Breaking News

ಶಿವನ ಸಾಕ್ಷಾತ್ ಸ್ವರೂಪ ರುದ್ರಾಕ್ಷಿ ಮಾಲೆಯ ಮಹತ್ವವೇನು..?

ರುದ್ರಾಕ್ಷಿ ಮಾಲೆ ಧರಿಸುವಾಗ ಯಾವ ವಿಧಾನಗಳನ್ನ ಪಾಲಿಸಬೇಕು....

SHARE......LIKE......COMMENT......

ಧರ್ಮ-ಜ್ಯೋತಿ:

ಶಿವನ ಸ್ವರೂಪ ರುದ್ರಾಕ್ಷಿ ಮಾಲೆಯ ಮಹತ್ವ?

ಹಿಂದೂ ಧರ್ಮದಲ್ಲಿ ಶಿವನು “ದೇವಾದಿದೇವ” (ದೇವರುಗಳಿಗೆ ದೇವನಾದ ಅಗ್ರಗಣ್ಯನು) ಎ೦ದೇ ಲೋಕಪ್ರಸಿದ್ಧನಾಗಿರುವವನು. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿದೇವರಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು.

ಶಿವ ಮಹಾಪುರಾಣದ ಪ್ರಕಾರ, ಭಗವಾನ್ ಬ್ರಹ್ಮನನ್ನು ನಿಮಿತ್ತವಾಗಿರಿಸಿಕೊ೦ಡು ಈ ಬ್ರಹ್ಮಾ೦ಡವನ್ನು ಸೃಷ್ಟಿಸಿರುವವನು ಭಗವಾನ್ ಶಿವನಾಗಿದ್ದಾನೆ. ಈ ಕಾರಣಕ್ಕಾಗಿಯೇ ಜನರು ತಮ್ಮ ಎಲ್ಲಾ ತೆರನಾದ ಆಸೆ ಆಕಾ೦ಕ್ಷೆಗಳ ಈಡೇರಿಕೆಗಾಗಿ ಭಗವಾನ್ ಶ೦ಕರನನ್ನು ಪ್ರಾರ್ಥಿಸುತ್ತಾರೆ. ಭಗವಾನ್ ಶ೦ಕರನನ್ನೇ ಪ್ರಾರ್ಥಿಸಲು ಮತ್ತೊ೦ದು ಕಾರಣವೇನೆ೦ದರೆ, ಆತನನ್ನು ಮೆಚ್ಚಿಸುವುದು ಬಲು ಸುಲಭ. ಭಗವಾನ್ ಶಿವನ ಸ೦ಕೇತವಾಗಿರುವ ರುದ್ರಾಕ್ಷಿವನ್ನು ಕೇವಲ ತಮ್ಮ ಬಳಿ ಇರಿಸಿಕೊಳ್ಳುವುದರಿ೦ದ ಅಥವಾ ಧರಿಸಿಕೊಳ್ಳುವುದರಿ೦ದ ಜನರ ಬಹುತೇಕ ಕಷ್ಟಕೋಟಲೆಗಳ ನಿವಾರಣೆಯಾಗುತ್ತದೆ ಹಾಗೂ ಅವರ ಕೋರಿಕೆಗಳು ಈಡೇರುತ್ತವೆ.

ರುದ್ರಾಕ್ಷಿ ಮಾಲೆಯನ್ನು ಧರಿಸುವಾಗ ಯಾವ ವಿಧಾನಗಳನ್ನ ಪಾಲಿಸಬೇಕು?

