Breaking News

ಯಶ್ ‘ಗೋಕುಲ’ಕ್ಕೆ ಭಾಗ್ಯಲಕ್ಷ್ಮೀ ಎಂಟ್ರಿ..!

ಹೆಣ್ಣುಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್....

SHARE......LIKE......COMMENT......

ಸ್ಯಾಂಡಲ್​ವುಡ್:

ಸ್ಯಾಂಡಲ್​ವುಡ್​ನ  Mr&Mrs​ ರಾಮಾಚಾರಿಯ ನಿವಾಸಕ್ಕೆ ಭಾಗ್ಯಲಕ್ಷ್ಮೀ ಎಂಟ್ರಿ ಕೊಟ್ಟಿದ್ದಾಳೆ. ರಾಕಿಂಗ್ ಸ್ಟಾರ್​ ಯಶ್ ಸ್ಯಾಂಡಲ್​ವುಡ್​ ಸಿಂಡ್ರೆಲಾ ಜೋಡಿಗೆ ಹೆಣ್ಣುಮಗು ಆಗಿದೆ. ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿರುವ ಫೋರ್ಟಿಸ್ ಲಾಫೆಮ್​ ಆಸ್ಪತ್ರೆಯಲ್ಲಿ ರಾಧಿಕಾ ಬೆಳಗ್ಗೆ 6.10ಕ್ಕೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಸಿಜೆರಿಯನ್ ಮೂಲಕ ರಾಧಿಕಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯದಿಂದ್ದಾರೆ.

ಡಿಸೆಂಬರ್ 9ಕ್ಕೆ ಮಗು ಜನನಕ್ಕೆ ಡೇಟ್ ವೈದ್ಯರು ಕೊಟ್ಟಿದ್ದರು. ಹೆಣ್ಣುಮಗುವಿನ ತಂದೆಯಾಗಿರೋದಕ್ಕೆ ರಾಕಿಂಗ್ ಸ್ಟಾರ್ ಯಶ್ ಫುಲ್ ಖುಷಿಯಲ್ಲಿದ್ದಾರೆ.  ಮಗು ನೋಡೋಕೆ ಆಸ್ಪತ್ರೆಗೆ ಯಶ್, ಯಶ್ ಅಮ್ಮ, ಯಶ್ ಸಹೋದರಿ ಆಗಮಿಸಿದ್ದಾರೆ. ಮಗು-ತಾಯಿ ಇಬ್ಬರೂ ಆರಾಮವಾಗಿದ್ದು, ಮಗು ಮೂರೂವರೆ ಕೆಜಿ ಇದೆ…….