Breaking News

ಮಂಡ್ಯ ಜೆಡಿಎಸ್​ ಮುಖಂಡ ಪ್ರಕಾಶ್ ಹತ್ಯೆ ಪ್ರಕರಣ..!

ಕಾಂಗ್ರೆಸ್​ ಮುಖಂಡರ ಮನೆ ಮುಂದೆ ಬೆಂಕಿ ಹಚ್ಚಿ ಆಕ್ರೋಶ....

SHARE......LIKE......COMMENT......

ಮಂಡ್ಯ:

ಹಾಡಹಗಲೇ ಜೆಡಿಎಸ್​ ಮುಖಂಡ ಪ್ರಕಾಶ್ ಹತ್ಯೆ ಪ್ರಕರಣ ಮುಂಜಾಗ್ರತಾ ಕ್ರಮವಾಗಿ ಮದ್ದೂರು ಪಟ್ಟಣ, ಸಾರ್ವಜನಿಕ‌ ಆಸ್ಪತ್ರೆ ಹಾಗೂ ತೊಪ್ಪನಹಳ್ಳಿ ಗ್ರಾಮಕ್ಕೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಇಂದು ಮೃತ ಗ್ರಾಮಕ್ಕೆ ಸಿಎಂ ಕುಮಾರಸ್ವಾಮಿ ಭೇಟಿ ನೀಡುವ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕದಡದಂತೆ ಬಿಗಿ ಬಂದೋಬಸ್ತ್​​ ಕೈಗೊಳ್ಳಲಾಗಿದೆ.

ತಡರಾತ್ರಿ ಜೆಡಿಎಸ್​​​ ಮುಖಂಡ ಪ್ರಕಾಶ್ ಹತ್ಯೆ ಖಂಡಿಸಿ ತೊಪ್ಪನಹಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಕಾಂಗ್ರೆಸ್​ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿದ ಉಪಕರಣಗಳನ್ನ ಧ್ವಂಸಗೊಳಿಸಿದ್ದಾರೆ. ಅಲ್ದೆ ಮನೆಗಳ ಮುಂದೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಕಾರ್ಯಕರ್ತರ ಗಲಾಟೆ ತಹಬದಿಗೆ ತರಲು ಪೊಲೀಸ್ರು ಲಾಠಿ ಪ್ರಹಾರ ನಡೆಸಿದ್ದು, ಲಾಠಿಚಾರ್ಜ್​ನಲ್ಲಿ ಮಹಿಳೆ ಜಯಮ್ಮಳ ಕಾಲು ಮುರಿದಿದೆ.ಸ್ಥಳಕ್ಕೆ ಮೈಸೂರು ದಕ್ಷಿಣ ವಲಯದ ಐಜಿಪಿ ಶರತ್​​​​ ಚಂದ್ರ ಭೇಟಿ ನೀಡಿ ಗ್ರಾಮಸ್ಥರಿಗೆ ಶಾಂತಿ, ಸುವ್ಯವಸ್ಥೆ ಕಾಪಾಡಿ ಎಂದು ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ್ದಾರೆ……….

ಯೆಸ್ ನೆನ್ನೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಪ್ರಕಾಶ್​ರನ್ನ ಬರ್ಬರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಕೊಲೆಯ ನಂತ್ರ ಕಾರಿನಲ್ಲಿ ದುಷ್ಕರ್ಮಿಗಳ ತಂಡ ಪರಾರಿಯಾಗಿದೆ. 2016 ರಲ್ಲಿ ತೊಪ್ಪನಹಳ್ಳಿ ಯಲ್ಲಿ ಮೂವರ ಕೊಲೆಯಾಗಿತ್ತು. ಅಂದಿನ ಕೊಲೆ ಪ್ರತೀಕಾರವಾಗಿ ಕೊಲೆ ನಡೆದಿರೋ ಶಂಕೆ ವ್ಯಕ್ತವಾಗಿದೆ…..