ಬೆಂಗಳೂರು:
ರಾಜ್ಯದಲ್ಲಿ ಜೂನ್ 3ರ ಸಂಜೆ 5 ಗಂಟೆಯಿಂದ ಜೂನ್ 4ರ ಸಂಜೆ 5 ಗಂಟೆ ನಡುವಣ ಅವಧಿಯಲ್ಲಿ 257 ಕೋವಿಡ್–19 ಪ್ರಕರಣಗಳು ದೃಢಪಟ್ಟಿವೆ. ನಾಲ್ವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಇದರೊಂದಿಗೆ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4320ಕ್ಕೆ ಏರಿಕೆಯಾಗಿದೆ,ಕೊರೊನಾ ಸೋಂಕಿನಿಂದ ಈವರೆಗೂ 57 ಮಂದಿ ಸಾವಿಗೀಡಾಗಿದ್ದಾರೆ.
ಉಡುಪಿಯಲ್ಲಿ 92, ರಾಯಚೂರಿನಲ್ಲಿ 88, ಹಾಸನ ಹಾಗೂ ಮಂಡ್ಯದಲ್ಲಿ 15, ದಾವಣಗೆರೆಯಲ್ಲಿ 13 , ಬೆಳಗಾವಿ 12 ಮತ್ತು ಬೆಂಗಳೂರು ನಗರದಲ್ಲಿ 09 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. .1,610 ಜನರು ಗುಣಮುಖರಾಗಿದ್ದು, 2,651ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. 13 ಕೊರೊನಾ ಪೀಡಿತರ ಸ್ಥಿತಿ ಗಂಭೀರವಾಗಿದೆ.