Breaking News

ಡಾ.ರಾಜ್​​ ಫ್ಯಾಮಿಲಿಯಲ್ಲಿ ಶುರುವಾಗ್ತಿದೆ ಸಿನಿಮಾ ಪರ್ವ..!

ದೊಡ್ಮನೆ ಮಕ್ಕಳ ಬ್ಯಾಕ್​​ ಟು ಬ್ಯಾಕು ಸಿನಿಮಾಗಳಿಗೆ ಗ್ರೀನ್​ ಸಿಗ್ನಲ್​​....

SHARE......LIKE......COMMENT......

ಬೆಂಗಳೂರು:

ಡಾ.ರಾಜ್​ಕುಮಾರ್​​ ಕನ್ನಡ ಚಿತ್ರರಂಗದಲ್ಲಿ ನಟಿಸಿ ಮೇರುನಟನಾಗಿ ಮಿಂಚಿ, ಅದೆಷ್ಟೋ ಜನಕ್ಕೆ ಸ್ಪೂರ್ತಿಯಾದ್ರು. ಅಪ್ಪ ಹೇಳಿದ ಹಾದಿಯಲ್ಲೇ ಹೆಜ್ಜೆ ಹಾಕ್ತಿರೋ, ರಾಜಣ್ಣನ ಮೂರು ಮುತ್ತುಗಳು ಸಹ ಬಣ್ಣ ಹಚ್ಚಿ, ಪ್ರೇಕ್ಷಕರನ್ನ ಸೆಳೆಯುತ್ತಿದ್ದಾರೆ. ಅಣ್ಣಾವ್ರಂತೆ ವರ್ಷಕ್ಕೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರ್ತಾರೆ. ಇದ್ರಂತೆ ಹೊಸ ವರ್ಷಕ್ಕೆ ದೊಡ್ಮನೆ ಫ್ಯಾಮಿಲಿಯಿಂದ ಬೆಳ್ಳಿತೆರೆ ಮೇಲೆ ಬರೋ ಸಿನಿಮಾಗಳೆಷ್ಟು ಗೊತ್ತಾ..? ಆ ಸಿನಿಮಾಗಳ ಸಂಖ್ಯೆ ಕೇಳಿದ್ರೆ ನೀವೆ ಶಾಕ್​ ಆಗ್ತೀರಾ..?

ವರನಟ ಡಾ.ರಾಜ್​​ಕುಮಾರ್​ ಈ ಹೆಸ್ರು ಯಾರಿಗೆ ಗೊತ್ತಿಲ್ಲ ಹೇಳಿ..ಯಾರೇ ಕೇಳಿದ್ರು ನಮ್ಮ ಅಣ್ಣಾವ್ರು ಅಂತ ಎದೆ ತಟ್ಟಕೊಂಡು ಹೇಳ್ತಾರೆ. ಯಾಕಂದ್ರೆ ಅಂದಿನಕಾಲದಲ್ಲಿ ಡಾ.ರಾಜ್ ಗತ್ತು-ಗಮತ್ತು ಹಾಗಿತ್ತು. ಇಂದಿನ ಕಾಲದಲ್ಲಿಯೂ ಸಹ ಅದೇಷ್ಟೋ ಜನರಿಗೆ ಅಣ್ಣಾವ್ರೇ ಸ್ಪೂರ್ತಿ.​ ನಟನೆಯಲ್ಲಿ ಸಕಲಕಲಾವಲಭ, ಮಾತಿನಲ್ಲಿ ಚತುರ. ಭಾರತೀಯ ಚಿತ್ರರಂಗದ ಮೇರು ಕಲಾವಿದ, ನಟಸಾರ್ವಭೌಮ. ಹೀಗೆ ರಾಜಣ್ಣನ ಒಂದೊಂದು ಕಲೆಯ ನಟನೆಯು ಕನ್ನಡ ಚಿತ್ರರಂಗದಲ್ಲಿ ಅತ್ಯದ್ಭುತವಾಗಿತ್ತು. ತನ್ನ ವಿಭಿನ್ನ ನಟನೆಯ ಮೂಲಕ, 200ಕ್ಕೂ ಅಧಿಕ ಸಿನಿಮಾಗಳಲ್ಲಿ ಪ್ರೇಕ್ಷಕರನ್ನ ರಂಜಿಸಿ, ಅಭಿಮಾನಿಗಳನ್ನು ದೇವರು ಎಂದು ಕರೆದ ಹೃದಯವಂತರು. ಬಣ್ಣದ ಲೋಕದಲ್ಲಿ ಒಂದಂತೂ ನಿಜ ರಾಜ್​ ನಟನೆಗೆ ಸರಿಸಾಟಿ ಯಾರು ಇಲ್ಲ. ಹೀಗೆ ಅಪ್ಪನ ಹಾದಿಯಲ್ಲಿಯೇ ಮಕ್ಕಳು ಎಂಬಂತೆ ರಾಜ್​ ಮೂವರು ಮಕ್ಕಳು ಸಾಗುತ್ತಿದ್ದಾರೆ.

