ಸಿನಿಮಾ:
ಡೆಡ್ಲಿ ಕೊರೋನಾ ಅಟ್ಟಹಾಸಕ್ಕೆ ಸೆಡ್ಡು ಹೊಡೆದು ಶೂಟಿಂಗ್ ಸೇರಿದಂತೆ ಚಿತ್ರಮಂದಿರಗಳು ಓಪನ್ ಆಗಿವೆ. ಇದ್ರ ಬೆನ್ನಲ್ಲೇ ನಾನಾ..ನೀನಾ..ಅಂತ ಸ್ಟಾರ್ಸ್ ಸಿನಿಮಾಗಳು ಪೈಪೋಟಿ ನಡೆಸತ್ತಿದೆ. ಹೀಗಿರುವಾಗಲ್ಲೇ ಕಿಚ್ಚನ ‘ಕೋಟಿಗೊಬ್ಬ-3’ ಸೈಲೆಂಟ್ ಆಗಿಯೇ ತೆರೆ ಮೇಲೆ ಬರೋ ಪ್ಲಾನ್ ಮಾಡಿಕೊಂಡಿದ್ದಿಯಂತೆ. ಕಿಚ್ಚ ಸುದೀಪ್ ನಟನೆಯ ಮೋಸ್ಟ್ ಅವೈಟೆಡ್ ಸಿನಿಮಾ ‘ಕೋಟಿಗೊಬ್ಬ-3’. ಈಗಾಗಲೇ ಫಸ್ಟ್ಲುಕ್ ಹಾಗೂ ಟೀಸರ್ನಿಂದ ಇಡೀ ಗಾಂಧಿನಗರದಲ್ಲಿ, ರಿಲೀಸ್ಗೂ ಮುನ್ನವೇ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ಸಿನಿಮಾ. ‘ಕೋಟಿಗೊಬ್ಬ-3’. ಸದ್ಯ ಥಿಯೇಟರ್ ಬಾಗಿಲು ತೆರದಿದ್ದು, ಕನ್ನಡ ನಿರ್ಮಾಪಕರೆಲ್ಲಾ ಥಿಯೇಟರ್ಗೆ ಬರೋದಕ್ಕೆ ಡೇಟ್ ಕ್ಯಾಲ್ಯುಕೇಷನ್ ಮಾಡ್ತಿದ್ದಾರೆ.
ಇತ್ತ ಕೆಜಿಎಫ್, ರಾಬರ್ಟ್, ಪೊಗರು ತೆರೆ ಮೇಲೆ ಸೌಂಡ್ ಮಾಡೋಕ್ಕೆ ಸದ್ದು ಮಾಡ್ತಿದ್ರೆ. ‘ಕೋಟಿಗೊಬ್ಬ-3’ ಮಾತ್ರ ಸೈಲೆಂಟ್ ಆಗಿಯೋ ಬಿಗ್ ಸ್ಕ್ರೀನ್ ಮೇಲೆ ಭರ್ಜರಿಯಾಗಿ ಬರಲು ಪ್ಲಾನ್ ಮಾಡಿಕೊಂಡಿದಿಯಂತೆ. ಅಂದ್ಹಾಗೆ ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಹೆಬ್ಬುಲಿ ಕಿಚ್ಚನ ಜೊತೆ ಮಾಡೋನ ಸೆಬಾಸ್ಟಿಯನ್ ಮತ್ತು ಶ್ರದ್ಧಾ ದಾಸ್ ನಾಯಕಿಯರಾಗಿ ಮಿಂಚಿದ್ದಾರೆ. ಶಿವ ಕಾರ್ತಿಕ್ ನಿರ್ದೇಶನದಲ್ಲಿ, ಸೂರಪ್ಪ ಬಾಬು ನಿರ್ಮಾಣದಲ್ಲಿ, ಈ ಸಿನಿಮಾ, ರಿಲೀಸ್ ಯಾವಾಗ ಅನ್ನೋದನ ಬಿಟ್ಟುಕೊಡ್ತಿಲ್ಲ. ಸೈಲೆಂಟ್ ಆಗಿಯೇ ಪಕ್ಕಾ ಪ್ಲಾನ್ ಮಾಡಿಕೊಂಡು, 2021 ಜನವರಿಯಲ್ಲಿ ರಿಲೀಸ್ ಮಾಡಲಿದೆ ಚಿತ್ರತಂಡ……