ಹೈದರಾಬಾದ್:
ಅಧಿಕ ರಕ್ತದೊತ್ತಡದಿಂದ ಹೈದರಾಬಾದ್ನ ಆಸ್ಪತ್ರೆಗೆ ದಾಖಲಾಗಿರೋ ಸೂಪರ್ ಸ್ಟಾರ್ ರಜನಿಕಾಂತ್ ಡಿಸ್ಚಾರ್ಜ್ ಬಗ್ಗೆ ಇಂದು ವೈದ್ಯರು ನಿರ್ಧಾರ ಮಾಡಲಿದ್ದಾರೆ. ಅಧಿಕ ರಕ್ತದೊತ್ತಡದಿಂದ ಆಸ್ಪತ್ರೆಗೆ ದಾಖಲಾಗಿರೋ ರಜಿನಿಗೆ ವೈದ್ಯರು ಟೆಸ್ಟ್ ಮೇಲೆ ಟೆಸ್ಟ್ ಮಾಡಿದ್ದಾರೆ. ಇವತ್ತು ಫೈನಲ್ ಟೆಸ್ಟ್ ರಿಪೋರ್ಟ್ ಬರಲಿದ್ದು ಡಿಸ್ಚಾರ್ಜ್ ಮಾಡ್ಬೇಕಾ ಬೇಡ್ವಾ ಅನ್ನೋ ನಿರ್ಧಾರ ಮಾಡಲಿದ್ದಾರೆ. ಹೈದ್ರಾಬಾದ್ನಲ್ಲಿ ಅಣ್ಣಾತೆ ಸಿನಿಮಾ ಶೂಟಿಂಗ್ ವೇಳೆ ಕೆಲವರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಶೂಟಿಂಗ್ ಅರ್ಧಕ್ಕೇ ನಿಂತಿತ್ತು. ಸ್ವತಃ ರಜನಿಕಾಂತ್ ಐಸೊಲೇಷನ್ಗೆ ಒಳಗಾಗಿದ್ದರು. ಅದಾದ ನಂತ್ರ ರಜಿನಿ ರಕ್ತದೊತ್ತಡದಲ್ಲಿ ಏರುಪೇರಾಗಿತ್ತು……