Breaking News

ಬೆಂಡೇಕಾಯಿ ಗೊಜ್ಜುಹುಳಿ..

ಡಯಾಬಿಟಿಸ್ ನಿಯಂತ್ರಣಕ್ಕೆ ತುಂಬಾ ಉಪಯುಕ್ತ.....

SHARE......LIKE......COMMENT......

ಅಡುಗೆ:

ಆರೋಗ್ಯ ಕಾಪಾಡಿಕೊಳ್ಳಲು ತರಕಾರಿಗಳ ಸೇವನೆ ಮುಖ್ಯವಾಗುತ್ತದೆ. ಬೆಂಡೇಕಾಯಿ ಇದು ಡಯಾಬಿಟಿಸ್ ನಿಯಂತ್ರಣಕ್ಕೆ ತುಂಬಾ ಉಪಯುಕ್ತ. ಬೆಂಡೇಕಾಯಿ ಗೊಜ್ಜು ಹುಳಿ ಮಾಡುವ ಸುಲಭ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು:

1. ಹೆಚ್ಚಿದ ಬೆಂಡೇಕಾಯಿ – 2 ಕಪ್
2. ಕೊಬ್ಬರಿ ತುರಿ -1 ಕಪ್
3. ಒಣಮೆಣಸಿನಕಾಯಿ -6 ರಿಂದ 7
4. ಕೊತ್ತಂಬರಿ – 2 ಚಮಚ
5. ಕಡಲೇಬೇಳೆ – 1 ಚಮಚ
6. ಉದ್ದಿನಬೇಳೆ -1 ಚಮಚ
7. ಕರಿಬೇವಿನಸೊಪ್ಪು – 6 ರಿಂದ 7 ಎಸಳು
8. ಬೆಲ್ಲ -ಕಾಲು ಕಪ್
9. ಹುಣಸೇಹಣ್ಣಿನ ರಸ – ಕಾಲು ಕಪ್
10. ಎಣ್ಣೆ – 3 ಚಮಚ
11. ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

* ಮೊದಲು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಕೊತ್ತಂಬರಿ ಬೀಜ, ಮೆಣಸಿನಕಾಯಿ, ಕಡಲೇಬೇಳೆ, ಉದ್ದಿನಬೇಳೆ, ಕರಿಬೇವಿನಸೊಪ್ಪು ಹಾಕಿ ಹುರಿದುಕೊಳ್ಳಿ.
* ಬಳಿಕ ಅದನ್ನು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಕೊಬ್ಬರಿ ತುರಿ ಸೇರಿಸಿ ರುಬ್ಬಿಕೊಳ್ಳಿ.
* ಮತ್ತೊಂದೆಡೆ ಬಾಣಲೆಗೆ ಎಣ್ಣೆ ಹಾಕಿ ಹೆಚ್ಚಿದ ಬೆಂಡೇಕಾಯಿಯನ್ನು ಹಾಕಿ ಸಣ್ಣ ಉರಿಯಲ್ಲಿ 10 ನಿಮಿಷ ಹುರಿದುಕೊಳ್ಳಿ.
* ಅದಕ್ಕೆ ಸ್ವಲ್ಪ ಬಿಸಿನೀರನ್ನು ಸೇರಿಸಿ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಬಿಡಿ. ಬಳಿಕ ಬೆಂಡೇಕಾಯಿಗೆ ರುಬ್ಬಿದ ಮಿಶ್ರಣವನ್ನು ಸೇರಿಸಿ.
* ಕೊನೆಗೆ ಹುಣಸೇಹಣ್ಣಿನ ರಸವನ್ನು ಸೇರಿಸಿ ಸ್ವಲ್ಪ ಸಮಯ ಕುದಿಸಿದರೆ ಬೆಂಡೇಕಾಯಿ ಗೊಜ್ಜುಹುಳಿ ಸವಿಯಲು ಸಿದ್ಧ…..