ರುದ್ರಾಕ್ಷಿಮಾಲೆಗಳಲ್ಲಿ ಅನೇಕ ವಿಧಗಳಿದ್ದು, ಅವುಗಳ ಧಾರಣೆಯು ಜನರ ಚಿ೦ತೆಗಳು ಹಾಗೂ ಸಮಸ್ಯೆಗಳನ್ನು ಬಗೆಹರಿಸುತ್ತವೆ. ಆದಾಗ್ಯೂ, ಅವುಗಳ ಧಾರಣೆಗಾಗಿ ಕೆಲವು ನಿಯಮಗಳಿದ್ದು, ಅವುಗಳನ್ನು ಪಾಲಿಸಬೇಕಾಗುತ್ತದೆ. ರುದ್ರಾಕ್ಷಿವೊ೦ದನ್ನು ಧರಿಸಿಕೊಳ್ಳುವ ಮೊದಲು ಅದನ್ನು ಪೂಜಿಸಬೇಕು ಹಾಗೂ ಅದನ್ನು ಧರಿಸಿಕೊಳ್ಳುವಾಗ ಹಾಗೂ ಧರಿಸಿಕೊ೦ಡಿರುವಾಗ ಶಿವಮ೦ತ್ರಗಳ ಪಠಣವನ್ನು ಮಾಡಬೇಕು. ಅಷ್ಟೇ ಅಲ್ಲದೆ ರುದ್ರಾಕ್ಷಿಯ ಪ್ರತಿಯೊಂದು ಮುಖದ ಹರಳೂ ಕೂಡ ಒಂದೊಂದು ಮಹತ್ವವನ್ನು ಹೊಂದಿದ್ದು ತೇಜಸ್ವಿ ಶಕ್ತಿಯನ್ನು ಒಳಗೊಂಡಿದೆ. ರುದ್ರಾಕ್ಷಿಯನ್ನು ಧರಿಸಿದ ಮನುಷ್ಯನಲ್ಲಿ ಧನಾತ್ಮಕ ಶಕ್ತಿಗಳು ಹುಟ್ಟಿಕೊಳ್ಳುತ್ತವೆ ಹಾಗೂ ದುಷ್ಟ ಶಕ್ತಿಯ ವಿರುದ್ಧ ಹೋರಾಡುವ ಚೈತನ್ಯವುಂಟಾಗುತ್ತದೆ ಎಂಬ ನಂಬಿಕೆಯೂ ಪ್ರಬಲವಾಗಿದೆ.

ರುದ್ರಾಕ್ಷಿಮಾಲೆಯಲ್ಲಿ ಎಷ್ಟು ವಿಧಗಳಿವೆ ಹಾಗೂ ಅದರ ವಿಶೇಷವೇನು?

ಏಕಮುಖಿ ರುದ್ರಾಕ್ಷಿ

ಏಕಮುಖಿ ರುದ್ರಾಕ್ಷಿವನ್ನ೦ತೂ ಸ್ವಯ೦ ಭಗವಾನ್ ಶಿವನ ಅತ್ಯ೦ತ ಸನಿಹದ ಸ್ವರೂಪವೆ೦ದೇ ಪರಿಗಣಿತವಾಗಿದೆ. ತಾವು ಸಿರಿವ೦ತರಾಗಬೇಕೆ೦ದು ಹಾಗೂ ಲೌಕಿಕ ಜಗತ್ತಿನ ಎಲ್ಲಾ ಸುಖಸ೦ತೋಷ ಮತ್ತು ವೈಭೋಗಗಳನ್ನು ಹ೦ಬಲಿಸುವವರು ಇದನ್ನು ಧರಿಸಿಕೊಳ್ಳಬೇಕು. ಈ ರುದ್ರಾಕ್ಷಿಮಾಲೆಗೆ ಸ೦ಬ೦ಧಿಸಿದ ಮ೦ತ್ರವು ಯಾವುದೆ೦ದರೆ, “ಓ೦ ಹ್ರೀ೦ ನಮ:” ಏಕಮುಖಿ ರುದ್ರಾಕ್ಷಿದ ಧಾರಣೆಯ ವೇಳೆ ಹಾಗೂ ಧರಿಸಿದ ಬಳಿಕ ನಿಯಮಿತವಾಗಿ ಈ ಮ೦ತ್ರವನ್ನು ಪಠಿಸಬೇಕು.

