Breaking News

ಉತ್ತಮ ಉದ್ಯೋಗ ಪಡೆಯಲು ಯಾವ ದೇವರನ್ನ ಒಲಿಸಿಕೊಳ್ಳಬೇಕು..?

ಯಾವ ದೇವರನ್ನ ಪೂಜಿಸಿದರೆ ನಿಮ್ಮ ಕನಸಿನ ಉದ್ಯೋಗ ನಿಮ್ಮದಾಗುತ್ತೆ....

SHARE......LIKE......COMMENT......

ಧರ್ಮ-ಜ್ಯೋತಿ:

ಹಿಂದೂ ಪುರಾಣಗಳ ಪ್ರಕಾರ ಒಟ್ಟು ಮೂವತ್ತಮೂರು ಕೋಟಿ ದೇವತೆಯರಿದ್ದಾರೆ. ಪ್ರತಿ ದೇವತೆಗೂ ಒಂದೊಂದು ಶಕ್ತಿಯಿದ್ದು ವಿಶೇಷ ಪಾತ್ರವನ್ನು ವಹಿಸುತ್ತಾರೆ. ಉದಾಹರಣೆಗೆ ಲಕ್ಷ್ಮಿ ಎಂದರೆ ಧನದೇವತೆ. ಸರಸ್ವತಿ ಎಂದರೆ ವಿದ್ಯಾದೇವತೆ. ಅಂತೆಯೇ ಧನ ಬೇಕಾದರೆ ಲಕ್ಷ್ಮಿಯನ್ನೂ ವಿದ್ಯೆ ತಲೆಗೆ ಹತ್ತಬೇಕಾದರೆ ಸರಸ್ವತಿಯನ್ನೂ ಒಲಿಸಿ ಕೊಳ್ಳುವಂತೆ ಹೇಳಲಾಗುತ್ತದೆ. ಆದರೆ ಇಂದಿನ ದಿನದಲ್ಲಿ ಕೇವಲ ಧನ ಅಥವಾ ವಿದ್ಯೆ ಇದ್ದರೆ ಮಾತ್ರ ಸಾಲದು, ಈ ವಿದ್ಯೆಯನ್ನು ಬಳಸಿಕೊಳ್ಳಬಲ್ಲಂತಹ ಉದ್ಯೋಗವೂ ಬೇಕು.

ಉತ್ತಮ ಉದ್ಯೋಗ ಪಡೆಯಲು ಯಾವ ದೇವರನ್ನ ಒಲಿಸಿಕೊಳ್ಳಬೇಕು?

ಗಣೇಶ

ಗಣೇಶ ಗಣನಾಯಕನೂ ಹೌದು, ವಿಘ್ನನಿವಾರಕನೂ ಹೌದು. ಅಂತೆಯೇ ಯಾವುದಾದರೂ ಹೊಸದನ್ನು ಪ್ರಾರಂಭಿಸುವಾಗ ಯಾವುದೇ ವಿಘ್ನಗಳು ಬಾರದಂತೆ ಗಣೇಶನನ್ನು ಪೂಜಿಸಿಯೇ ಕಾರ್ಯಾರಂಭಗೊಳಿಸಲಾಗುತ್ತದೆ.

ಗಣೇಶ ದೇವರನ್ನು ಮೊದಲು ಪೂಜಿಸಲು ಕಾರಣಗಳೇನು?

“ಓಂ ಗಂ ಗಣೇಶಾಯಃ ನಮಃ” ಅಂತೆಯೇ ಗೃಹಪ್ರವೇಶ, ಹೊಸ ವಾಹನ, ಹೊಸ ವ್ಯಾಪಾರ ಮೊದಲಾದವುಗಳ ಪ್ರಾರಂಭದ ಪೂಜೆ ಗಣೇಶನಿಗೆ ಮೀಸಲು. ಆದ್ದರಿಂದ ನಿಮ್ಮ ಉದ್ಯೋಗದ ಸಂದರ್ಶನದ ದಿನದಂದು ಗಣೇಶ ಮಂತ್ರವನ್ನು ಪಠಿಸಿ ಹೊರಡಿ. ಮಂತ್ರವೇನೂ ಕಷ್ಟದ್ದಲ್ಲ. “ಓಂ ಗಂ ಗಣೇಶಾಯಃ ನಮಃ” ಎಂದರೆ ಸಾಕು.

