Breaking News

ತಮಿಳುನಾಡಿನಲ್ಲೂ ‘ರಾಕಿ ಭಾಯ್’ ROCKS..!

ಥಿಯೇಟರ್ ಸಂಖ್ಯೆ 100 ರಿಂದ 300ಕ್ಕೆ ಹೆಚ್ಚಳ....

SHARE......LIKE......COMMENT......

ಕಾಲಿವುಡ್  :

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಹವಾ ಇನ್ನೂ ಜೋರಾಗಿದ್ದು, ಪರಭಾಷಾ ಚಿತ್ರಗಳು ಅಸ್ತಿತ್ವಕ್ಕಾಗಿ ಹೋರಾಡುವ ತಮಿಳುನಾಡಿನಲ್ಲಿ ಕೆಜಿಎಫ್ ಚಿತ್ರ ತಮಿಳು ಚಿತ್ರಗಳನ್ನೇ ಹಿಂದಿಕ್ಕಿ ತನ್ನ ಸ್ಕ್ರೀನ್ ಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಳ ಮಾಡಿಕೊಂಡಿದೆ

ಯೆಸ್ ಈ ಬಗ್ಗೆ ತಮಿಳುನಾಡಿನಲ್ಲಿ ಚಿತ್ರ ವಿತರಣೆ ಮಾಡುತ್ತಿರುವ ನಟ ವಿಶಾಲ್ ಮಾಲೀಕತ್ವದ ವಿಶಾಲ್ ಫಿಲ್ಮ್ ಫ್ಯಾಕ್ಟರಿ ತನ್ನ ಫೇಸ್ ಬುಕ್ ಹಾಗೂ ಟ್ವಿಟರ್ ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, ತಮಿಳುನಾಡಿನಲ್ಲಿ ಕೆಜಿಎಫ್ ಚಿತ್ರದ ಸ್ಕ್ರೀನ್ ಗಳ ಸಂಖ್ಯೆ 3 ಪಟ್ಟು ಹೆಚ್ಚಳವಾಗಿದೆ ಎಂದು ಹೇಳಿದೆ.100 ಸ್ಕ್ರೀನ್ ಗಳಲ್ಲಿದ್ದ ಕೆಜಿಎಫ್ ಚಿತ್ರ ತನ್ನ ವ್ಯಾಪ್ತಿಯನ್ನು ಇದೀಗ 300ಕ್ಕೂ ಅಧಿಕ ಸ್ಕ್ರೀನ್ ಗಳಿಗೆ ವಿಸ್ತರಿಸಿದೆ. ಆ ಮೂಲಕ ಗಲ್ಲಾ ಪೆಟ್ಟಿಗೆಯಲ್ಲಿ ತನ್ನ ರಾಕಿ ಭಾಯ್ ದರ್ಬಾರ್ ಮುಂದುವರೆಸಿದೆ…….