ಸಿನಿಮಾ:
ದೇಶದಾದ್ಯಂತ ಈ ಹೆಮ್ಮಾರಿ ಕೊರೋನಾದಿಂದಾಗಿ ಎಲ್ಲವೂ ಬಂದ್ ಆಗಿತ್ತು. ಎಲ್ಲಾ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿದ್ದವು.ಇದೀಗ ಕೊಂಚ ಕೊಂಚವೇ ರಿಲೀಫ್ ಸಿಗುತ್ತಿದ್ದು, ಚಿತ್ರರಂಗದ ಚಟುವಟಿಗಳು ಸಹ ಶುರುವಾಗುತ್ತಿವೆ. ಕಲಾವಿದರು ಕೂಡ ಚಿತ್ರೀಕರಣಕ್ಕೆ ಹಿಂದಿರುಗುತ್ತಿದ್ದಾರೆ. ಸತತ ಆರು ತಿಂಗಳ ನಂತರ ಶೂಟಿಂಗ್ಗೆ ಹಾಜರಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಭಾವನಾತ್ಮಕ ಸಾಲುಗಳನ್ನ ಹಂಚಿಕೊಂಡಿದ್ದಾರೆ. ಕೊರೋನಾ ವೈರಸ್ ಮತ್ತು ಲಾಕ್ಡೌನ್ನಿಂದ ಚಂದನವನ ತೆರೆಯ ಹಿಂದೆ ಸರಿದುಹೋಗಿತ್ತು. ಅನ್‍ಲಾಕ್ ನಂತ್ರ ಸರ್ಕಾರ ಸೂಚಿಸಿದ ಮಾರ್ಗಸೂಚಿಗಳನ್ನ ಅನುಸರಿಸುವ ಮೂಲಕ ಬಣ್ಣದ ಲೋಕ ಮತ್ತೆ ಶುರುವಾಗಿದೆ. ಥಿಯೇಟರ್ಗಳು ಓಪನ್ ಆಗಿದ್ದು, ಅಭಿಮಾನಿಗಳು ಸಹ ಚಿತ್ರಮಂದಿರಗಳತ್ತ ಬರುತ್ತಿದ್ದಾರೆ.
ತ್ರಿಬಲ್ ರೈಡಿಂಗ್ ಸಿನಿಮಾದ ಚಿತ್ರೀಕಣ ಪ್ರಾರಂಭವಾಗಿದ್ದು ಶೂಟಿಂಗ್ಗೆ ಹಾಜರಾಗಿರುವ ಮುಂಗಾರು ಮಳೆ ಹುಡುಗ ಗಣೇಶ್ ಕ್ಯಾಮೆರಾ ಜೊತೆಗಿನ ರಿಲೇಷನ್ಶಿಪ್ ಎಂತಹದ್ದು ಎನ್ನುವುದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದ್ದಾರೆ. ನನ್ನ ಆತನ ಜೊತೆಗಿನ ಸಂಬಂಧ ಈ ಜನ್ಮಕ್ಕೆ ದೇವರು ಕೊಟ್ಟ ವರವೇ ಇರಬೇಕು. ನಾ ನಕ್ಕಾಗ ನಕ್ಕು, ಅತ್ತಾಗ ಅತ್ತು ನನ್ನನ್ನು ನಿಮಗೆ ಅದ್ಭುತವಾಗಿ ತೋರಿಸಿದ ಆ ಸಲುಗೆಗೆ ಅದಾವ ಕಣ್ಣು ತಗುಲಿತ್ತೊ..? 6 ತಿಂಗಳ ಕಾಲ ದೂರಾಗಿ ಈಗ ಎದುರಾಗಿದ್ದೇವೆ. ಆತ ಬೇರಾರಲ್ಲ ಬದುಕಿನ ಭಾಗ ‘ಕ್ಯಾಮೆರಾ’. ತ್ರಿಬಲ್ ರೈಡಿಂಗ್ ಸಿನಿಮಾ ಚಿತ್ರೀಕರಣ ಶುರುವಾಗಿದೆ ನಿಮ್ಮ ಹಾರೈಕೆಯಿರಲಿ ಎಂದು ಬರೆದುಕೊಂಡಿದ್ದಾರೆ……