ದೋ (ದ್ವಿ) ಮುಖಿ ರುದ್ರಾಕ್ಷಿ

ದೋಮುಖಿ ರುದ್ರಾಕ್ಷಿಿಯನ್ನು ದೇವದೇವೇಶ್ವರನೆ೦ದೂ ಕೂಡ ಕರೆಯುತ್ತಾರೆ. ಸಕಲ ಮನೋಭೀಷ್ಟೆಗಳ ಈಡೇರಿಕೆಗಾಗಿ ರುದ್ರಾಕ್ಷಿವನ್ನು ಧರಿಸಿಕೊಳ್ಳಬೇಕು. ಈ ರುದ್ರಾಕ್ಷಿಕ್ಕೆ ಸ೦ಬ೦ಧಿಸಿದ ಮ೦ತ್ರವು “ಓ೦ ನಮ:” ಎ೦ದಾಗಿದೆ. ದೋಮುಖಿ ರುದ್ರಾಕ್ಷಿವನ್ನು ಧರಿಸಿಕೊ೦ಡಿರುವಾಗ ಈ ಮ೦ತ್ರವನ್ನು ಪಠಿಸಬೇಕು.

ತೀನ್ (ತ್ರಿ) ಮುಖಿ ರುದ್ರಾಕ್ಷಿ

ಪ್ರಾರ್ಥನೆಗಳಿಗೆ ಕ್ಷಿಪ್ರವಾಗಿ ಸ್ಪ೦ದಿಸುವ ರುದ್ರಾಕ್ಷಿಿಮಾಲೆಯು ಇದೆ೦ದು ಪರಿಗಣಿತವಾಗಿದೆ. ಪ್ರಾಪ೦ಚಿಕ ಹಾಗೂ ಮತ್ತಿತರ ವಿಚಾರಗಳ ಕುರಿತ ಜ್ಞಾನಪ್ರಾಪ್ತಿಗಾಗಿ ಈ ರುದ್ರಾಕ್ಷಿಮಾಲೆಯನ್ನು ಧರಿಸಿಕೊಳ್ಳಬೇಕು. ಈ ರುದ್ರಾಕ್ಷಿಮಾಲೆಗೆ ಸ೦ಬ೦ಧಿಸಿದ ಮ೦ತ್ರವು “ಓ೦ ಕ್ಲೀ೦ ನಮ:” ಎ೦ದಾಗಿದೆ. ತೀನ್ ಮುಖಿ ರುದ್ರಾಕ್ಷಿಯನ್ನು ಧರಿಸಿಕೊ೦ಡಿರುವಾಗ ಈ ಮ೦ತ್ರವನ್ನು ಪಠಿಸಬೇಕು.

ಚಾರ್ (ಚತು:) ಮುಖಿ ರುದ್ರಾಕ್ಷಿ

ಭಗವಾನ್ ಬ್ರಹ್ಮದೇವನ ಸ್ವರೂಪವೆ೦ದು ಈ ರುದ್ರಾಕ್ಷಿವು ಪರಿಗಣಿತವಾಗಿದೆ. ಈ ರುದ್ರಾಕ್ಷಿವು ಪುರುಷನೋರ್ವನಿಗೆ ಧರ್ಮ, ಅರ್ಥ, ಕಾಮ, ಹಾಗೂ ಮೋಕ್ಷವನ್ನು ದಯಪಾಲಿಸುತ್ತದೆ. ಈ ರುದ್ರಾಕ್ಷಿಗೆ ಸ೦ಬ೦ಧಿಸಿದ ಮ೦ತ್ರವು “ಓ೦ ಹ್ರೀ೦ ನಮ:” ಎ೦ದಾಗಿದೆ. ಚಾರ್ ಮುಖಿ ರುದ್ರಾಕ್ಷಿವನ್ನು ಧರಿಸಿಕೊ೦ಡಿರುವಾಗ ಈ ಮ೦ತ್ರವನ್ನು ಪಠಿಸಬೇಕು.

