Breaking News

20, 30, 40ರ ಆಸುಪಾಸಿನ ಯುವಕರಲ್ಲಿ ಹೆಚ್ಚಾದ ಕೊರೋನಾ..!

ಮತ್ತಷ್ಟು ಆತಂಕ ತರುವಂತಿದೆ WHO ನ ವರದಿ....

SHARE......LIKE......COMMENT......

ಜಿನೆವಾ:

ಕೊರೋನಾ ವೈರಸ್ ಹರಡುವಿಕೆ ಜನರಲ್ಲಿ ಮತ್ತಷ್ಟು ಆತಂಕ ತರುತ್ತಿದೆ. ಕೊರೋನಾ ವೈರಸ್ ಮಹಾಮಾರಿ ವಕ್ಕರಿಸಿದ ಬಳಿಕ ಆಯಾ ದೇಶದ ಆರೋಗ್ಯ ಸಚಿವಾಲಯ ಅಂಕಿ ಅಂಶ ಬಿಡುಗಡೆ ಮಾಡುತ್ತಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ(WHO) ಹೊಸ ಅಂಕಿ ಅಂಶ ತೆರೆದಿಟ್ಟಿದೆ. ಇದು ಮತ್ತಷ್ಟು ಆತಂಕ ತರುವಂತಿದೆ. WHO ಪ್ರಕಾರ ಸದ್ಯ ಕೊರೋನಾ 20, 30, 40ರ ಆಸುಪಾಸಿನ ಯುವಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ವರದಿ ಮಾಡಿದೆ. ಈ ಯುವಕರಿಗೆ ಕೊರೋನಾ ವೈರಸ್ ತಗುಲಿರುವ ಕುರಿತು ಅವರಿಗೆ ಅರಿವೇ ಇರುವುದಿಲ್ಲ. 20,30,40ರ ಆಸುಪಾಸಿನಲ್ಲಿರುವವರಲ್ಲಿ ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಇಷ್ಟೇ ಅಲ್ಲ, ಈ ಗುಂಪು ಕೆಲಸ ಕಾರ್ಯಗಳು ಸೇರಿದಂತೆ ಹಲವು ಕಾರಣಗಳಿಂದ ಅನಿವಾರ್ಯವಾಗಿ ಮನೆಯಿಂದ ಹೊರಬರಬೇಕಿದೆ. ಇದರಿಂದ ಈ ವಯಸ್ಸಿನವರಲ್ಲಿ ಹೆಚ್ಚು ಕೊರೋನಾ ವೈರಸ್ ಕಾಣಿಸಿಕೊಳ್ಳುತ್ತಿದೆ. ಈ ವಯಸ್ಸಿನ ಯುವಕರಲ್ಲಿ ಕೊರೋನಾ ವೈರಸ್ ಹೆಚ್ಚಿನ ಪರಿಣಾಮ ಬೀರುತ್ತಿಲ್ಲ. ಆದರೆ ಇದೇ ಗುಂಪು ಹಿರಿಯರು, ಮಕ್ಕಳ ಸಂಪರ್ಕಕ್ಕೆ ಬರುತ್ತಿರುವ ಕಾರಣ ಪರಿಸ್ಥಿತಿ ಮತ್ತಷ್ಟು ಬಿಗಾಡಾಯಿಸುತ್ತಿದೆ ಎಂದು WHO ಹೇಳಿದೆ.  ಕೊರೋನಾ ವೈರಸ್ ಲಸಿಕೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ತೀವ್ರ ನಿಘಾ ವಹಿಸಿದೆ. ಸಂಶೋಧನೆ, ಅಧ್ಯಯನ ವರದಿಗಳ ಮಹತ್ವ ಮಾಹಿತಿಗಳನ್ನು ಲಸಿಕೆ ಸಂಶೋಧಕರಿಗೆ ನೀಡುತ್ತಿದೆ ಎಂದು WHO ಹೇಳಿದೆ……