Breaking News

ಮನೆಯ ವಾಸ್ತುವಿಗೂ ಹಾಗೂ ಬಣ್ಣಗಳಿಗೆ ಏನು ಸಂಭಂಧ..?

ಯಾವ ಬಗೆಯ ಬಣ್ಣ ಮನೆಗೆ ಐಶ್ವರ್ಯ ತರುತ್ತದೆ....

SHARE......LIKE......COMMENT......

ಧರ್ಮ-ಜ್ಯೋತಿ:

ಆಕಾಶದಲ್ಲಿ ಕಾಮನಬಿಲ್ಲು ಗೋಚರಿಸುವುದು ಬೆಳಕಿನ ವಕ್ರೀಭವನ ಕ್ರಿಯೆಯಿಂದ ಎಂಬುದು ಹೆಚ್ಚಿನವರಿಗೆ ಗೊತ್ತಿರುವ ವಿಚಾರವಾಗಿದೆ. ತುಂತುರು ಮಳೆ ಬರುತ್ತಾ ಜೊತೆಗೆ ಬಿಸಿಲು ಬಂದರೆ ಒಂದೊಂದು ಬಾರಿ ಕಾಮನ ಬಿಲ್ಲು ಸಾಮಾನ್ಯವಾಗಿ ಗೋಚರಿಸುತ್ತದೆ. ಅದರಲ್ಲಿ ಏಳು ಬಣ್ಣ ಕಾಣುತ್ತದೆ.

ಏಳು ಬಣ್ಣಗಳ ಕಾಮನ ಬಿಲ್ಲಿಗೆ ಸುರಚಾಪ, ಇಂದ್ರಚಾಪ, ಮಳೆಬಿಲ್ಲು, ಕಾಮನಬಿಲ್ಲು ಮುಂತಾದ ಹೆಸರುಗಳಿವೆ. ಇದರಲ್ಲಿರುವ ಪ್ರಮುಖ ಬಣ್ಣಗಳೆಂದರೆ-ಕೆಂಪು, ಹಸಿರು, ಹಳದಿ, ಕಿತ್ತಳೆ, ನೀಲಿ, ನೇರಳೆ, ಆಕಾಶನೀಲಿ ಬಣ್ಣಗಳಿವೆ. ಕೆಂಪು ಅಭಿವೃದ್ದಿ, ಅಪಾಯದ ಸೂಚಕ, ಹಸಿರು ಸಮೃದ್ದಿಯ ಸಂಕೇತ, ಹಳದಿ ಭೂರಮೆಯ ಮೈಬಣ್ಣ, ಕಿತ್ತಳೆ ತ್ಯಾಗದ ಪ್ರತೀಕ, ನೀಲಿ ಭಾವೈಕ್ಯತೆಯ ಸಂಕೇತ, ನೇರಳೆ ಆತ್ಮೀಯ ಬಾಂಧವ್ಯಕ್ಕೆ ಕಾರಣವಾಗುವಂತಹದು. ಆಕಾಶನೀಲಿ ಪ್ರಶಾಂತತೆಯನ್ನು ತರುವಂತಹುದಾಗಿದೆ. ಮಳೆಗಾಲದ ಸಂದರ್ಭದಲ್ಲಿ ಆಗಸದಲ್ಲಿ ಗೋಚರಿಸುವ ನಯಮನೋಹರ ದೃಶ್ಯವೇ ಕಾಮನಬಿಲ್ಲಾಗಿದೆ. ಗ್ರಹಗಳ ಬಣ್ಣಗಳ ಬಳಕೆಯನ್ನು ಬಣ್ಣದ ಥೆರಪಿ ಎಂದು ಕರೆಯಲಾಗುತ್ತದೆ.

ಯಾವ ಬಣ್ಣಗಳು ಯಾವ ರೀತಿ ಆಲೋಚನೆ ವ್ಯಕ್ತಪಡಿಸುತ್ತದೆ?.

1. ನೀಲಿ:  ಪ್ರಶಾಂತತೆಯ ಪ್ರತೀಕವಾಗಿದ್ದು,  ಆನಂದ ಮತ್ತು ಮನಸ್ಸಿಗೆ ಉಲ್ಲಾಸ ನೀಡುತ್ತದೆ.