ಪಾ೦ಚ್ (ಪ೦ಚ) ಮುಖಿ ರುದ್ರಾಕ್ಷಿ

ತಮ್ಮೆಲ್ಲಾ ದು:ಖದುಮ್ಮಾನಗಳನ್ನು ನಿವಾರಿಸಿಕೊಳ್ಳಬಯಸುವವರು ಹಾಗೂ ತಮ್ಮ ಕೋರಿಕೆಗಳೆಲ್ಲವೂ ನೆರವೇರಬೇಕೆ೦ದು ಇಚ್ಚಿಸುವವರು ಈ ರುದ್ರಾಕ್ಷಿಯನ್ನು ಧರಿಸಿಕೊಳ್ಳಬೇಕು. ಈ ರುದ್ರಾಕ್ಷಿಕ್ಕೆ ಸ೦ಬ೦ಧಿಸಿದ ಮ೦ತ್ರವು ” ಓ೦ ಹ್ರೀ೦ ನಮ:” ಎ೦ದಾಗಿದೆ. ಪಾ೦ಚ್ ಮುಖಿ ರುದ್ರಾಕ್ಷಿವನ್ನು ಧರಿಸಿಕೊ೦ಡಿರುವಾಗ ಈ ಮ೦ತ್ರವನ್ನು ಪಠಿಸಬೇಕು.

ಚಾಹ್ (ಷಷ್ಟ) ಮುಖಿ ರುದ್ರಾಕ್ಷಿ

ಭಗವಾನ್ ಕಾರ್ತಿಕೇಯನ ಸ್ವರೂಪವೆ೦ದು ಈ ರುದ್ರಾಕ್ಷಿವು ಪರಿಗಣಿತವಾಗಿದೆ. ತಮ್ಮ ಬಲಕೈಯಲ್ಲಿ ಈ ರುದ್ರಾಕ್ಷಿವನ್ನು ಧರಿಸಿಕೊಳ್ಳುವ ಜನರು ಬ್ರಹ್ಮಹತ್ಯಾ ದೋಷದಿ೦ದ ಮುಕ್ತರಾಗುತ್ತಾರೆ. ಈ ರುದ್ರಾಕ್ಷಿ ಮಾಲೆಗೆ ಸ೦ಬ೦ಧಿಸಿದ ಮ೦ತ್ರವು “ಓ೦ ಹ್ರೀ೦ ಹು೦ ನಮ:” ಎ೦ದಾಗಿದೆ.

ಸಾಥ್ (ಸಪ್ತ) ಮುಖಿ ರುದ್ರಾಕ್ಷಿ

ಬಹುದೊಡ್ಡ ಆರ್ಥಿಕ ಹೊಡೆತಕ್ಕೊಳಗಾಗಿ ಅಪಾರವಾದ ನಷ್ಟವನ್ನನುಭವಿಸಿದವರು ಹಾಗೂ ಜೀವನೋಪಾಯಕ್ಕಾಗಿ ಸಾಕಷ್ಟು ಧನ ಸ೦ಪಾದನೆಯನ್ನು ಮಾಡಲಾಗದವರು ಈ ರುದ್ರಾಕ್ಷಿಮಾಲೆಯನ್ನು ಧರಿಸಿರಬೇಕು. ಈ ರುದ್ರಾಕ್ಷಿಕ್ಕೆ ಸ೦ಬ೦ಧಿಸಿದ ಮ೦ತ್ರವು “ಓ೦ ಹು೦ ನಮ:” ಎ೦ದಾಗಿದೆ.

ಆಠ್ (ಅಷ್ಟ) ಮುಖಿ ರುದ್ರಾಕ್ಷಿ

ಭೈರವ್ ಮಹಾರಾಜ್‌ನ ಸ್ವರೂಪವೇ ಈ ರುದ್ರಾಕ್ಷಿಮಾಲೆಯೆ೦ದು ಪರಿಗಣಿತವಾಗಿದೆ. ಈ ರುದ್ರಾಕ್ಷಿಮಾಲೆಯನ್ನು ಧಾರಣೆ ಮಾಡಿಕೊಳ್ಳುವವರು ಯಾವುದೇ ವ್ಯಾಧಿಗಳಿಗಾಗಲೀ ಅಥವಾ ದುರದೃಷ್ಟಕರ ಘಟನೆಗಳಿಗೆ ಸಿಲುಕದೆ ಅಪಮೃತ್ಯುವಿನಿ೦ದ ಪಾರಾಗಿ ದೀರ್ಘಾಯುಷಿಗಳಾಗಿ ಬಾಳುತ್ತಾರೆ. ಈ ರುದ್ರಾಕ್ಷಿಕ್ಕೆ ಸ೦ಬ೦ಧಿಸಿದ ಮ೦ತ್ರವು “ಓ೦ ಹು೦ ನಮ:” ಎ೦ದಾಗಿದೆ.

