ಬೆಂಗಳೂರು:
ಶಕೀಲಾ ಈ ಹೆಸ್ರು ಯಾರಿಗೆ ಗೊತ್ತಿಲ್ಲ ಹೇಳಿ..? ಈ ಹೆಸ್ರು ಕೇಳಿದ್ರೆ ಅದೆಷ್ಟೋ ಮಂದಿಗೆ ನಿದ್ದೆನೇ ಬರಲ್ವಂತೆ, ಇನ್ ಕೆಲವರಿಗೆ ಈಕೆಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇನ್ನು ನಿಂತಿಲ್ಲ ಯಾಕಂದ್ರೆ, ಬಹುಭಾಷಾ ತಾರೆಯಾಗಿ ಎಲ್ಲಾ ಚಿತ್ರರಂಗದಲ್ಲಿಯೋ ಮೋಡಿ ಮಾಡಿದ ಶಕೀಲಾ, ಭಾರತೀಯ ಚಿತ್ರೋದ್ಯಮದಲ್ಲಿ ಹಾಟೆಸ್ಟ್ ವೇವ್ ಸೃಷ್ಟಿಸಿದಾಕೆ. ಹರೆಯದವರಿಂದ ಹಿಡಿದು ಹಣ್ ಹಣ್ ಮುದುಕರ ವರೆಗೂ ಶಕೀಲಾ ಹೆಸರು ಕೇಳಿದ್ರೆ ಸಾಕು ಥ್ರಿಲ್ ಆಗಿ ಬಿಡ್ತಾರೆ. ಅಂತಹ ಮೋಹಕ-ಮಾದಕ ಕಥಾನಾಯಕಿ ಶಕೀಲಾ.
ಹರೆಯದ ಯುವಕರಿಂದ ಹಿಡಿದು ವೃದ್ಧರೂ ಇಷ್ಟ ಪಡ್ತಿದ್ದ ಇಷ್ಟದೇವತೆ ಈಕೆ. ಇವತ್ತಿಗೂ ಆಕೆಯ ಸಿನಿಮಾಗಳನ್ನ ಕದ್ದು-ಮುಚ್ಚಿ ನೋಡುವರು ಇದ್ದಾರೆ. ಇನ್ನು ಶಕೀಲಾ ರೀಲ್ನಲ್ಲಿ ನೋಡಿ ಥ್ರಿಲ್ ಆದವರೆಗೆ ರಿಯಲ್ ಲೈಫ್ ಬಗ್ಗೆ ಗೊತ್ತಾದ್ರೆ ಖಂಡಿತಾ ನಿಮ್ಮ ಕಣ್ಣಲ್ಲಿ ನೀರು ಬಂದೆ ಬರುತ್ತೆ. ಅಷ್ಟಕ್ಕೂ ಯಾಕೆ ಈ ಮಾತು ಹೇಳ್ತೀವಿ ಅಂತೀರಾ..? ರೀಲ್ ಮೇಲೆ ನೋಡಿ ವಾವ್ ಅಂದಿದ್ದ ಶಕೀಲಾ ರಿಯಲ್ ಸ್ಟೋರಿ ಕೇಳುಗರನ್ನ ಬೆಚ್ಚಿ ಬೀಳಿಸುತ್ತದೆ. ನಿಜಕ್ಕೂ ಶಕೀಲಾ ಯಾರು..? ಆಕೆಯ ಲೈಫ್ ಹಿಸ್ಟರಿ ಏನ್ ಇರಬಹುದು ಅನ್ನೊ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ.
ನಿರ್ದೇಶಕ ಇಂದ್ರಜಿತ್ ಲಂಕೇಶ್, ಶಕೀಲಾ ಬಯೋಪಿಕ್ನಲ್ಲಿ ಶಕೀಲಾ ರಿಯಲ್ ಲೈಫ್ ಸ್ಟೋರಿಯ ಎಳೆ-ಎಳೆಯನ್ನು ತುಂಬಾ ಅದ್ಭುತವಾಗಿ ವರ್ಣಿಸಿದ್ದಾರಂತೆ. ಇದ್ರಲ್ಲಿ ಶಕೀಲಾ ಫ್ಯಾಮಿಲಿ, ವೈಯಕ್ತಿಕ ಹಾಗೂ ವೃತ್ತಿ ಬದುಕು, ಕುಟುಂಬ, ಬಾಲ್ಯ ಹೀಗೆ ಎಲ್ಲಾ ಕಥೆಯೂ ಒಳಗೊಂಡಿದೆಯಂತೆ. ಇನ್ನು ಶಕೀಲಾ ಪಾತ್ರದಲ್ಲಿ ಬಾಲಿವುಡ್ ಬೆಡಗಿ ರಿಚಾ ಚಡ್ಡಾ ಮಿಂಚಿದ್ದಾರೆ. ಈಗ ಇದರ ಟೀಸರ್ ರಿಲೀಸ್ ಆಗಿದೆ. ಇದಕ್ಕೆ ಫಿದಾ ಆಗಿರುವ ಪ್ರೇಕ್ಷಕರು ತೆರೆ ಮೇಲೆ ಶಕೀಲಾ ಜೀವನಾಗಾಥೆ ನೋಡಲು ವೈಟ್ ಮಾಡ್ತಿದ್ದಾರೆ.
ಇನ್ನು ಈ ಸಿನಿಮಾವನ್ನ ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಸೇರಿದಂತೆ ಕೇರಳದಲ್ಲೂ ಚಿತ್ರೀಕರಿಸಿದ್ದಾರೆ. ಒಂದ್ ಕಾಲದಲ್ಲಿ ಶಕೀಲಾ ಅಂದರೆ ಬಿಗ್ ಸ್ಟಾರ್ಸ್ಗಳಿಗೆ ಕೂಡ ನಡುಕ ಸೃಷ್ಟಿಯಾಗ್ತಿತ್ತು. ಯಾಕಂದ್ರೆ ಶಕೀಲಾ ಸಿನಿಮಾದ ಮುಂದೆ ಬಿಗ್ ಹೀರೋಗಳ ಸಿನಿಮಾಗಳು ರಿಲೀಸ್ ಆಗೋಕೆ ಹಿಂದು ಮುಂದು ನೋಡ್ತಿದ್ರು. ಇಂತಹ ಶಕೀಲಾ ಜೀವನ ಕಥೆ ಈಗ ಸಿನಿಮಾ ಆಗಿ ಬರ್ತಿದೆ. ಡಿಸೆಂಬರ್ 25ಕ್ಕೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ರಿಲೀಸ್ ಆಗಲಿದೆ……