2. ಹಸಿರು: ಇದರ ಪ್ರಭಾವ ನಿಧಾನವಾದರೂ ಈ ಬಣ್ಣದಿಂದ ಶಾಂತಿ, ನೆಮ್ಮದಿ, ವಿಶ್ರಾಂತಿ ಲಭ್ಯ.

3. ನೇರಳೆ: ಇದು ಮನಸ್ಸಿಗೆ ಪ್ರಶಾಂತತೆಯ ಅನುಭವ ನೀಡುತ್ತದೆ.

4. ಹಳದಿ: ಇದು ಶಕ್ತಿಶಾಲಿಯ ಸಂಕೇತ ಮತ್ತು ವ್ಯಾಮೋಹ ವರ್ಧನೆಯಾಗಿದ್ದು, ಮನಸ್ಥಿತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

5. ಕೆಂಪು: ಈ ಬಣ್ಣ ಭಾವೋದ್ವೇಗ ಹೆಚ್ಚಿಸುತ್ತದೆ.

6. ಕಿತ್ತಳೆ: ಸಾಮಾನ್ಯವಾಗಿ ಕಿತ್ತಳೆ ಬಣ್ಣ ಮನಸ್ಸಿನ ಭಾವನೆ, ವರ್ತನೆಗಳ ಮೇಲೆ ನೇರವಾಗಿ ಪರಿಣಾಮ ಬೀರುವುದಲ್ಲದೆ ಈ ಬಣ್ಣವು ತೀಕ್ಷ್ಣ ಸ್ವಭಾವ ಹಾಗೂ ಸೌಹಾರ್ದ ರೂಪವನ್ನು ಪಡೆದಿದೆ. ಇದರಿಂದ ವ್ಯಾಮೋಹ ಕೂಡ ಹೆಚ್ಚಾಗುತ್ತದೆ.

ಬಣ್ಣಗಳು ನಮ್ಮ ಭಾವನೆಗಳು ಹಾಗೂ ಆಲೋಚನೆಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ತಜ್ಞರು ಸಹ ಅಭಿಪ್ರಾಯ ಪಟ್ಟಿದ್ದು, ಬಣ್ಣದ ಮೂಲಕ ನಮ್ಮ ದಿನನಿತ್ಯದ ಜೀವದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಸ್ವತಃ ನಾವೇ ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದು ಎಂದಿದ್ದಾರೆ. ತಜ್ಞರ ಪ್ರಕಾರ ವಾರದ 7 ದಿನಗಳಲ್ಲಿ ಧನಾತ್ಮಕ ಪರಿಣಾಮ ಬೀರುವ ಬಣ್ಣಗಳು ಈ ಕೆಳಕಂಡಂತಿವೆ.

ಯಾವ ಬಣ್ಣಗಳು ಹೆಚ್ಚು ಧನಾತ್ಮಕ ಪರಿಣಾಮ ಬೀರುತ್ತದೆ?

1. ಬಿಳಿ ಬಣ್ಣ ಶುದ್ಧತೆ, ವಿವೇಕ, ಪವಿತ್ರ ಧಾರ್ಮಿಕ
2. ಕೆಂಪು ಕಂದುಬಣ್ಣ ತ್ಯಾಗ, ಲೈಂಗಿಕತೆ.ಭೂಮಿ
3. ಹಸಿರು ಫಲವತ್ತತೆ, ನವೀಕರಣ, ಆಸ್ತಿ
4. ಹಳದಿ ನೇರಳೆ ಜ್ಞಾನೋದಯ.ಕ್ರೀಯಾಶೀಲತೆ, ಸಂಕೋಚ.
5. ನೀಲಿ ರಹಸ್ಯ, ಐಂದ್ರಜಾಲಿಕ ಶಕ್ತಿ, ಕಲಾತ್ಮಕ ಪ್ರತಿಭೆ

ಯಾವ ಬಣ್ಣದ ಜಪದ ಮಣಿಗಳ ಯಾವ ಸಂಕೇತಗಳನ್ನ ಸೂಚಿಸುತ್ತದೆ?

