Breaking News

ಮದುವೆಗೆ ಜಾತಕ ಪರಿಶೀಲನೆಯಲ್ಲಿ ಮುಖ್ಯ ಅಂಶ ಯಾವುದು..!

ಗ್ರಹಮೈತ್ರಿ ಹಾಗೂ ರಾಶಿಕೂಟಕ್ಕೂ ಏನು ಸಂಬಂಧ....

SHARE......LIKE......COMMENT......

ಧರ್ಮ-ಜ್ಯೋತಿ:

ಪಂಚಾಂಗಗಳಲ್ಲಿ ಕೊಡುವ 36 ಗುಣದ ಲೆಕ್ಕಾಚಾರ ನೋಡಿ ಮೇಳಾಮೇಳಿ ನಿರ್ಣಯಿಸುವುದು ಸರಿಯಲ್ಲ. ವಧು-ವರರ ಜಾತಕ ಪರಿಶೀಲಿಸಿ ಗ್ರಹ ಸ್ಥಿತಿಗತಿ, ಬಲಾಬಲದ ಮೇಲೆ ಮಾಡುವ ನಿರ್ಣಯವೇ ಹೆಚ್ಚು ಉಪಯುಕ್ತ. ಉತ್ತರಾಯಣದ ಆರಂಭದೊಂದಿಗೆ ವಿವಾಹಾದಿ ಶುಭಕಾರ್ಯಗಳಿಗೂ ಹೊಸ ಕಳೆ ಬಂದಿದೆ. ಜಾತಕಗಳನ್ನು ಕೂಡಿಸುವಾಗ ಸಾಮಾನ್ಯವಾಗಿ ನಕ್ಷ ತ್ರ ಕೂಟವನ್ನು ನೋಡಿ ಮೇಳಾ ಮೇಳಿ ಅಥವ ವಧುವರರ ಹೊ0ದಾಣಿಕೆ ತೀರ್ಮಾನಿಸುವವರೇ ಹೆಚ್ಚು. ಅದರೊಂದಿಗೆ ಗಮನಿಸಬೇಕಾದ ಕೆಲ ಅಂಶಗಳತ್ತ ಗಮನ ಹರಿಸೋಣ.

ತಾರಾಕೂಟ : 

ನಮ್ಮ ಜನ್ಮ ತಾರೆಯಿಂದ 9 ತಾರೆಗಳನ್ನು ಜನ್ಮ, ಸಂಪತ್‌, ವಿಪತ್‌, ಕ್ಷೇಮ, ಪ್ರತ್ಯರ, ಸಾಧಕ, ವಧ, ಮಿತ್ರ, ಪರಮಮಿತ್ರ ತಾರೆಗಳೆಂದು ಹೆಸರಿಸಲಾಗಿದೆ.

ಯೋನಿ ಕೂಟ : 

ಯೋನಿ ಎಂದರೆ ವರ್ಗ ಎಂದರ್ಥ. ಹಾಗೆಂದೇ ಪ್ರತಿ ನಕ್ಷ ತ್ರವೂ ಪ್ರಾಣಿಯ ಹೆಸರಿನಿಂದ ಗುರುತಿಸಲ್ಪಟ್ಟಿದೆ. ಹಾಗೆಂದೇ ನಮ್ಮ ಹಿರಿಯರು ಪತಿ-ಪತ್ನಿ ಇಬ್ಬರೂ ಒಂದೇ ಯೋನಿಗೆ ಸಂಬಂಧಿಸಿದವರಾದರೆ ಶ್ರೇಷ್ಠ ಎಂದರು. ವೈರಿ ಯೋನಿ ಕೂಡದು ಎಂದರು. ಈ ಅಂಶವು ದಾಂಪತ್ಯ ಮನಸ್ಥಿತಿಯನ್ನು ಸೂಚಿಸುತ್ತದೆ. ಗಂಡು ಹೆಣ್ಣಿನ ಸಪ್ತಮಭಾವ, ಹೆಣ್ಣಿನ ಕುಜ, ರವಿ, ಗಂಡಿನ ಶುಕ್ರ ಇವರ ಬಲಾಬಲ, ಪರಸ್ಪರ ಸ್ಥಿತಿ ಇಲ್ಲಿ ನಿರ್ಣಾಯಕವಾಗುತ್ತದೆ. ಹಾಗಾಗಿ ಯೋನಿಕೂಟದ ಆಧಾರದ ಮೇಲೆ ಜಾತಕ ತಿರಸ್ಕಾರ ಸಲ್ಲದು.

