ಸಿನಿಮಾ:
ಅದ್ದೂರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಬಹುನಿರೀಕ್ಷಿತ ‘ಆದಿಪುರುಷ್’ ಸಿನಿಮಾದ ಬಗ್ಗೆ ಪ್ರಭಾಸ್ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಆ ನಿರೀಕ್ಷೆಯನ್ನು ಡಬಲ್ ಮಾಡುವಂತಹ ಸುದ್ದಿ ಈಗ ಕೇಳಿಬಂದಿದೆ. ‘ಬಾಹುಬಲಿ’ ಬಳಿಕ ಪ್ರಭಾಸ್ ನಟನೆಯ ಎಲ್ಲ ಸಿನಿಮಾಗಳು ದೊಡ್ಡ ಮಟ್ಟದಲ್ಲಿಯೇ ತಯಾರಾಗುತ್ತಿವೆ. ಈಗ ಅವರು ‘ಆದಿಪುರುಷ್’ ಚಿತ್ರದ ಕಡೆಗೆ ಗಮನ ಹರಿಸಿದ್ದಾರೆ. ಬಜೆಟ್ ಮಾತ್ರವಲ್ಲದೆ ಪಾತ್ರವರ್ಗದ ಕಾರಣಕ್ಕಾಗಿ ಈ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.
ರಾಮಾಯಣ ಕಥೆ ಆಧಾರಿತ ಈ ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ಇತರ ಪ್ರಮುಖ ಪಾತ್ರಗಳ ಆಯ್ಕೆ ಪ್ರಕ್ರಿಯೆ ಭರದಿಂದ ಸಾಗಿದೆ. ಈಗಾಗಲೇ ತಿಳಿದಿರುವಂತೆ ನಟ ಸೈಫ್ ಅಲಿ ಖಾನ್ ಅವರು ಚಿತ್ರತಂಡದ ಭಾಗವಾಗಿದ್ದಾರೆ. ರಾಮಾಯಣದ ಅತಿ ಮುಖ್ಯ ಪಾತ್ರಗಳಲ್ಲಿ ಒಂದಾದ ರಾವಣನ ಪಾತ್ರವನ್ನು ಅವರು ನಿಭಾಯಿಸುವುದು ಖಚಿತ ಆಗಿದೆ. ಈ ಬಗ್ಗೆ ಚಿತ್ರತಂಡವೇ ಕೆಲ ದಿನಗಳ ಹಿಂದೆ ಅಧಿಕೃತವಾಗಿ ಘೋಷಣೆ ಮಾಡಿದೆ. ಇನ್ನು, ಶಿವನ ಪಾತ್ರ ಮಾಡುವುದು ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ ಈಗ ಅಜಯ್ ದೇವ್‌ಗನ್ ಹೆಸರು ಕೇಳಿಬರುತ್ತಿದೆ. ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ಬಾಲಿವುಡ್ ನಿರ್ದೇಶಕ ಓಂ ರಾವುತ್……