Breaking News

ಹಾಲು ಗ್ರಾಹಕರಿಗೆ ರಾಜ್ಯ ಸರ್ಕಾರ ಶಾಕ್..!

ಹಾಲು ಮೊಸರು ಪ್ರತಿ ಲೀಟರ್​ಗೆ 2 ರೂಪಾಯಿ ಏರಿಕೆ....

SHARE......LIKE......COMMENT......

ಬೆಂಗಳೂರು:

ರಾಜ್ಯ ಸರ್ಕಾರ ಹಾಲು ಗ್ರಾಹಕರಿಗೆ ಶಾಕ್ ಕೊಟ್ಟಿದೆ. ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಮಾಡಿದೆ. ಹಾಲು ಮೊಸರು ಪ್ರತಿ ಲೀಟರ್​ಗೆ 2 ರೂಪಾಯಿ ಏರಿಕೆ ಮಾಡಿದೆ. ಈ ನೂತನ ದರ ನಾಳೆಯಿಂದಲೇ ಜಾರಿಗೆ ಬರಲಿದೆ. ಕೆಎಂಎಫ್​ ಸರ್ಕಾರದ ಮುಂದೆ ಪ್ರತಿ ಲೀಟರ್​ಗೆ 3 ರೂಪಾಯಿ ದರ ಏರಿಕೆಯ ಪ್ರಸ್ತಾಪ ಇಟ್ಟಿತ್ತು. ಆದ್ರೆ ಸರ್ಕಾರ 2 ರೂಪಾಯಿ ಹೆಚ್ಚಳ ಮಾಡಿದೆ. ಏರಿಕೆಯಾದ 2 ರೂಪಾಯಿಯಲ್ಲಿ 1 ರೂಪಾಯಿ ರೈತರಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ಇನ್ನು ಉಳಿದ ಒಂದು ರೂಪಾಯಿಯಲ್ಲಿ 40 ಪೈಸೆ ಹಸುಗಳ ವಿಮೆಗೆ 40 ಪೈಸೆ, ಹಾಲು ಮಾರುವ ಏಜೆಂಟ್​ಗಳಿಗೆ 20 ಪೈಸೆ ಕೆಎಂಎಫ್​ ಆಡಳಿತ ನಿರ್ವಹಣೆಗೆ ನೀಡಲು ನಿರ್ಧರಿಸಲಾಗಿದೆ.