ಬಣ್ಣದ ಥೆರಪಿಯಲ್ಲಿ ಬಣ್ಣದ ಜಪದ ಮಣಿಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಈ ಬಣ್ಣದ ಜಪದ ಮಣಿಗಳಿಂದ ನಮ್ಮ ಮನಸ್ಸು, ಭಾವನೆಗಳು, ಕೋಪ, ದ್ವೇಷಗಳು ನಿಯಂತ್ರಣಕ್ಕೆ ಸಿಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಈ ಬಣ್ಣದ ಜಪದ ಮಣಿಗಳ ಸಂಕೇತಗಳನ್ನು ಈ ಕೆಳಕಂಡಂತೆ ನಾವು ನೋಡಬಹುದು.

1. ಬಿಳಿ ಬಣ್ಣ: ಮನಸ್ಸಿಗೆ ಶಾಂತಿ ನೀಡುವುದಲ್ಲದೇ, ಜ್ಞಾನವನ್ನು ವೃದ್ಧಿಸುತ್ತದೆ.

2. ಕಿತ್ತಳೆ ಬಣ್ಣ: ತ್ವರಿತ ಫಲಿತಾಂಶ, ಅಪಾಯಕಾರಿ ಸನ್ನಿವೇಶದಿಂದ ನಮ್ಮನ್ನು ದೂರವಿಡುತ್ತದೆ. ಅಲ್ಲದೆ, ಶತ್ರುಗಳನ್ನು ಜಯಿಸುವ ಶಕ್ತಿಯನ್ನು ನೀಡುತ್ತದೆ.

3. ಹಸಿರು ಬಣ್ಣ: ಗಣಿತ, ವಾಣಿಜ್ಯ, ಸಂವಹನ, ಕಾನೂನು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿನ ಜನರಿಗೆ ಸಹಾಯಕವಾಗಲಿದೆ.

4. ಸ್ಪಟಿಕ: ಪ್ರೀತಿ ಪ್ರೇಮದ ಭಾವನೆಗಳನ್ನು ವೃದ್ಧಿಸುತ್ತದೆ. ಅಲ್ಲದೆ. ಐಶಾರಾಮಿ ಜೀವನ ಹಾಗೂ ವೈವಾಹಿಕ ಜೀವನವನ್ನು ಸುಖಕರವಾಗಿರುವಂತೆ ಮಾಡುತ್ತದೆ.

5. ಕಂದು ಬಣ್ಣ: ಹಾದಿಯನ್ನು ಯಶಸ್ವಿಗೊಳಿಸುವಂತೆ ಮಾಡುತ್ತದೆ.

6. ಬೂದು ಬಣ್ಣ: ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನಿಯಂತ್ರಿಸುವಂತೆ ಮಾಡುತ್ತದೆ.

ಯಾವ ಬಗೆಯ ಬಣ್ಣ ಮನೆಗೆ ಐಶ್ವರ್ಯ?

ಪ್ರತಿಯೊಂದು ಬಣ್ಣ ತನ್ನದೇ ಆದ ಅರ್ಥವನ್ನು ಹೊಂದಿರುತ್ತದೆ. ಆದ್ದರಿಂದ ಹೊಸ ಮನೆಗೆ ಪೇಯಿಂಟ್ ಮಾಡಿಸುವ ಮೊದಲು ಯಾವ ಬಣ್ಣ ಯಾವ ರೀತಿಯ ಅರ್ಥವನ್ನು ಹೊಂದಿದೆ ಎಂದು ತಿಳಿಯೋಣ.

