Breaking News

ಸುಂದರವಾದ ಕಣ್ಣುಗಳಿಗೆ ಈ ಆಹಾರ ಸೇವನೆ ಬೆಸ್ಟ್..!

SHARE......LIKE......COMMENT......

ಬ್ಯೂಟಿ ಟಿಪ್ಸ್:

ಆದರೆ ಕಣ್ಣು ತುಂಬಾ ಸೂಕ್ಷ್ಮವಾದ ಅಂಗವಾದ್ದರಿಂದ ಕಣ್ಣಿನ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದು ಅಗತ್ಯವಾಗುತ್ತದೆ. ಅದಕ್ಕಾಗಿ ಈ ಆಹಾರಗಳ ಸೇವನೆ ಸಹಾಯ ಮಾಡುತ್ತದೆ.

ಹಸಿರು ಸೊಪ್ಪುಗಳ ಸೇವನೆ: ಪಾಲಕ್​ನಂತಹ ಹಸಿರು ಸೊಪ್ಪುಗಳ ಸೇವನೆಯಿಂದ ದೇಹಕ್ಕೆ ವಿಟಮಿನ್​ ಸಿ, ಬೆಟಾ ಕೆರೊಟಿನ್ ಹೀಗೆ ಅಗತ್ಯ ಪೋಷಕಾಂಶಗಳು ದೇಹಕ್ಕೆ ಸಿಗುತ್ತವೆ. ಇವು ನೈಸರ್ಗಿಕ ಸನ್​ಸ್ಕ್ರಿನ್​ಗಳಾಗಿ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತವೆ. ಹಾಗೆ ಕ್ಯಾಟರ್ಯಾಕ್ಟ್​ಸ್​ನಂತಹ ಸಮಸ್ಯೆಯಿಂದ ಕಣ್ಣನ್ನು ಕಾಪಾಡುತ್ತವೆ.

*ನಟ್ಸ್​ ಮತ್ತು ಬೀಜಗಳು: ಬಾದಾಮಿ, ಆ್ಯಪ್ರಿಕಾಟ್ಸ್​, ಗೋಡಂಬಿ, ಸೂರ್ಯಕಾಂತಿ ಬೀಜ ಇವೆಲ್ಲವೂ ಕಣ್ಣನ್ನು ಕಾಪಾಡುತ್ತವೆ. ಹಾಗೆ ಕಣ್ಣಿನ ಆರೋಗ್ಯಕ್ಕೆ ಅಗತ್ಯವಾಗಿರುವ ವಿಟಮಿನ್​ ಇ ಯನ್ನು ಒದಗಿಸುತ್ತವೆ.

*ಹಣ್ಣುಗಳು: ಹುಳಿಯಂಶವಿರುವ ಹಣ್ಣುಗಳಾದ ಕಿತ್ತಳೆ, ಮೋಸಂಬಿ, ದಾಳಿಂಬೆ, ದ್ರಾಕ್ಷಿ ಇವುಗಳ ಸೇವನೆಯಿಂದ ಕಣ್ಣಿನ ಟಿಶ್ಶುಗಳ ಆರೋಗ್ಯವನ್ನು ಕಾಪಾಡಬಹುದು. ಹಾಗೆ ಕಣ್ಣಿನ ನರಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತವೆ.

*ಕ್ಯಾರೇಟ್​: ಕಣ್ಣಿನ ದೃಷ್ಟಿಯ ಆರೋಗ್ಯಕ್ಕೆ ಕ್ಯಾರೆಟ್​ ಉತ್ತಮ ಆಹಾರ. ಕ್ಯಾರೇಟ್​ನಲ್ಲಿರುವ ಅಂಶಗಳು ಕಣ್ಣನ್ನು ಸನ್​ ಡ್ಯಾಮೇಜ್​ನಿಂದ ಕಾಪಾಡುತ್ತವೆ. ಈ ತರಕಾರಿಯ ಸೇವನೆಯಿಂದ ಕಣ್ಣಿನ ನರಗಳು ಹಾಗೆ ಮಸಲ್ಸ್​ಗಳು ಬಲಗೊಳ್ಳುತ್ತವೆ…….