ನವದೆಹಲಿ:
CENTRAL BUDGET 2019 HIGHLIGHTS
1, ಪ್ರಧಾನ ಮಂತ್ರಿ ಸಮ್ಮಾನ್ ಕಿಸಾನ್ ನಿಧಿ ಯೋಜನೆಗೆ ಸಮ್ಮತಿ, ಯೋಜನೆ ಅಡಿ ರೈತರಿಗೆ ವಾರ್ಷಿಕ ರೂ 6000; ಮೂರು ಹಂತಗಳಲ್ಲಿ ರೈತರಿಗೆ ತಲುಪಲಿದೆ. ರೈತರ ಖಾತೆಗಳಿಗೆ ನೇರವಾಗಿ ಜಮೆಯಾಗಲಿದೆ.
2, ಸಣ್ಣ ರೈತರಿಗೆ ವಾರ್ಷಿಕ 6000 ರೂ ಬೆಂಬಲ ಧನ, ಈ ಹಣವನ್ನು ರೈತರ ಖಾತೆಗಳಿಗೆ ನೇವಾಗಿ ಮೂರು ಕಂತುಗಳಲ್ಲಿ ವರ್ಗಾವಣೆ ಮಾಡಲಾಗುವುದು. ಈ ಮೂಲಕ 12 ಕೋಟಿ ರೈತ ಕುಟುಂಬಗಳಿಗೆ ಲಾಭವಾಗಲಿದೆ. ಪಶು ಸಂಗೋಪನೆ ಹಾಗು ಮೀನುಗಾರಿಕೆಯಲ್ಲಿ ಭಾಗಿಯಾಗುವ ರೈತರಿಗೆ ಸಾಲದಲ್ಲಿ 2%ನಷ್ಟು ಬಡ್ಡಿಯಲ್ಲಿ ವಿನಾಯಿತಿ ನೀಡಲಾಗುವುದು.
3, ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನೆ ಘೋಷಣೆ.
4, ಪ್ರತಿ ವಿದ್ಯಾರ್ಥಿ ಶಾಲೆಯಿಂದ ತನ್ನ ಹಳ್ಳಿಯ ಮನೆಯ ವರೆಗೂ ಬಸ್; ಸಂಪರ್ಕ ವ್ಯವಸ್ಥೆಯಲ್ಲಿ ಅಭಿವೃದ್ಧಿ, ಉದ್ಯೋಗಖಾತ್ರಿ ಯೋಜನೆಗೆ ರೂ 60 ಸಾವಿರ ಕೋಟಿ ಮೀಸಲು. ಅಗತ್ಯ ಎನಿಸಿದರೆ ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸಲಾಗುವುದು, ಹರ್ಯಾಣದಲ್ಲಿ 22ನೇ ಏಮ್ಸ್ (ಅಖಿಲ ಭಾರತ ವೈದ್ಯಕೀಯ ಶಿಕ್ಷಣ ಸಂಸ್ಥೆ) ಆರಂಭ.
5, ರಕ್ಷಣಾ ವಲಯಕ್ಕೆ ರೂ3 ಲಕ್ಷ ಕೋಟಿಗೂ ಅಧಿಕ ಮೊತ್ತ ಮೀಸಲು, ಕಳೆದ 2 ವರ್ಷಗಳಲ್ಲಿ ಇಪಿಎಫ್ಒ ಸದಸ್ಯರ ಸಂಖ್ಯೆ 2 ಕೋಟಿಗೆ ಏರಿಕೆ.
6, ಮುದ್ರಾ ಯೋಜನೆಯಡಿ 14.5 ಕೋಟಿ ಸಾಲ.
7, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ. ಬಡ ರೈತರ ಆದಾಯ ಹೆಚ್ಚಳಕ್ಕೂ ಕ್ರಮ ಕೈಗೊಳ್ಳಲಾಗಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಆರಂಭಿಸಲಾಗಿದೆ.
8, 12 ಕೋಟಿ ರೂ ರೈತರ ಕುಟುಂಬಗಳಿಗೆ ಲಾಭ.
9, ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ: ಆಯುಷ್ಮಾನ್ ಭಾರತ್ ಮೂಲಕ 50 ಕೋಟಿ ಜನರಿಗೆ ಸಹಾಯ, ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಬಡವರ ರೂ 3000 ಕೋಟಿ ಉಳಿತಾಯ, ಶೇ 98 ಗ್ರಾಮಗಳಲ್ಲಿ ನೈರ್ಮಲ್ಯ, ಜನ ಔಷಧಿ ಕೇಂದ್ರಗಳ ಮೂಲಕ ಅತಿ ಕಡಿಮೆ ದರದಲ್ಲಿ ಜನರಿಗೆ ಔಷಧಿ.
10, ಪಶುಪಾಲನೆ ಮೀನುಗಾರಿಕೆ ಯೋಜನೆಗೆ 750 ಕೋಟಿ ರಾಷ್ಟ್ರೀಯ ಕಮಾಧೇನು ಯೋನನೆ ಘೋಷಣೆ.
11, ಗೋವುಗಳ ರಕ್ಷಣೆಗಾಗಿ ‘ರಾಷ್ಟ್ರೀಯ ಕಾಮಧೇನು ಆಯೋಗ’, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ 12 ಕೋಟಿ ಸಣ್ಣ ರೈತರಿಗೆ ಅನುಕೂಲ. ಯೋಜನೆಗಾಗಿ ರೂ 75,000 ಕೋಟಿ.
12, ತಿಂಗಳಿಗೆ ರೂ100 ಕಟ್ಟುವ ಮೂಲಕ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್’ ಪಿಂಚಣಿ ಯೋಜನೆಗೆ ಅಸಂಘಟಿತ ವಲಯದ ನೌಕರರು ನೋಂದಾಯಿಸಿಕೊಳ್ಳಬಹುದು. 60 ವರ್ಷಗಳ ನಂತರ ತಿಂಗಳಿಗೆ ರೂ3000 ಪಿಂಚಣಿ ವ್ಯವಸ್ಥೆ.
13, ಪ್ರಧಾನಿ ಕೌಶಲ್ಯ ಯೋಜನೆಯಡಿ 1 ಕೋಟಿಗೂ ಹೆಚ್ಚು ಯುವಕರಿಗೆ ತರಬೇತಿ ಶೇ.70 ರಷ್ಟು ಮಹಿಳೆಯರನ್ನು ತಲುಪಿರುವ ಉಜ್ವಲಾ ಯೋಜನೆ.
14, ಕಾರ್ಮಿಕರ ಬೋಬಸ್ 7 ಸಾವಿರ ರೂ ಏರಿಕೆ ಹೊಸ ಪೆನ್ಷನ್ ಸ್ಕೀಂ.
15, 2 ಹೆಕ್ಟೇರ್ ಭೂಮಿ ಇರುವ ರೈತರಿಗೆ 6 ಸಾವಿರ ರೂ.
16, ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತರಿಗೆ ಶೇ.2ರಷ್ಟು ಬಡ್ಡಿ ರಿಯಾಯಿತಿ. ಸಾಲ ಮರುಪಾವತಿ ಮಾಡಿದ ರೈತರಿಗೆ ಶೇ.3ರಷ್ಟು ಬಡ್ಡಿ ವಿನಾಯಿತಿ.
17, ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ: ಆಯುಷ್ಮಾನ್ ಭಾರತ್ ಮೂಲಕ 50 ಕೋಟಿ ಜನರಿಗೆ ಸಹಾಯ, ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಬಡವರ ರೂ 3000 ಕೋಟಿ ಉಳಿತಾಯ, ಶೇ 98 ಗ್ರಾಮಗಳಲ್ಲಿ ನೈರ್ಮಲ್ಯ, ಜನ ಔಷಧಿ ಕೇಂದ್ರಗಳ ಮೂಲಕ ಅತಿ ಕಡಿಮೆ ದರದಲ್ಲಿ ಜನರಿಗೆ ಔಷಧಿ…..