1. ಕೆಂಪು ಬಣ್ಣ: ಕೆಂಪು ಬಣ್ಣ ಶಕ್ತಿಯ ಸಂಕೇತವಾಗಿದೆ. ಆದ್ದರಿಂದ ಅನೇಕ ಮನೆಗಳಲ್ಲಿ ಕೆಂಪು ಬಣ್ಣವನ್ನು ಉಪಯೋಗಿಸುತ್ತಾರೆ. ಆದರೆ ಬೆಡ್ ರೂಮಿಗೆ ಈ ಬಣ್ಣ ಬಳಸದಿರುವುದು ಒಳ್ಳೆಯದು. ಈ ಬಣ್ಣ ಬೆಡ್ ರೂಮಿನಲ್ಲಿದ್ದರೆ ವಿಶ್ರಾಂತಿ ಮತ್ತು ಮನಸ್ಸಿಗೆ ನೆಮ್ಮದಿ ದೊರಕುವುದಿಲ್ಲ.

2. ಕಿತ್ತಳೆ: ಈ ಬಣ್ಣವನ್ನು ಮನೆಯೊಳಗೆ ಬಳಸದಿರುವುದು ಒಳ್ಳೆಯದು. ಏಕೆಂದರೆ ಇದು ರೂಮಿನ ಸೆಕೆಯನ್ನು ಮತ್ತಷ್ಟು ಹೆಚ್ಚು ಮಾಡುವುದು. ಗೋಡೆಯಲ್ಲಿ ಚಿತ್ರವನ್ನು ಬರೆಯಲು ಒಳ್ಳೆಯ ಬಣ್ಣವಾಗಿದೆ.

3.ಹಳದಿ: ಹಳದಿ ಅದೃಷ್ಟದ ಸಂಕೇತ. ಹಳದಿ ಬಣ್ಣದ ಪೇಯಿಂಟ್ ಇದ್ದರೆ ಆ ಮನೆಯ ಜನರು ಸಂತೋಷವಾಗಿ ಇರುತ್ತಾರೆ ಎಂದು ನಂಬಲಾಗಿದೆ. ಸ್ವಲ್ಪ ಕತ್ತಲೆ ಇರುವ ಕೋಣೆಗೆ ಈ ರೀತಿಯ ಪೇಯಿಂಟ್ ಮಾಡಿದರೆ ರೂಮ್ ಅಷ್ಟು ಕತ್ತಲೆಯಾಗಿ ಕಾಣುವುದಿಲ್ಲ.

4. ಹಸಿರು: ಹಸಿರು ಅಭಿವೃದ್ಧಿಯ ಸಂಕೇತ. ಮನೆಯಲ್ಲಿನ ಲೀವಿಂಗ್ ರೂಮಿಗೆ ತೆಳು ಹಸಿರು ಬಣ್ಣದ ಪೇಯಿಂಟ್ ತುಂಬಾ ಸೂಕ್ತವಾಗಿದೆ.

5. ನೇರಳೆ ಅಥವಾ ಗುಲಾಬಿ: ಮಕ್ಕಳಿಗೆ ಈ ಬಣ್ಣ ತುಂಬಾ ಇಷ್ಟವಾಗುವುದು. ಆದ್ದರಿಂದ ಮಕ್ಕಳ ಬೆಡ್ ರೂಮಿನಲ್ಲಿ ಮತ್ತು ಓದುವ ರೂಮಿನಲ್ಲಿ ಬಳಸಲು ಸೂಕ್ತವಾದ ಬಣ್ಣ ಇದಾಗಿದೆ.

6. ನೀಲಿ: ಬೆಡ್ ರೂಮ್ ನಲ್ಲಿ ಬಳಸಲು ಸೂಕ್ತವಾದ ಬಣ್ಣವಾಗಿದೆ. ಈ ಬಣ್ಣವಿದ್ದರೆ ಅದನ್ನು ನೋಡಿದಾಗ ಮನ ಶಾಂತವಾಗುವುದು. ಆದರೆ ಈ ಬಣ್ಣವನ್ನು ಡೈನಿಂಗ್ ರೂಮ್ ನಲ್ಲಿ ಬಳಸಬಾರದು. ಇದು ಡೈನಿಂಗ್ ರೂಮಿನಲ್ಲಿದ್ದರೆ ಊಟ ಬೇಗನೆ ಸಾಕೆನಿಸುವುದು ಮತ್ತು ಈ ಬಣ್ಣ ನೋಡುತ್ತಿದ್ದರೆ ಅಡುಗೆ ರುಚಿ ಅನಿಸುವುದಿಲ್ಲ……