ನವದೆಹಲಿ:
CENTRAL BUDGET 2019 ಯೆಸ್ ಕೇಂದ್ರ ಸಚಿವ ಪಿಯೂಷ್ ಗೋಯಲ್ ನಾಳೆ ಬಜೆಟ್ ಮಂಡಿಸುತ್ತಿದ್ದಾರೆ. 2019-20ನೇ ಹಣಕಾಸು ವರ್ಷದ ಬಜೆಟ್ ಇದಾಗಿದ್ದು, ಲೋಕಸಭಾ ಚುನಾವಣೆಗೆ ಮುಂಚಿತವಾಗಿ ನಡೆಯುತ್ತಿರುವುದರಿಂದ ಮಧ್ಯಂತರ ಬಜೆಟ್ ಎಂದು ಬಿಂಬಿತವಾಗಿದೆ.
ವಿತ್ತ ಸಚಿವ ಅರುಣ್ ಜೇಟ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದು, ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಪಿಯೂಷ್ ಗೋಯಲ್ ಬಜೆಟ್ ಮಂಡಿಸುತ್ತಾರೆ.ಬಜೆಟ್ ಮಂಡನೆಗೆ ಮುನ್ನಾದಿನವಾದ ಇಂದು ರಾಷ್ಟ್ರಪತಿ ರಾಮನಾಥ ಕೋವಿಂದ್, ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಸರಕಾರದ ಸಾಧನೆಗಳ ಕುರಿತು ಶ್ಲಾಘಿಸಿದ್ದಾರೆ.
ನಾಳಿನ ಬಜೆಟ್‌ನಿಂದ ನಾವೇನು ನಿರೀಕ್ಷಿಸಬಹುದು?
ಚುನಾವಣಾಪೂರ್ವ ಬಜೆಟ್ ಆಗಿರುವುದರಿಂದ ಸಹಜವಾಗಿಯೇ ಜನರಿಗೆ ಬಜೆಟ್ ಕುರಿತು ಹೆಚ್ಚಿನ ನಿರೀಕ್ಷೆಯಿದೆ. ಕೃಷಿ, ರೈತ ವಲಯ, ಗ್ರಾಮೀಣ ಮತ್ತು ಮಧ್ಯಮ ವರ್ಗದ ಜನರನ್ನು ಗಮನದಲ್ಲಿರಿಸಿಕೊಂಡು ಬಜೆಟ್ ರೂಪಿಸಲಾಗುತ್ತಿದೆ ಎನ್ನಲಾಗಿದೆ.
*ಕೃಷಿ:
.1 ಲಕ್ಷ ರೂ.ವರೆಗೆ ರೈತರಿಗೆ ಕೃಷಿ ಪರಿಹಾರ ಪ್ಯಾಕೇಜ್
.1.8 ಲಕ್ಷ ಕೋಟಿ ರೂ. ಆಹಾರ ಸಬ್ಸಿಡಿ
.ಆಹಾರ ಧಾನ್ಯಗಳ ವಿಮೆಯ ಮೇಲಿನ ಪ್ರೀಮಿಯಂ ರದ್ದು
.ಸಮಯಕ್ಕೆ ಸರಿಯಾಗಿ ಸಾಲ ಸಂದಾಯ ಮಾಡುವ ರೈತರ ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ ಪ್ರಸ್ತಾಪ.
*ಲೋಹ:
.ಚಿನ್ನದ ಮೇಲಿನ ಅಬಕಾರಿ ಸುಂಕ ಕಡಿತ ಸಾಧ್ಯತೆ.
*ಆರೋಗ್ಯ:
.ಆರೋಗ್ಯ ಕ್ಷೇತ್ರಕ್ಕೆ ಶೇ. 5 ಹೆಚ್ಚುವರಿ ಅನುದಾನ.
*ತೆರಿಗೆ:
.ಕಾರ್ಪೋರೇಟ್ ತೆರಿಗೆಯನ್ನು ಶೇ.30 ರಿಂದ ಶೇ. 25ಕ್ಕೆ ಇಳಿಸುವ ಸಾಧ್ಯತೆ
.ಮಧ್ಯಮ ವರ್ಗ ಮತ್ತು ಸಣ್ಣ ಉದ್ಯಮಕ್ಕೆ ತೆರಿಗೆ ವಿನಾಯಿತಿ.
*ಬ್ಯಾಂಕ್:
.ಉದ್ಯಮ ಸಾಲದ ಮೇಲೆ ಶೇ. 2 ಪಾಯಿಂಟ್ ವಿನಾಯಿತಿ (5 ಕೋಟಿ ರೂ. ವರೆಗಿನ ವಾರ್ಷಿಕ ಸೇಲ್ಸ್)
.ಸಾರ್ವಜನಿಕ ವಿಮಾ ಕ್ಷೇತ್ರಕ್ಕೆ 4000 ಕೋಟಿ ರೂ. ಹೂಡಿಕೆ.
*ಆಟೋಮೊಬೈಲ್:
.ಎಲೆಕ್ಟ್ರಿಕ್ ವಾಹನ ಮತ್ತು ಬ್ಯಾಟರಿ ಮೇಲಿನ ಜಿಎಸ್‌ಟಿ ಕಡಿತ.
*ಐಟಿ/ಟೆಲಿಕಾಂ:
.ಗ್ರಾಮೀಣ ಕ್ಷೇತ್ರಕ್ಕೆ ಉತ್ತಮ ಡಿಜಿಟಲ್ ಸೌಕರ್ಯ
.ಸ್ಟಾರ್ಟ್ಪ್ ಉತ್ತೇಜನಕ್ಕೆ ತೆರಿಗೆ ವಿನಾಯಿತಿ ಕ್ರಮ
.ಸ್ಪೆಕ್ಟ್ರಂ ಮತ್ತು ಪರವಾನಿಗಿಗೆ ಜಿಎಸ್‌ಟಿ ವಿನಾಯಿತಿ.
*ಹೂಡಿಕೆ ಮತ್ತು ವಿತರಣೆ:
.ಸರಕಾರಿ ಆಸ್ತಿ ಮಾರಾಟ, ಉತ್ಪಾದನೆ ಹೆಚ್ಚಳದಿಂದ ಸಂಪತ್ತು ಸಂಗ್ರಹ .
.ಟೆಲಿಕಮ್ಯೂನಿಕೇಷನ್, ರೈಲ್ವೆ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಷೇರು ಮಾರಾಟದಿಂದ ಬಂಡವಾಳ ಸಂಗ್ರಹ.
CENTRAL BUDGET 2019 LIVE LINK:
FACEBOOK: https://www.facebook.com/mediaism.in/
YOUTUBE: https://www.youtube.com/mediaism/
TWITTER:https://twitter.com/themediaism
INSTRAGRAM:https://www.instagram.com/themediaism/