ಬೆಂಗಳೂರು:
ಬೆಂಗಳೂರಿನಲ್ಲಿ ತಿಮ್ಮಪ್ಪನ ಲಡ್ಡು ಮಾರಾಟ ಆರಂಭವಾಗಿದೆ. ಬೆಂಗಳೂರಿನ ವೈಯಾಲಿಕಾವಲ್ನಲ್ಲಿರುವ ಟಿಟಿಡಿ ದೇಗುಲದಲ್ಲಿ 50 ರೂ. ಬೆಲೆಯ ಲಡ್ಡು ಕೇವಲ 25 ರೂ.ಗೆ ಮಾರಾಟವಾಗ್ತಿದೆ. ಬೆಳಗ್ಗೆ 8ಗಂಟೆಯಿಂದ ಲಡ್ಡು ಮಾರಾಟ ಆರಂಭಗೊಂಡಿದೆ. ಕಳೆದ ಮೂರು ತಿಂಗಳಿನಿಂದ ಲಾಕ್ಡೌನ್ ಕಾರಣದಿಂದಾಗಿ ಲಡ್ಡು ಮಾರಾಟ ಸ್ಥಗಿತಗೊಂಡಿತ್ತು. ಕೊರೋನಾ ಹಿನ್ನಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಜನತೆ ಸಿಕ್ಕಿರುವುದರಿಂದ ಅರ್ಧಬೆಲೆಗೆ ಲಡ್ಡು ಮಾರಾಟ ಮಾಡಿ ಸೇವೆ ಮುಂದುವರಿಸಲು ಟಿಟಿಡಿ ನಿರ್ಧಾರ ಮಾಡಿದೆ. ಲಡ್ಡು ಖರೀದಿಗೆ ಬರುವ ಭಕ್ತರಿಗೆ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮತ್ತು ಸೋಷಿಯಲ್ ಡಿಸ್ಟೆನ್ಸ್ ಕಡ್ಡಾಯ ಮಾಡಲಾಗಿದೆ……