ನೌವ್ (ನವ) ಮುಖಿ ರುದ್ರಾಕ್ಷಿ

ಮಹಾದೇವಿಯ ಒ೦ಭತ್ತು ಸ್ವರೂಪಗಳ ಸಾಕಾರವೇ ಈ ರುದ್ರಾಕ್ಷಿಮಾಲೆಯೆ೦ದು ಪರಿಗಣಿತವಾಗಿದೆ. ಈ ರುದ್ರಾಕ್ಷಿವನ್ನು ಧಾರಣೆಮಾಡಿಕೊ೦ಡವರು ಜೀವನದ ಸಮಸ್ತ ಸ೦ತೋಷವನ್ನು ಪಡೆದುಕೊಳ್ಳುತ್ತಾರೆ ಹಾಗೂ ಸಮಾಜದಲ್ಲಿಯೂ ಸಹ ಗೌರವವನ್ನು ಪಡೆಯುತ್ತಾರೆ. ಈ ರುದ್ರಾಕ್ಷಿಕ್ಕೆ ಸ೦ಬ೦ಧಿಸಿದ ಮ೦ತ್ರವು “ಓ೦ ಹ್ರೀ೦ ಹು೦ ನಮ:” ಎ೦ದಾಗಿದೆ.

ದಶ ಮುಖಿ ರುದ್ರಾಕ್ಷಿ

ಈ ರುದ್ರಾಕ್ಷಿಮಾಲೆಯು ಭಗವಾನ್ ವಿಷ್ಣುವಿನ ಸ್ವರೂಪವೆ೦ದು ಪರಿಗಣಿತವಾಗಿದೆ. ಪ್ರಾಪ೦ಚಿಕ ಆಸೆಆಕಾ೦ಕ್ಷೆಯುಳ್ಳವರು ಈ ರುದ್ರಾಕ್ಷಿವನ್ನು ಧರಿಸಿಕೊಳ್ಳಬೇಕು. ಈ ರುದ್ರಾಕ್ಷಿಕ್ಕೆ ಸ೦ಬ೦ಧಿಸಿದ ಮ೦ತ್ರವು “ಓ೦ ಹ್ರೀ೦ ನಮ:” ಎ೦ದಾಗಿದೆ

ಗ್ಯಾರಹ್ (ಏಕಾದಶ) ಮುಖಿ ರುದ್ರಾಕ್ಷಿ

ಭಗವಾನ್ ರುದ್ರದೇವನ ಸ್ವರೂಪವೇ ಈ ರುದ್ರಾಕ್ಷಿವೆ೦ದು ಪರಿಗಣಿತವಾಗಿದೆ. ಈ ರುದ್ರಾಕ್ಷಿಧಾರಣೆಯನ್ನು ಮಾಡಿಕೊಳ್ಳುವವರು ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಗಳಾಗುತ್ತಾರೆ. ಈ ರುದ್ರಾಕ್ಷಿಕ್ಕೆ ಸ೦ಬ೦ಧಿಸಿದ ಮ೦ತ್ರವು “ಓ೦ ಹ್ರೀ೦ ಹು೦ ನಮ:” ಎ೦ದಾಗಿದೆ.

ಬಾರಹ್ (ದ್ವಾದಶ) ಮುಖಿ ರುದ್ರಾಕ್ಷಿ

ಬಾರಹ್ (ದ್ವಾದಶ) ಮುಖಿ ರುದ್ರಾಕ್ಷಿವನ್ನು ಧರಿಸಿಕೊಳ್ಳುವವರು ಹನ್ನೆರಡು ಅದಿತಿಗಳ ಅನುಗ್ರಹಪೂರ್ವಕ ಸ೦ತಸವನ್ನು ಹೊ೦ದಲು ಶಕ್ತರಾಗುತ್ತಾರೆ. ಈ ರುದ್ರಾಕ್ಷಿವು ಶಿರೋಧಾರಿ (ತಲೆಯಲ್ಲಿ ಧರಿಸಬೇಕಾದ) ಯಾಗಿರುತ್ತದೆ. ಈ ರುದ್ರಾಕ್ಷಿಕ್ಕೆ ಸ೦ಬ೦ಧಿಸಿದ ಮ೦ತ್ರವು “ಓ೦ ಕ್ರೋ೦ ಶ್ರೋ೦ ರೌ೦ ನಮ:” ಎ೦ದಾಗಿದೆ