ದೇವಿ ಲಕ್ಷ್ಮಿ

ಈಕೆ ಕೇವಲ ಧನದ ದೇವತೆ ಮಾತ್ರವಲ್ಲ, ಉತ್ತಮ ಭವಿಷ್ಯ ನೀಡುವ ದೇವತೆಯೂ ಆಗಿದ್ದಾಳೆ. ಈಕೆಯನ್ನು ಒಲಿಸಿಕೊಂಡರೆ ಮನೆಗೆ ಧನಾಗಮನವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಸಾಮಾನ್ಯವಾಗಿ ಮನೆತನವನ್ನು ಆಧರಿಸಿ ಗುರುವಾರ ಅಥವಾ ಶುಕ್ರವಾರದಂದು ಲಕ್ಷ್ಮೀಪೂಜೆಯನ್ನು ನೆರವೇರಿಸಲಾಗುತ್ತದೆ. ಈ ಸಂದರ್ಭವನ್ನು ನಿಮ್ಮ ಉದ್ಯೋಗ ಪಡೆಯಲು ಉಪಯೋಗಿಸಿಕೊಂಡು ಸಂದರ್ಶನ ಮುನ್ನದಿನದಲ್ಲಿ ಪ್ರಾರ್ಥಿಸುವ ಮೂಲಕ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ.

ದೇವಿ ಸರಸ್ವತಿ

ವಿದ್ಯೆ, ಕಲೆ, ಸಂಗೀತ ಮೊದಲಾದವುಗಳಿಗೆ ಸರಸ್ವತಿ ದೇವಿಯನ್ನು ಆರಾಧಿಸಬೇಕು. ಇಂದು ಉದ್ಯೋಗ ಪಡೆಯಬೇಕೆಂದರೆ ವಿದ್ಯೆ ಅತ್ಯಂತ ಅಗತ್ಯವಾಗಿದೆ. ಆದ್ದರಿಂದ ವಿದ್ಯಾವಂತರಾಗಿ ಉದ್ಯೋಗವರಸಲು ಹೊರಡುವ ಮುನ್ನ ಸರಸ್ವತಿಯನ್ನು ಆರಾಧಿಸಿ ಬಿಳಿಯ ಹೂಗಳನ್ನು ಅರ್ಪಿಸಿ ಹೊರಡುವ ಮೂಲಕ ಮುಂದಿನ ಕಾರ್ಯಗಳು ಸುಗಮವಾಗುತ್ತವೆ.

ಉದ್ಯೋಗಕ್ಕೆ ಎಲ್ಲಾ ದೇವತೆಗಳನ್ನು ಆರಾಧಿಸಲೇಬೇಕು ಎಂದೇನಿಲ್ಲ ನಿಮಗೆ ಸೂಕ್ತ ಎನಿಸಿದ ಎರಡು ದೇವತೆಗಳಿಗೆ ಪೂಜೆ ಸಲ್ಲಿಸಿದರೆ ಸಾಕು. ಇದರಿಂದ ನಿಮಗೆ ಮನಸ್ಸಿನಲ್ಲಿ ದೊರಕುವ ಬೆಂಬಲ ಮತ್ತು ನಿರಾಳತೆ ಉದ್ಯೋಗ ಪಡೆಯಲು ನೆರವಾಗುತ್ತದೆ. ಆದರೆ ದೇವರು ನಿಮ್ಮ ಪ್ರಯತ್ನಗಳಿಗೆ ಬೆಂಬಲ ನೀಡುತ್ತಾರೆಯೇ ಹೊರತು ಬೇರೇನನ್ನೂ ಅಲ್ಲ. ಆದ್ದರಿಂದ ಉದ್ಯೋಗ ಪಡೆಯುವ ಮುನ್ನ ಸೂಕ್ತವಾದ ತಯಾರಿ ಮಾಡಿಕೊಂಡೇ ಹೊರಡಬೇಕು……