ಅಪ್ಪ ಹೆಜ್ಜೆ ಇಟ್ಟಿರೋ ದಾರಿಯಲ್ಲಿಯೇ ಮಕ್ಕಳು ಬಣ್ಣ ಹಚ್ಚಿ, ಅಭಿಮಾನಿ ದೇವರುಗಳನ್ನ ರಂಜಿಸುತ್ತಾ ಬರ್ತಿದ್ದಾರೆ. ಅದ್ರಲೂ ಕೊರೋನಾ ಅನ್ನೋ ಮಹಾಮಾರಿ ದೇಶದ ಜೊತೆಗೆ ಬಣ್ಣದ ಲೋಕವನ್ನು ನಡುಗಿಸಿಬಿಟ್ಟಿದೆ. ಇದ್ರಿಂದ ಎಲ್ಲರು ಮನೆಯಲ್ಲಿ ಲಾಕ್​ಡೌನ್​ ಆಗಿ ಕಾಲ ಕಳೆಯುತ್ತಿದ್ದಾರೆ. ದೊಡ್ಮನೆ ಮಕ್ಕಳು ಮಾತ್ರ ಡಿಫರೆಂಟ್​ ಕಥೆ ಕೇಳುತ್ತಾ. ಯಾವ ಕಥೆಗೆ ಬಣ್ಣ ಹಚ್ಚಿ, ಅಭಿಮಾನಿಗಳನ್ನ ರಂಜಿಸಬಹುದು ಅಂತ ಯೋಚನೆ ಮಾಡಿ, ಬ್ಯಾಕ್​​ ಟು ಬ್ಯಾಕು ಸಿನಿಮಾಗಳಿಗೆ ಗ್ರೀನ್​ ಸಿಗ್ನಲ್​​ ಕೊಟ್ಟಿದ್ದಾರೆ.

ಅಬ್ಬಬ್ಬಾ ನಟನಾ ಕಲಾಕಾರ್ ಫ್ಯಾಮಿಲಿ ಅಂದ್ರೆ ಅದು ಓನ್​ ಎಂಡ್​ ಓನ್ಲಿ ಡಾ.ರಾಜ್​ ಕುಮಾರ್​ ಫ್ಯಾಮಿಲಿ. ಇವ್ರ ಕುಟುಂಬದಲ್ಲಿ ಎಲ್ಲಾರು ಕಲಾದೇವಿಯ ಪುತ್ರರೇ, ಹೀಗಾಗಿ ಈ ಕುಟುಂಬದಲ್ಲಿ ಎಲ್ಲರು ಕಲೆಯಲ್ಲಿ ಪರಿಣಿತರೆ. ಯೆಸ್​​ ಇಷ್ಟೇಲ್ಲ ಪೀಟಿಕೆ ಹಾಗ್ತಿದ್ದಿವಿ ಅಂದ್ರೆ ನಿಮ್ಮಗೆ ಈಗಾಗಲೇ ಗೊತ್ತಾಗಿರಬೇಕು ಯಾರ್​ ಬಗ್ಗೆ ಹೇಳ್ತಿದ್ದೀವಿ ಅಂತ. ನಾವು ಹೇಳ್ತಿರೋದು ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್​​, ರಾಘವೇಂದ್ರ ರಾಜ್​ಕುಮಾರ್​​ ಹಾಗೂ ಪುನೀತ್​  ರಾಜ್​ಕುಮಾರ್​​.ರಾಜಣ್ಣನ ಮಕ್ಕಳ ಚಿತ್ರಗಳ ಜೊತೆ ಮೊಮ್ಮಕಳಾ ಸಿನಿಮಾ ಕೂಡ ಮುಂದಿನ ವರ್ಷ ಬ್ಯಾಕ್​ ಟು ಬ್ಯಾಕ್​ ರಿಲೀಸ್​ ಆಗಲಿದೆ.

