ಬೆಂಗಳೂರು:
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸೋಂಕು ಬಹಳ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 10 ಸಾವಿರ ದಾಟಿದೆ. 9523 ಹೊಸ ಕೇಸ್‌ಗಳು ಪತ್ತೆಯಾಗಿವೆ. ಸದ್ಯ ರಾಜ್ಯದಲ್ಲಿ 1.20 ಲಕ್ಷ ಸಕ್ರಿಯ ಕೊರೊನಾ ಕೇಸ್‌ಗಳಿವೆ. ಇವರಲ್ಲಿ 904 ಮಂದಿ ತೀವ್ರ ನಿಗಾ ವಿಭಾಗದಲ್ಲಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಒಂದೇ ದಿನ 26 ಮಂದಿ ಸಾವನ್ನಪ್ಪಿದ್ಧಾರೆ. ಮಹಾರಾಷ್ಟ್ರ, ತಮಿಳುನಾಡು ನಂತರ ಕರ್ನಾಟಕದಲ್ಲಿ ಮಾತ್ರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದೊಂದು ರೀತಿ ಆತಂಕಕಾರಿ ಬೆಳವಣಿಗೆ……