ಬೆಂಗಳೂರು:
ರಾಕಿಂಗ್ ಸ್ಟಾರ್ ಯಶ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಆದ್ರೆ ಕೊರೋನಾ ಹಾವಳಿ ಹಿನ್ನಲೆ ಈ ಅದ್ಧೂರಿ ಸಂಭ್ರಮಕ್ಕೆ ಬ್ರೇಕ್ ಹಾಕಿದ ಯಶ್. ನನ್ನ ಹುಟ್ಟುಹಬ್ಬದ ದಿನ ಅಭಿಮಾನಿಗಳು ಮನೆ ಹತ್ರ ಬರಬೇಡಿ, ಇರೋ ಕಡೆಯಿಂದ್ಲೇ ವಿಶ್ ಮಾಡಿ ಅಂತ ಯಶ್ ಮನವಿ ಮಾಡಿದ್ದಾರೆ. ನೆಚ್ಚಿನ ನಟನ ಕೈ ಕುಲುಕಿ ವಿಶ್ ಮಾಡೋಕೆ ಸಾಧ್ಯವಾಗ್ತಿಲ್ಲ, ಅನ್ನೋ ಬೇಸರದ ನಡುವೆ ಕೆಜಿಎಫ್ ಚಾಪ್ಟರ್-2 ಟೀಸರ್ ಬರ್ತಿದೆ ಅನ್ನೋ ಖಷಿ ಅಭಿಮಾನಿಗಳಲ್ಲಿದೆ. ರಾಕಿಂಗ್ ಸ್ಟಾರ್ ಯಶ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 35ನೇ ವಸಂತಕ್ಕೆ ಕಾಲಿಟ್ಟ ರಾಕಿಭಾಯ್ ಈ ವರ್ಷ ಕೊರೋನಾವಿರುವ ಕಾರಣ ಅದ್ಧೂರಿ ಬರ್ತಡೇಗೆ ಬ್ರೇಕ್ ಹಾಕಿದ್ದಾರೆ. ಅಭಿಮಾನಿಗಳಲ್ಲಿ ನೀವು ಇರುವ ಕಡೆಯಿಂದಲೇ ನನಗೆ ಶುಭಾಶಯ ಕೋರಿ, ಅಂತ ಮನವಿ ಮಾಡಿದ್ದಾರೆ. ನಿಮಗೇನಾದ್ರು ಆದ್ರೆ, ನನಗೆ ನೋವಾಗುತ್ತೆ ಅಂತ ಹೇಳಿದ್ದಾರೆ.
ಇಷ್ಟೇ ಅಲ್ಲ ತನ್ನ ನೆಚ್ಚಿನ ಸ್ಟಾರ್ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಕೆ ಆಗದ ಕಾರಣ, ಯಶ್ ಬರ್ತಡೇ ಪ್ರಯುಕ್ತ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗದವರು ಬೆಂಗಳೂರಿನ ಗೌಡನ ಪಾಳ್ಯ ಶ್ರೀನಿವಾಸ ಚಿತ್ರಮಂದಿರದಲ್ಲಿ, ಕೆಜಿಎಫ್-2 ಟೀಸರ್ ಹಾಗೂ 2021ನೇ ಸಾಲಿನ ಕ್ಯಾಲೆಂಡರ್ ರಿಲೀಸ್ ಮಾಡುವ ಮೂಲಕ, ದೊಡ್ಡ ಮಟ್ಟದಲ್ಲಿ ಹುಟ್ಟುಹಬ್ಬವನ್ನ ಸೆಲಬ್ರೇಟ್ ಮಾಡಿದ್ದಾರೆ. ಒಟ್ನಲ್ಲಿ ಈ ವರ್ಷ ರಾಕಿಂಗ್ ಸ್ಟಾರ್ ಯಶ್ ತನ್ನ ಬರ್ತಡೇಯನ್ನ ಗ್ರ್ಯಾಂಡ್ ಆಗಿ ಸೆಲಬ್ರೇಟ್ ಮಾಡದಿದ್ರು. ಅವರ ಅಭಿಮಾನಿಗಳು ಸ್ವಲ್ಪ ಮಟ್ಟಿಗೆ ಗ್ರ್ಯಾಂಡ್ ಆಗಿ ಸೆಲಬ್ರೇಟ್ ಮಾಡಿದ್ದಾರೆ……