Breaking News

121 ಉಗ್ರರನ್ನು ಬಂಧಿಸಿದ ಪಾಕ್..!

ಪಾಕ್ ಆಂತರಿಕ ಸಚಿವಾಲಯ ಪ್ರಕಟಣೆ.....

SHARE......LIKE......COMMENT......

ಇಸ್ಲಾಮಾಬಾದ್:

ಪುಲ್ವಾಮ ಉಗ್ರ ದಾಳಿಯ ನಂತರ ಅಂತಾರಾಷ್ಟ್ರೀಯ ಸಮುದಾಯದಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪಾಕಿಸ್ತಾನ,100ಕ್ಕೂ ಹೆಚ್ಚು ಉಗ್ರ ಸಂಘಟನೆಗಳ ಕಾರ್ಯಕರ್ತರು ಬಂಧಿಸಿದ್ದು,182 ಮದರಸಾಗಳನ್ನು ಸರ್ಕಾರದ ನಿಯಂತ್ರಣಕ್ಕೆ ಪಡೆಯಲಾಗಿದೆ ಎಂದು ಗುರುವಾರ ಪಾಕಿಸ್ತಾನ ಹೇಳಿಕೊಂಡಿದೆ.

ನಿಷೇಧಿತ ಸಂಘಟನೆಗಳ 121 ಮಂದಿಯನ್ನು ಬಂಧಿಸಲಾಗಿದೆ ಎಂದು ಪಾಕ್ ಆಂತರಿಕ ಸಚಿವಾಲಯ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.ಉಗ್ರ ಸಂಘಟನೆಗಳಿಗೆ ಸೇರಿದ ಧಾರ್ಮಿಕ ಶಾಲೆಗಳು, ಆಸ್ಪತ್ರೆಗಳು ಮತ್ತು ಆಂಬುಲೆನ್ಸ್ ಗಳನ್ನು ಸಹ ವಶಕ್ಕೆ ಪಡೆಯಲಾಗಿದೆ ಹಾಗೂ ನಿನ್ನೆ ಅಷ್ಟೇ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಅವರ ಸಹೋದರ ಮುಫ್ತಿ ಅಬ್ದುರ್ ಹಾಗೂ ಅದೇ ಸಂಘಟನೆಗೆ ಸೇರಿದ ಕಮಾಂಡರ್ ಹಮ್ಮದ್ ಅಜರ್ ಸೇರಿದಂತೆ 44 ಉಗ್ರರನ್ನು ಬಂಧಿಸಲಾಗಿತ್ತು……