Breaking News

ಮನೆಯ ವಾಸ್ತುದೋಶ ನಿಮ್ಮ ಶ್ರೀಮಂತಿಕೆಯನ್ನ ನಾಶ ಮಾಡುತ್ತಾ..?

ಮನೆಯ ಕಷ್ಟಗಳನ್ನ ದೂರ ಮಾಡುತ್ತೆ ಕೆಲ ಅಪರೂಪದ ವಸ್ತುಗಳು....

SHARE......LIKE......COMMENT......

ಧರ್ಮ-ಜ್ಯೋತಿ:

ಆರ್ಥಿಕ ಸಮಸ್ಯೆ ಎಲ್ಲರನ್ನು ಕಾಡುತ್ತದೆ. ನಮ್ಮ ಸುತ್ತಮುತ್ತಲಿರುವ ಕೆಲ ವಸ್ತುಗಳು ಆರ್ಥಿಕ ವೃದ್ಧಿಗೆ ತಡೆಯಾಗಿರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಆರ್ಥಿಕ ವೃದ್ಧಿಗೆ ನೆರವಾಗುವಂತಹ ಕೆಲವೊಂದು ಉಪಾಯಗಳನ್ನು ನಾವು ಅನುಸರಿಸಿದ್ರೆ ಹಣದ ಸಮಸ್ಯೆ ಎದುರಾಗುವುದಿಲ್ಲ.

1. ಮನೆಯ ಉತ್ತರ ದಿಕ್ಕಿಗೆ ನೀರು ತುಂಬಿದ ಹೂಜಿಯನ್ನಿಡಿ. ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಹೂಜಿ ಇಲ್ಲವಾದಲ್ಲಿ ಮಣ್ಣಿನಿಂದ ಮಾಡಿದ ಸಣ್ಣ ಮಡಿಕೆಯಲ್ಲಿ ನೀರಿಡಿ. ಅದು ಎಂದೂ ಖಾಲಿಯಾಗದಂತೆ ನೋಡಿಕೊಳ್ಳಿ.

2. ಹೆಚ್ಚು ಸಮಯ ಕಳೆಯುವ ಮನೆಯ ಒಂದು ಸ್ಥಳದಲ್ಲಿ ಬೆಳ್ಳಿ ಅಥವಾ ಹಿತ್ತಾಳೆಯ ಪಿರಾಮಿಡ್ ಇಡಿ. ಇದರಿಂದ ಆದಾಯ ಹೆಚ್ಚಾಗುವ ಜೊತೆಗೆ ಎಂದೂ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ.

3. ಲೋಹದಿಂದ ಮಾಡಿದ ಆಮೆ ಅಥವಾ ಮೀನನ್ನು ಮನೆಯಲ್ಲಿಡುವುದು ಬಹಳ ಶುಭ. ಮನೆಯಲ್ಲಿರುವ ಸಮಸ್ಯೆಗೆ ಪರಿಹಾರ ಸಿಕ್ಕಿ, ಆರ್ಥಿಕ ವೃದ್ಧಿಯಾಗುತ್ತದೆ.

ಮನೆಯ ಕಷ್ಟಗಳನ್ನ ದೂರ ಮಾಡುತ್ತೆ ಕೆಲ ಅಪರೂಪದ ವಸ್ತುಗಳು:

ನವಿಲುಗರಿ ನಕಾರಾತ್ಮಕ ಶಕ್ತಿಯನ್ನು ತಗ್ಗಿಸಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತೆ. ಶ್ರೀಕೃಷ್ಣ ತನ್ನ ಮುಕುಟದ ಮೇಲೆ ನವಿಲುಗರಿ ಇಟ್ಟುಕೊಂಡಿದ್ದ. ಹಾಗೆ ನವಿಲು ಗರಿಯನ್ನು ಲೇಖನಿಯಾಗಿ ಬಳಸಿಕೊಂಡು ಮಹಾಗ್ರಂಥಗಳನ್ನು ಬರೆದಿದ್ದಾರೆ. ಈ ಉದಾಹರಣೆಗಳು ನವಿಲುಗರಿ ಎಷ್ಟು ಪವಿತ್ರ ಹಾಗೂ ನಮ್ಮ ಜೀವನದಲ್ಲಿ ಎಷ್ಟು ಮಹತ್ವ ಪಡೆದಿದೆ ಎಂಬುದನ್ನು ತಿಳಿಸುತ್ತದೆ. ಪ್ರಾಚೀನ ಕಾಲದಿಂದಲೂ ನವಿಲು ಗರಿಯನ್ನು ಅನೇಕ ಕಾರ್ಯಗಳಿಗೆ ಬಳಸಲಾಗ್ತಾ ಇದೆ. ನವಿಲುಗರಿಗೆ ನಮ್ಮ ಕಷ್ಟಗಳನ್ನು ದೂರ ಮಾಡುವ ಶಕ್ತಿ ಇದೆ. ಮನೆಯಲ್ಲಿ ನವಿಲುಗರಿಯನ್ನಿಡುವುದರಿಂದ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡುವುದಿಲ್ಲ. ದುಷ್ಟ ಶಕ್ತಿ ಹಾಗೂ ಪ್ರತಿಕೂಲವನ್ನುಂಟು ಮಾಡುವ ಶಕ್ತಿಗಳಿಂದ ನಮ್ಮನ್ನು ರಕ್ಷಿಸುವ ಶಕ್ತಿ ನವಿಲುಗರಿಗಿದೆ.

