ಬೆಂಗಳೂರು:
ರಾಜ್ಯ ಚುನಾವಣಾ ಆಯೋಗ ಇಂದು ಗ್ರಾಮ ಪಂಚಾಯ್ತಿ ಎಲೆಕ್ಷನ್ ದಿನಾಂಕವನ್ನ ಅಧಿಕೃತ ಘೋಷಣೆ ಮಾಡಿದೆ. ಎರಡು ಹಂತದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಲಿದ್ದು, ಮೊದಲ ಹಂತದಲ್ಲಿ 113 ತಾಲೂಕಿನ 2930 ಪಂಚಾಯ್ತಿಗೆ ಎಲೆಕ್ಷನ್, ಎರಡನೇ ಹಂತದಲ್ಲಿ 113 ತಾಲೂಕಿನ 2832 ಪಂಚಾಯ್ತಿಗೆ ಎಲೆಕ್ಷನ್ ನಡೆಯಲಿದೆ. ಈ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಒಟ್ಟು 95121 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಡಿಸೆಂಬರ್ 22ರಂದು ಮೊದಲ ಹಂತಕ್ಕೆ ಚುನಾವಣೆ ಹಾಗೂ ಡಿಸೆಂಬರ್ 27ಕ್ಕೆ ಎರಡನೇ ಹಂತದ ಎಲೆಕ್ಷನ್ ನಡೆಯಲಿದೆ.
ಮೊದಲ ಹಂತದ ಗ್ರಾಮ ಪಂಚಾಯ್ತಿ ಎಲೆಕ್ಷನ್
*ಮೊದಲ ಹಂತಕ್ಕೆ ಡಿಸೆಂಬರ್ 7ರಂದು ನಾಮಪತ್ರ ಸಲ್ಲಿಕೆ ಆರಂಭ,
*ಡಿಸೆಂಬರ್ 11ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
*ಡಿಸೆಂಬರ್ 14ರಂದು ನಾಮಪತ್ರ ವಾಪಸ್ಗೆ ಅವಕಾಶ
*ಡಿಸೆಂಬರ್ 22 ರಂದು ಮೊದಲ ಹಂತದ ಎಲೆಕ್ಷನ್-
*ಡಿಸೆಂಬರ್-30ರಂದು ಪಂಚಾಯ್ತಿ ಎಲೆಕ್ಷನ್ ಕೌಂಟಿಂಗ್…
ಎರಡು ಹಂತದ ಗ್ರಾಮ ಪಂಚಾಯ್ತಿ ಎಲೆಕ್ಷನ್
*ಎರಡನೇ ಹಂತಕ್ಕೆ ಡಿಸೆಂಬರ್ 7ರಂದು ನಾಮಪತ್ರ ಸಲ್ಲಿಕೆ ಆರಂಭ
*ಡಿಸೆಂಬರ್ 16ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
*ಡಿಸೆಂಬರ್ 19ರಂದು ನಾಮಪತ್ರ ವಾಪಸ್ಗೆ ಅವಕಾಶ
*ಡಿಸೆಂಬರ್ 17ರಂದು ನಾಮಪತ್ರ ಪರಿಶೀಲನೆ
*ಡಿಸೆಂಬರ್ 27 ರಂದು ಎರಡನೇ ಹಂತದ ಎಲೆಕ್ಷನ್
*ಡಿಸೆಂಬರ್-30ರಂದು ಪಂಚಾಯ್ತಿ ಎಲೆಕ್ಷನ್ ಕೌಂಟಿಂಗ್…….