ದೇಶಕ ನಾಗಶೇಖರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಒಟ್ಟಾರೆ ದರ್ಶನ್ ಅಪ್ಪಾಜಿ ಮಗನ ಸಿನಿಮಾಕ್ಕೆ ಸಾಥ್ ನೀಡ್ತಾ ಇರೋದು ಅಭಿಮಾನಿಗಳಿಗೆ ಖುಷಿ ತಂದಿದೆ…..