Breaking News

ತೃತೀಯ ರಂಗ ಅಧಿಕಾರಕ್ಕೆ ಬಂದರೆ ದಿನಕ್ಕೊಬ್ಬ ಪ್ರಧಾನಿ..!

ಪ್ರತಿಪಕ್ಷಗಳನ್ನು ಲೇವಡಿ ಮಾಡಿದ ಅಮಿತ್‌ ಶಾ.....

SHARE......LIKE......COMMENT......

ಲಖನೌ/ಕಾನ್ಪುರ:

ಬಿಜೆಪಿ ಮಣಿಸಲು ಹರಸಾಹಸ ನಡೆಸಿರುವ ತೃತೀಯ ರಂಗ ಗೊತ್ತು ಗುರಿ ಇಲ್ಲದ ಭ್ರಷ್ಟತೆಯಿಂದ ತುಂಬಿದ ಮಹಾ ಕೂಟ… ಕುಟುಂಬ ರಾಜಕಾರಣ ಪೋಷಿಸುತ್ತಿರುವ ಅವಕಾಶವಾದಿಗಳ ಈ ಮಹಾಮೈತ್ರಿಕೂಟದಲ್ಲಿ ಎಲ್ಲರೂ ಪ್ರಧಾನಿ ಅಭ್ಯರ್ಥಿಗಳೇ! ಒಂದೊಮ್ಮೆ ಈ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ ದಿನಕ್ಕೊಬ್ಬರು ಪ್ರಧಾನಿಯಾಗುತ್ತಾರೆ! ಎಂದು ಬುಧವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪ್ರತಿಪಕ್ಷಗಳನ್ನು ಲೇವಡಿ ಮಾಡಿದ್ದಾರೆ

ಲಖನೌ ಮತ್ತು ಕಾನ್ಪುರದಲ್ಲಿ ಬೂತ್‌ ಮಟ್ಟದ ಬಿಜೆಪಿ ಕಾರ‍್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾ, ”ಪ್ರತಿಪಕ್ಷಗಳ ನಾಯಕರು ವೇದಿಕೆಗಳಲ್ಲಿ ಒಗ್ಗಟ್ಟು ಪ್ರದರ್ಶಿಸಿದರೂ ಮಹಾಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸುವ ಧೈರ್ಯ ಅವರಿಗೆ ಸಾಲುತ್ತಿಲ್ಲ. ಆದರೆ ಈ ಕೂಟ ಅಧಿಕಾರಕ್ಕೆ ಬಂದಲ್ಲಿ ವಾರದ ಆರು ದಿನ ಒಬ್ಬೊಬ್ಬರು ಪ್ರಧಾನಿಯಾಗುತ್ತಾರೆ. ಭಾನುವಾರ ಇಡೀ ದೇಶಕ್ಕೇ ರಜಾದಿನವಾಗಿದೆ” ಎಂದು ವ್ಯಂಗ್ಯವಾಡಿದರು.

ಯಾರು ಯಾವ ದಿನ ಪ್ರಧಾನಿ?

ಸೋಮವಾರ – ಬಿಎಸ್ಪಿ ವರಿಷ್ಠೆ ಮಾಯಾವತಿ

ಮಂಗಳವಾರ – ಎಸ್ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌

ಬುಧವಾರ – ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ

ಗುರುವಾರ – ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌

ಶುಕ್ರವಾರ – ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ

ಶನಿವಾರ – ಡಿಎಂಕೆಯ ಎಂ.ಕೆ.ಸ್ಟಾಲಿನ್‌

ಭಾನುವಾರ – ಸರಕಾರಕ್ಕೂ ರಜೆ …..