ಗ್ರಹ ಮೈತ್ರಿ:

ಇದು ವಧು-ವರರ ಚಂದ್ರ ಸ್ಥಿತ ರಾಶ್ಯಾಧಿಪತಿಗಳ ಮಿತ್ರತ್ವ. ಚಂದ್ರ ಮನೋಕಾರಕ. ಅವನು ಗಂಡು ಹೆಣ್ಣಿನ ಮಾನಸಿಕ ಸ್ಥಿತಿಯನ್ನು ಪ್ರಭಾವಿಸುತ್ತಾನೆ. ಗ್ರಹಮೈತ್ರಿ ಇಲ್ಲದಾಗ ಇಬ್ಬರ ನಕ್ಷತ್ರಾಧಿಪತಿಗಳ ಮಿತ್ರತ್ವ, ತಾತ್ಕಾಲಿಕ ಮಿತ್ರತ್ವ, ಇಬ್ಬರ ಶುಭ ಸ್ಥಿತಿ, ಇವರ ಮೇಲೆ ಶುಭ ದೃಷ್ಟಿ ಚಂದ್ರ ಬಲ ಇತ್ಯಾದಿ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಗ್ರಹಮೈತ್ರಿ ಇಲ್ಲವೆಂದು ತಿರಸ್ಕರಿಸುವುದು ಸರಿಯಲ್ಲ.

ಗಣಕೂಟ: 

ನಕ್ಷತ್ರಗಳಲ್ಲಿ ದೇವ, ಮನುಷ್ಯ, ರಾಕ್ಷ ಸ ಗಣಗಳಿವೆ. ಆದರೆ ಅದಕ್ಕೂ ನಕ್ಷ ತ್ರಗಳ ಅಧಿದೇವತೆಗಳಿಗೂ ಸಂಬಂಧವಿಲ್ಲವೆಂಬುದನ್ನು ಮನಗಾಣಬೇಕು. ಬಹುಶಃ ಚಂದ್ರನ ಪ್ರಭಾವಕ್ಕೆ ಅನುಗುಣವಾಗಿ ವಿಭಾಗಿಸಿರಬೇಕು. ಅದಕ್ಕೆ ಪೂರಕವಾದ ಆಧಾರಗಳಿಲ್ಲ. ಇದು ಕರ್ಮ, ಮತ್ತು ಗುಣ ಸ್ವಭಾವಕ್ಕೆ ಸಂಬಂಧಿಸಿದೆ. ಆದರೆ ಒಂದು ಜಾತಕದ ಲಗ್ನ, ಲಗ್ನಾಧಿಪತಿ, ಚಂದ್ರ, ಕುಂಡಲಿಯಲ್ಲಿರುವ ಬಲಯುತವಾದ ಗ್ರಹ ಇವುಗಳು ಆ ಜಾತಕನ ಗುಣ ಸ್ವಭಾವವನ್ನು ನಿರ್ಣಯಿಸುತ್ತವೆ. ಹಾಗಾಗಿ ಗಣಕೂಟಕ್ಕಾಗಿ ಜಾತಕವನ್ನು ತಿರಸ್ಕರಿಸುವುದು ಸರಿಯಲ್ಲ.

ಭಕೂಟ ಅಥವ ರಾಶಿ ಕೂಟ:

ಇಲ್ಲಿ ವಧುವಿನ ರಾಶಿಯಿಂದ ವರನ ರಾಶಿ ದೃಶ್ಯಾರ್ಧದಲ್ಲಿ ಬರಬೇಕೆಂದು ಹೇಳಲಾಗಿದೆ. ಅಂದರೆ 7,8,9,10,11,12ನೇ ರಾಶಿಯಾಗಿರಬೇಕು.ಇವಕ್ಕೆ ಈರೀತಿ ಫಲ ಹೇಳಲಾಗಿದೆ. ವಧುವಿನ ಜನ್ಮ ತಾರೆಯಿಂದ ವರನ ಜನ್ಮ ತಾರೆ.

