Breaking News

ದೇಶದಲ್ಲಿ ಲಕ್ಷ ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ..!

ಕೊರೋನಾದಿಂದ ನೌಕರರ ಮೇಲೆ ಹೆಚ್ಚು ಪರಿಣಾಮ....

SHARE......LIKE......COMMENT......

ನವದೆಹಲಿ:

ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, 41 ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ನಿರ್ಮಾಣ ಮತ್ತು ಕೃಷಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ಮಾಡುವ ನೌಕರರ ಮೇಲೆ ಇದು ಹೆಚ್ಚು ಪರಿಣಾಮ ಬೀರಿದೆ. ಉದ್ಯೋಗಾವಕಾಶದಲ್ಲಿಯೂ ಕೂಡ ಹಿನ್ನಡೆ ಅನುಭವಿಸಿದೆ. ಇದನ್ನು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಜಂಟಿ ವರದಿಯಲ್ಲಿ ತಿಳಿಸಲಾಗಿದೆ. “ಏಷ್ಯಾ ಹಾಗೂ ಪೆಸಿಫಿಕ್ನಲ್ಲಿ ಕೋವಿಡ್ -19 ಯುವ ಉದ್ಯೋಗ ಬಿಕ್ಕಟ್ಟಿನ ನಿರ್ವಹಣೆ” ಎಂಬ ಶೀರ್ಷಿಕೆಯೊಂದಿಗೆ ಮಂಗಳವಾರ ಬಿಡುಗಡೆಯಾದ ಐಎಲ್ಒ-ಎಡಿಬಿ ವರದಿಯಲ್ಲಿ, ಭಾರತದಲ್ಲಿ 41 ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಏಳು ಪ್ರಮುಖ ಕ್ಷೇತ್ರಗಳಲ್ಲಿ, ನಿರ್ಮಾಣ ಮತ್ತು ಕೃಷಿಯಲ್ಲಿ ಅತಿ ಹೆಚ್ಚು ಉದ್ಯೋಗ ಕಳೆದುಕೊಂಡಿದ್ದಾರೆ ” ಎಂದು ಹೇಳಲಾಗಿದೆ.15 ರಿಂದ 24 ವರ್ಷ ವಯಸ್ಸಿನ ಯುವಕರಿಗಿಂತ 25 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಯುವಕರು ಅತಿ ಹೆಚ್ಚು ಪ್ರಭಾವಕ್ಕೆ ‌ಒಳಗಾಗಿದ್ದಾರೆ. ಅಷ್ಟೇ ಅಲ್ಲ ಆರ್ಥಿಕ ಮತ್ತು ಸಾಮಾಜಿಕ ವೆಚ್ಚಗಳ ಪ್ರಕಾರ, ಈ ರಿಸ್ಕ್ ದೀರ್ಘಕಾಲಿಕ ಹಾಗೂ ವ್ಯಾಪಕವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ……