Breaking News

ಅಮಿತ್ ಶಾ, ಮತ್ತು ಸರ್ಕಾರದ ವಿರುದ್ಧ ಆಕ್ರೋಶ..!

ಭದ್ರಾವತಿಯಲ್ಲಿ ಅನಾವರಣಗೊಂಡ ಅಡಿಗಲ್ಲು ಫಲಕದಲ್ಲಿ ಕನ್ನಡದ ಕಡೆಗಣನೆ....

SHARE......LIKE......COMMENT......

ಬೆಂಗಳೂರು:

ಎರಡು ದಿನಗಳ ಕರ್ನಾಟಕ ಭೇಟಿಗೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ ನಿನ್ನೆ ಭದ್ರಾವತಿಯಲ್ಲಿ ಕ್ಷಿಪ್ರ ಕಾರ್ಯ ಪಡೆ (RAF)ನ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿರುವ ಬೆನ್ನಲ್ಲೇ ಇದೀಗ ಅಮಿತ್ ಶಾ, ಮತ್ತು ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಶಿವಮೊಗ್ಗದ ಭದ್ರಾವತಿಯಲ್ಲಿ RAF ಘಟಕಕ್ಕೆ ಗೃಹ ಸಚಿವ ಅಮಿತ್ ಶಾ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಆದರೆ ಅಲ್ಲಿ ಅನಾವರಣಗೊಂಡ ಅಡಿಗಲ್ಲು ಫಲಕದಲ್ಲಿ ಕನ್ನಡದ ಕಡೆಗಣನೆ ಮಾಡಲಾಗಿದೆ. ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಅಡಿಗಲ್ಲು ಫಲಕ ಹಾಕಲಾಗಿದ್ದು ಇನ್ನು ಇಲ್ಲಿ ಕನ್ನಡವನ್ನು ಕಡೆಗಣಿಸಿರುವುದು ನಿಚ್ಚಳವಾಗಿ ಕಂಡುಬರುತ್ತಿದೆ.

ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸರ್ಕಾರದ ಈ ಕನ್ನಡ ವಿರೋಧಿ ಧೋರಣೆಯ ಬಗ್ಗೆ ನೆಟ್ಟಿಗರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಕನ್ನಡಕ್ಕೆ ಅನೇಕ ಸಾಹಿತಿಗಳು, ಕುವೆಂಪುರಂತಹಾವರನ್ನುಕೊಟ್ಟ ನಾಡು,ಅನೇಕ ಹೋರಾಟಗಾರರನ್ನು ನೀಡಿರುವ ನಾಡಿನಲ್ಲಿ ಹಿಂದಿ ಹೇರಿಕೆ ನಡೆದಿರುವುದು, ಅಂತಹಾ ಮಹಾನ್ ಚೇತನಗಳಿಗೆ ಮಾಡಿರುವ ಅಪಮಾನ ಎಂದಿದ್ದಾರೆ. ಇನ್ನು ಈ ಬಗ್ಗೆ ಅನೇಕ ರಾಜಕಾರಣಿಗಳೂ ದನಿ ಎತ್ತಿದ್ದು ಟ್ವೀಟ್​ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ…..