1. ಆಯಸ್ಸು ಕ್ಷೀಣ

2. ಧನನಾಶ

3. ದುಃಖ

4. ಪರಸ್ಪರ ವೈರ

5. ಸಂತಾನ ನಷ್ಟ

6. ವ್ಯಸನ, ರೋಗ, ಸಂಕಷ್ಟ, ವಿಯೋಗ

7. ಸಾ0ತತಿ ಸೌಖ್ಯ, ಧನಪ್ರಾಪ್ತಿ, ಅನ್ಯೋನ್ಯ ಪ್ರೀತಿ

8. ಪುತ್ರಲಾಭ, ಸುಖ, ಪ್ರೇಮ

9. ಧನ, ಸಂಪತ್ತು, ಸೌಭಾಗ್ಯ, ಉತ್ತಮ ಸ0ತತಿ

10. ಧನ, ಸುಖ, ಸೌಭಾಗ್ಯ

11. ಸಂತಾನ ಸುಖ, ಪ್ರೇಮ, ಶುಭಫಲ

12. ಆರೋಗ್ಯ, ಧನ, ಸಂಪತ್ತು.

ಆದರೆ ಇಲ್ಲಿ ಈ ನಕ್ಷತ್ರ ಸ್ಥಿತ ಚ0ದ್ರ ಪಾಪಗ್ರಹ ಪೀಡಿತ ನಾದರೆ ವ್ಯತಿರಿಕ್ತ ಫಲ ಹೇಳಬೇಕೆಂದಿದ್ದಾರೆ. ಇಲ್ಲಿ 8-12 ಕ್ಕೆ ಶುಭ ಫಲ ಹೇಳಿದರೂ ಅಲ್ಲಿ ಎರಡು ರಾಶ್ಯಾಧಿಪರಲ್ಲಿ ಮಿತ್ರತ್ವ (ತಾತ್ಕಾಲಿಕವಾಗಿ ಕೂಡ) ಇರುವುದು ಅವಶ್ಯಕ. ಅದರಲ್ಲೂ ಸ್ತ್ರೀಯದು ಸ್ತ್ರೀರಾಶಿ ಮತ್ತು ಪುರುಷನದು ಪುರುಷ ರಾಶಿಯಾದರೆ ಶ್ರೇಷ್ಠ. ಇದಕ್ಕೆ 36 ರಲ್ಲಿ ಏಳು ಗುಣ ಕೊಡಲಾಗಿದೆ. (19.5%). ಇದು ದಂಪತಿಯಲ್ಲಿ ಪರಸ್ಪರ ಪ್ರೀತಿಯನ್ನು ತೋರಿಸುತ್ತದೆ. ಆದ್ದರಿಂದ ಇದು ಮಹತ್ವದ ಕೂಟ. ಆದರೆ ಇಲ್ಲಿ ಕೂಡ ಚಂದ್ರ ಲಗ್ನದಿಂದ ಶುಭ ಸ್ಥಾನ ಸ್ಥಿತ ಶುಭ, ಬಲಿಷ್ಠ ಗ್ರಹರು ಸಾಕಷ್ಟು ಪ್ರಭಾವ ಬೀರಬಲ್ಲರಾದ್ದರಿಂದ ಕುಂಡಲಿಯ ವಿವೇಚನೆ ಅತ್ಯಗತ್ಯ.

ನಾಡಿಕೂಟ: 

ದಂಪತಿಯ ಆರೋಗ್ಯ ಸೂಚಕ. ಏಕನಾಡಿ ಅದರಲ್ಲೂ ಇಬ್ಬರದೂ ಅಂತ್ಯನಾಡಿ ಆಗಬಾರದು. ನಕ್ಷ ತ್ರಗಳನ್ನು ಆದಿ, ಮಧ್ಯ ಮತ್ತು ಅಂತ್ಯ ನಾಡಿ ಎಂದು ವಿಭಾಗಿಸಲಾಗಿದೆ. ಇಲ್ಲಿ ಏಕನಾಡಿಗೆ ಶೂನ್ಯಗುಣ. ಬೇರೆ ಬೇರೆ ನಾಡಿ ಆದರೆ 36 ರಲ್ಲಿ 8 ಗುಣ ಕೊಡಲಾಗಿದೆ. (22%). ಮುಖ್ಯವಾಗಿ ಆಯುರ್ವೇದದ ಆಧಾರದಲ್ಲಿ ನಿರ್ಣಯಿಸಲಾಗಿರುವುದರಿಂದ ಉತ್ಪ್ರೇಕ್ಷಿಸಲಾಗದು. ಆದರೆ ಜಾತಕದಲ್ಲಿ ತ್ರಿದೋಷಗಳ ಪ್ರಭಾವನ್ನು ಸೂಕ್ಷ್ಮವಾಗಿ ಗಮನಿಸಿ ಈ ವಿಚಾರದಲ್ಲಿ ಮುಂದುವರಿಯುವುದು ಒಳ್ಳೆಯದು……