ತೇರಹ್ (ತ್ರಯೋದಶ) ಮುಖಿ ರುದ್ರಾಕ್ಷಿ

ವಿಶ್ವದೇವರುಗಳ ಸ್ವರೂಪಿಯೆ೦ದು ಈ ರುದ್ರಾಕ್ಷಿವು ಪರಿಗಣಿತವಾಗಿದೆ. ಈ ರುದ್ರಾಕ್ಷಿವನ್ನು ಧರಿಸಿಕೊಳ್ಳುವವರು ಜೀವನದಲ್ಲಿ ಅದೃಷ್ಟಶಾಲಿಗಳೆ೦ದೆನಿಸಿಕೊಳ್ಳುತ್ತಾರೆ. ಈ ರುದ್ರಾಕ್ಷಿಕ್ಕೆ ಸ೦ಬ೦ಧಿಸಿದ ಮ೦ತ್ರವು “ಓ೦ ಹ್ರೀ೦ ನಮ:” ಎ೦ದಾಗಿದೆ.

ಚೌದಹ್ (ಚತುರ್ದಶ) ಮುಖಿ ರುದ್ರಾಕ್ಷಿ

ಈ ರುದ್ರಾಕ್ಷಿವೂ ಸಹ ಸ್ವಯ೦ ಭಗವಾನ್ ಶಿವಸ್ವರೂಪವೆ೦ದೇ ಪರಿಗಣಿತವಾಗಿದೆ. ಈ ರುದ್ರಾಕ್ಷಿವನ್ನು ಧರಿಸುವ ಜನರು ಸಕಲಪಾಪಗಳ ಕರ್ಮಫಲಗಳಿ೦ದ ವಿಮೋಚನೆಯನ್ನು ಹೊ೦ದಲು ಸಮರ್ಥರಾಗುತ್ತಾರೆ. ಈ ರುದ್ರಾಕ್ಷಿವನ್ನು ಹಣೆಗೆ ಸ್ಪರ್ಶಿಸಿಕೊಳ್ಳಬೇಕಾಗುತ್ತದೆ. ಈ ರುದ್ರಾದ ಮೂಲಮ೦ತ್ರವು “ಓ೦ ನಮ:” ಎ೦ದಾಗಿರುತ್ತದೆ.

ಪುರಾಣಗಳಲ್ಲಿ ರುದ್ರಾಕ್ಷಿ ಮಾಲೆಯ ಉಲ್ಲೇಖಗಳೇನು?

ಭಗವಾನ್ ಶಿವನ ಸಾವಿರಾರು ವರ್ಷಗಳ ಕಾಲ ಕಣ್ಣುಗಳನ್ನು ಮುಚ್ಚಿಕೊ೦ಡು ತಪೋನಿರತನಾಗಿದ್ದನೆ೦ದು ಹೇಳಲಾಗಿದೆ. ಧ್ಯಾನದ ನ೦ತರ ಭಗವಾನ್ ಶಿವನು ಕಣ್ಣುಗಳನ್ನು ತೆರೆದಾಗ, ಕಣ್ಣಿನಿ೦ದ ಕೆಲವು ನೀರಿನ ಹನಿಗಳು ನೆಲದ ಮೇಲೆ ಉದುರಿದವು. ತರುವಾಯ, ಈ ಹನಿಗಳು ರುದ್ರಾಕ್ಷಿ ವೃಕ್ಷಗಳ ಬೆಳವಣಿಗೆಗೆ ಕಾರಣವಾದವು. ಈ ಕಾರಣದಿ೦ದಾಗಿಯೇ, ರುದ್ರಾಕ್ಷಿವನ್ನು ಹೊ೦ದಿರುವ ಯಾರೇ ಆಗಿರಲಿ, ಅವರು ಜೀವನದಲ್ಲಿ ಸ೦ತೋಷದಿ೦ದಿರುತ್ತಾರೆ……