ನವಿಲುಗರಿ ಬಳಕೆಯಿಂದ ಭೂತ-ಪ್ರೇತ, ದೃಷ್ಟಿ ಬೀಳುವುದು, ಗೃಹ ದೋಷ, ವಾಸ್ತು ದೋಷದಂತ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ವಿದ್ಯಾರ್ಥಿಗಳಿಗೆ ನವಿಲುಗರಿ ಲಾಭದಾಯಕ. ನವಿಲುಗರಿಯನ್ನು ಪುಸ್ತಕದಲ್ಲಿಟ್ಟುಕೊಳ್ಳುವುದು ಬಹಳ ಒಳ್ಳೆಯದು. ನವಿಲುಗರಿಗಳನ್ನು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ನವಿಲು ಗರಿ ಕ್ಷಯ, ಅಸ್ತಮಾ, ಪಾರ್ಶ್ವವಾಯು, ನೆಗಡಿ ಮತ್ತು ಬಂಜೆತನದಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು. ಹಾವು ಹಾಗೂ ನವಿಲು ಶತ್ರುಗಳು. ಮನೆಯಲ್ಲಿ ನವಿಲುಗರಿಯಿದ್ದರೆ ಹಾವು ಮನೆಯನ್ನು ಪ್ರವೇಶಿಸುವುದಿಲ್ಲ.

ವಾಸ್ತುದೋಶ ನಿಮ್ಮ ಶ್ರೀಮಂತಿಕೆಯನ್ನ ನಾಶ ಮಾಡುತ್ತಾ?

ಉಪ್ಪಿಗಿಂತ ರುಚಿ ಬೇರೆಯಿಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆಹಾರಕ್ಕೊಂದೆ ಅಲ್ಲ, ಸೌಂದರ್ಯ ವೃದ್ಧಿಗೂ ಉಪ್ಪು ಒಳ್ಳೆಯದು ಎಂಬ ವಿಚಾರವನ್ನು ಈಗಾಗಲೇ ನಾವು ಹೇಳಿದ್ದೇವೆ. ಇಷ್ಟೇ ಅಲ್ಲ, ವಾಸ್ತು ಶಾಸ್ತ್ರದಲ್ಲಿಯೂ ಉಪ್ಪಿಗೆ ಮಹತ್ವದ ಸ್ಥಾನವಿದೆ. ಉಪ್ಪಿನ ಬಳಕೆಯಿಂದ ದೇಹದಲ್ಲಿ ಶಕ್ತಿ ವೃದ್ಧಿಯಾಗುವ ಜೊತೆಗೆ ಮನೆಗೆ ಧನಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ರಾಹು- ಕೇತುಗಳ ಅಡ್ಡ ಪರಿಣಾಮಗಳನ್ನು ತಪ್ಪಿಸಲು ಉಪ್ಪನ್ನು ಬಳಸಲಾಗುತ್ತದೆ. ದೃಷ್ಟಿ ಬಿದ್ದಾಗ ಉಪ್ಪಿನ ಮೂಲಕ ದೃಷ್ಟಿ ತೆಗೆಯಲಾಗುತ್ತದೆ. ಮನೆಯಲ್ಲಿರುವ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ದೃಷ್ಟಿ ತೆಗೆದು ಅದನ್ನು ಹೊರಗೆ ಅಥವಾ ನೀರಿಗೆ ಹಾಕುವುದರಿಂದ ದೃಷ್ಟಿ ಹೋಗುತ್ತದೆ……