ಬೆಂಗಳೂರು:
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ನಾಳೆಯಿಂದ ಎರಡು ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್ ನೌಕರರು ಮುಷ್ಕರ ಹೂಡಲಿದ್ದಾರೆ. ಶೇಕಡಾ 20ರಷ್ಟು ವೇತನ ಹೆಚ್ಚಳ, ವಾರದಲ್ಲಿ ಐದು ದಿನ ಬ್ಯಾಂಕ್ ಕಾರ್ಯ ನಿರ್ವಹಣೆ, ಹೊಸ ಪಿಂಚಣಿ ಯೋಜನೆ ಕೈಬಿಡುವುದು, ಪಿಂಚಣಿಯನ್ನು ಪರಿಷ್ಕರಣೆ ಮಾಡುವುದು, ಕುಟುಂಬ ಪಿಂಚಣಿಯನ್ನು ಉತ್ತೇಜನ ಮಾಡುವುದು, ಸಿಬ್ಬಂದಿ ಕಲ್ಯಾಣ ವೇತನವನ್ನು ಏರಿಕೆ ಮಾಡುವುದು ಎಲ್ಲ ನೌಕರರಿಗೂ ಒಂದೇ ಸಮಯವನ್ನು ನಿಗದಿಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂಬುದು ಬ್ಯಾಂಕ್ ಒಕ್ಕೂಟಗಳ ಮನವಿಯಾಗಿದೆ……