ಮುಂದಿನ ವರ್ಷ ಶಿವಣ್ಣ, ‘ಭಜರಂಗಿ-2’ ಹಾಗೂ ‘ಶಿವಪ್ಪ’ ಸಿನಿಮಾ ಮೂಲಕ ಬಿಗ್​ ಸ್ಕ್ರೀನ್​​ ಮೇಲೆ, ಡಿಫರೆಂಟ್​​ ಗೆಟಪ್​ನಲ್ಲಿ ಮ್ಯಾಜಿಕ್​ ಮಾಡ್ತಾರೆ. ​ಇದರ ಜೊತೆಗೂ ಹೊಸ ಹೊಸ ಕಥೆಗಳನ್ನು ಕೇಳಿ, ಒಂದೇರಡು ಸಿನಿಮಾಗಳಿಗೆ ಹಸಿರು ಬಾವುಟ ಹಾರಿಸಿದ್ದಾರೆ.

ರಾಘಣ್ಣನಿಗೆ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಏರುಪೇರಾಗಿದ್ರು ಕೂಡ, ಬಣ್ಣ ಹಚ್ಚುವುದನ್ನ ಬಿಟ್ಟಿಲ್ಲ. ವರ್ಷದಲ್ಲಿ ಒಂದೇರಡು ಸಿನಿಮಾದಲ್ಲಿ ನಟಿಸಿ, ಪ್ರೇಕ್ಷಕರನ್ನ ರಂಜಿಸ್ತಾರೆ. ಇದ್ರಂತೆ ಈ ವರ್ಷವು ಸಹ ‘ರಾಜತಂತ್ರ’ ಹಾಗೂ ‘ಆಡಿಸಿದಾತ’ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ಅಂದ್ರೆ ಹೊಸ ವರ್ಷದಲ್ಲಿ ಈ ಎರೇಡು ಸಿನಿಮಾಗಳು, ಥಿಯೇಟರ್​ಗೆ ಲಗ್ಗೆ ಇಡಲಿದೆ.

ಅಪ್ಪು ಅಭಿಮಾನಿಗಳಿಗೆ ಪುನೀತ್​​​, ಮುಂದಿನ ವರ್ಷ ‘ಯುವರತ್ನ’, ‘ಜೇಮ್ಸ್​​’ ಜೊತೆಗೆ ಹೊಸ ಸಿನಿಮಾಗಳ ಮೂಲಕ ರಸದೌತಣ ನೀಡಲಿದ್ದಾರೆ. ವಿಭಿನ್ನ ಸ್ಟೋರಿ ಹಾಗೂ ಖಡಕ್​​ ಲುಕ್​​, ಖದರ್​​ ಡೈಲಾಗ್​ ಮೂಲಕ ಪುನೀತ್​ ಸಿನಿಮಾಗಳು ಬೆಳ್ಳಿತೆರೆ ಮೇಲೆ ಹಬ್ಬ ಮಾಡೋದು ಪಕ್ಕಾ.. ಯಾಕಂದ್ರೆ ಈ ಸಿನಿಮಾಗಳು ಹತ್ತು ಹಲವು ವಿಶೇಷತೆಗಳಿಂದ ರಿಲೀಸ್​ಗು ಮುನ್ನವೇ, ಸಖತ್​​ ಸದ್ದು ಸುದ್ದಿ ಮಾಡ್ತಿದೆ……