Breaking News

‘ಒಡೆಯ’ ಚಿತ್ರದ ಲಿರಿಕ್ಸ್​ಗೆ ಡಿ ಬಾಸ್ ಫ್ಯಾನ್ಸ್​ ಫಿದಾ..!

ಒಡೆಯ ಆಲ್ಬಮ್​​ನ ಫಸ್ಟ್​​ ಸಾಂಗ್​ ರಿಲೀಸ್....

SHARE......LIKE......COMMENT......

ಬೆಂಗಳೂರು: 

ಮೋಸ್ಟ್​ ಅವೇಟೆಡ್​ ಒಡೆಯ ಆಲ್ಬಮ್​​ನ ಫಸ್ಟ್​​ ಸಾಂಗ್​ ರಿಲೀಸ್​ ಆಗಿದೆ. ಚಿತ್ರದಲ್ಲಿ ನಾಯಕ ಗಜೇಂದ್ರನನ್ನು ಹಾಡಿ ಹೊಗಳುವ ಸಾಂಗಿದು. ಖಡಕ್​ ಸ್ಟಿಲ್​​ಗಳನ್ನು ಮಾಂಟೇಜ್​​ ಮಾಡಿ ‘ಹೇ ಒಡೆಯಾ, ಬಾ ಒಡೆಯಾ’ ಎನ್ನೋ ಸೌಂಡಿಂಗ್​​ ಲಿರಿಕಲ್​​ ವೀಡಿಯೋ ಸಾಂಗ್​ನ ರಿಲೀಸ್​ ಮಾಡಿದೆ ಚಿತ್ರತಂಡ. ಪರಿಚಯದ​ ಸಾಂಗ್​​ನಲ್ಲಿ ಒಡೆಯ ಆರ್ಭಟ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಹೇ ಒಡೆಯಾ ಬಾ ಒಡೆಯಾ’ ಅಂತ ಕೂಗಿ ಕೂಗಿ ಕರೆಯುತ್ತಿದ್ದಾರೆ. ಡಿ ಹಾರ್ಟ್​​ ಕೂಗಿಗೆ ಓಗೊಟ್ಟು ಬಂದಿರೋ ಒಡೆಯ, ದರ್ಬಾರ್​ ಶುರು ಮಾಡಿದ್ದಾನೆ.ಚಾಲೆಂಜಿಂಗ್​​ ಸ್ಟಾರ್​ ದರ್ಶನ್​ ಊರಿನ ಘನತೆವತ್ತ ನಾಯಕನಾಗಿ ಬಣ್ಣ ಹಚ್ಚಿರುವ ಸಿನಿಮಾ ಒಡೆಯ. ಆ ಊರಿಗೆ ಇವನ ಮಾತೇ ವೇದವಾಕ್ಯ. ಒಡೆಯನ ಗತ್ತು, ಗೈರತ್ತು ಎಂಥದ್ದು ಅನ್ನುವುದನ್ನು ಈ ಹಾಡಿನಲ್ಲಿ ಬಣ್ಣಿಸಲಾಗಿದೆ.

ಒಡೆಯ ಸಿನಿಮಾದಲ್ಲಿ ಗಜೇಂದ್ರ ಬ್ರದರ್ಸ್‌ ಟ್ರೇಡರ್ಸ್‌ ಅಂಡ್‌ ಟ್ರಾನ್ಸ್‌ಪೋರ್ಟ್‌ ಮಾಲೀಕನಾಗಿ ದರ್ಶನ್‌ ಕಾಣಿಸಿಕೊಂಡಿದ್ದಾರೆ. ನಾಲ್ಕು ಜನ ಸಹೋದರರ ನೆಚ್ಚಿನ ಅಣ್ಣನಾಗಿ ಒಡೆಯ ದರ್ಬಾರ್​ ಮಾಡಲು ಬರ್ತಿದ್ದಾರೆ. ಟೀಸರ್​​ ಮತ್ತು ಟೈಟಲ್​ ಸಾಂಗ್​ನಿಂದ ಒಡೆಯ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಒಡೆಯ ಸಿನಿಮಾ ಡಿಸೆಂಬರ್​ನಲ್ಲಿ ಪ್ರೇಕ್ಷಕರ ಎದುರಿಗೆ ಬರಲಿದೆ……