Breaking News

ಶುಭಾ ಪೂಂಜಾಗೆ ಕೂಡಿಬಂದಿದೆ ಕಂಕಣಭಾಗ್ಯ..!

ಮಂಗಳೂರಿನ ಸುಮಂತ್ ಮಹಾಬಲ ಹುಡುಗನನ್ನ ವರಿಸಲಿದ್ದಾರೆ....

SHARE......LIKE......COMMENT......

ಸ್ಯಾಂಡಲ್​ವುಡ್​:

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ, ಮೊಗ್ಗಿನ ಮನಸಿನ ಹುಡುಗಿ ನಟಿ ಶುಭ ಪೂಂಜಾ ಮದುವೆ ನಿಶ್ಚಯ ಆಗಿದೆ. ಶುಭಾ ಪೂಂಜಾ ಈಗ ಪ್ರೀತಿಯಲ್ಲಿ ಬಿದ್ದಿದ್ದಾರೆ. ಮೂಲತಃ ಮಂಗಳೂರು ಮೂಲದ ಶುಭಾ ಪೂಂಜಾ, ಇದೇ ಮಂಗಳೂರಿನ ಕುಂದಾಪುರ ಮೂಲಕ ಹುಡುಗನನ್ನ ವರಿಸಲಿದ್ದಾರೆ. ಶುಭಾ ಪೂಂಜಾ ಮದುವೆಯಾಗ್ತಿರೋ ಹುಡುಗನ ಹೆಸರು ಸುಮಂತ್ ಮಹಾಬಲ. ಮಂಗಳೂರಿನವ್ರೇ ಆದ್ರೂ, ಸದ್ಯ ಬೆಂಗಳೂರಿನಲ್ಲಿಯೇ ಸೆಟಲ್​ ಆಗಿದ್ದಾರೆ. ಬಿಟಿಎಮ್​ ಲೇಔಟ್​ನಲ್ಲಿ ವಾಸವಿದ್ದಾರೆ. ಅಂದ್ಹಾಗೇ ಸುಮಂತ್​ ಗ್ಯಾಸ್ ಏಜೆನ್ಸಿ ಬ್ಯುಸಿನೆಸ್​ನಲ್ಲಿ ತೊಡಗಿಸಿಕೊಂಡಿದ್ದು, ಜಯಕರ್ನಾಟಕ ಸಂಘಟನೆಯ ಬೆಂಗಳೂರು ಸೌತ್ ವಿಂಗ್​ ಪ್ರೆಸಿಡೆಂಟ್ ಸಹ ಆಗಿದ್ದಾರೆ.

ಸಿನಿಮಾಗಳಲ್ಲಿ ಆ್ಯಕ್ಟಿವ್​​ ಆಗಿದ್ದ ನಟಿ ಶುಭಾ ಪೂಂಜಾಗೇ, ಮದುವೆಯಾಗೋ ಹುಡುಗ ಬಹಳ ಸಪೋರ್ಟಿವ್​ ಆಗಿ ಇರಬೇಕು, ಯಾವುದೇ ಗಾಸಿಪ್​ ಮತ್ತೊಂದಕ್ಕೆ ಕಿವಿಕೊಡದೇ, ಬಹಳ ಪ್ರೀತಿಯಿಂದ ನೋಡಿಕೊಂಡು, ಅಂದುಕೊಂಡಂತೆ ನೆಮ್ಮದಿಯ ಜೀವನ ನಡೆಸಬೇಕು. ಮದುವೆ ನಂತರವೂ ಸಿನಿಮಾಗಳಲ್ಲಿ ನಟಿಸಬೇಕು. ಹೀಗೆ ಜೀವನದ ಬಗ್ಗೆ ಒಂದಷ್ಟು ಆಸೆ ಕನಸುಗಳನ್ನ ಹೊತ್ತಿದ್ರು. ಸುಮಂತ್​ ಸ್ನೇಹಿತನಾಗಿ ಸಿಕ್ಕಿದ ಮೇಲೆ ಈ ಎಲ್ಲಾ ಕ್ವಾಲಿಟಿಸ್​ ಸುಮಂತ್​ರಲ್ಲಿ ಕಂಡ ಶುಭಾ ಪೂಂಜಾ ಜೀವನಸಂಗಾತಿಯಾಗಿ ಸ್ವೀಕರಿಸೊ ನಿರ್ಧಾರ ಮಾಡಿದ್ರು. ಸ್ವತಃ ಶುಭಾ, ಸುಮಂತ್​ರನ್ನ ಮದುವೆಯಾಗೋದಾಗಿ ಪ್ರಪೋಸ್ ಮಾಡಿದ್ದಾರೆ.

ಶುಭಾ ಪೂಂಜಾ ಪ್ರಪೋಸಲ್​ಗೆ ಒಪ್ಪಿಕೊಂಡ ಸುಮಂತ್​ ಮಹಾಬಲ ನಂತರ ತಮ್ಮ ಕುಟುಂಬದವರಿಗೆ ತಿಳಿಸಿ, ಒಪ್ಪಿಗೆ ಪಡೆದಿದ್ದಾರೆ. ಇತ್ತ ಶುಭಾ ಪೂಂಜಾ ಪೋಷಕರು ಸಹ ಖುಷಿಯಿಂದ ಒಪ್ಪಿಗೆ ಸೂಚಿಸಿದ್ದಾರೆ. ಶುಭಾ ಮತ್ತು ಸುಮಂತ್. ಇನ್ನೆರಡು ತಿಂಗಳಲ್ಲಿ ಕುಟುಂಬಸ್ಥರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಎಂಗೇಜ್ಮೆಂಟ್​ ಮಾಡಿಕೊಳಖ್ಳಿರೋ ಈ ಜೋಡಿ. ಡಿಸೇಂಬರ್ ಒಳಗೆ ಅಂದ್ರೆ ವರ್ಷಾಂತ್ಯದ ಒಳಗೆ ಸರಳ ವಿವಾಹ ಆಗಲಿದ್ದಾರೆ.

ಒಟ್ಟಾರೆಯಾಗಿ ನಟಿ ಶುಭಾ ಪೂಂಜಾ ಸಿನಿಮಾರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಹೆಸರು ಮಾಡಿದ್ದು, ಸಿನಿಪ್ರಿಯರ ಮನಗೆದ್ದಿದ್ದಾರೆ. ಸದಾ ಹಸನ್ಮುಖಿಯಾಗಿರೋ ಶುಭಾ ಪೂಂಜಾ ಬಾಳಲ್ಲಿ ಆ ನಗುವನ್ನ ಇಮ್ಮಡಿಗೊಳಿಸಲು ಸುಮಂತ್​ ಎಂಬ ಹುಡುಗ ಬಾಳಸಂಗಾತಿಯಾಗಿ ಬರಲಿದ್ದಾರೆ. ನಮ್ಮ ಕಡೆಯಿಂದ ಹೊಸಬಾಳಿಗೆ ಕಾಲಿಡಲಿರೋ ಈ ಜೋಡಿಗೆ ಶುಭವಾಗಲಿ ಅಂತ ಹಾರೈಸೋಣ……