Breaking News

ಬೆಂಗಳೂರು ವಿಶ್ವದ ವರ್ಸ್ಟ್​ ಟ್ರಾಫಿಕ್​ ಸಿಟಿ..!

ವಿಶ್ವದ 193 ದೇಶಗಳಲ್ಲೇ ನಂಬರ್​ 1 ಸ್ಥಾನ....

SHARE......LIKE......COMMENT......

ಬೆಂಗಳೂರು:

ಗಾರ್ಬೇಜ್​ ಸಿಟಿ ಅಂತಾ ಕುಖ್ಯಾತಿ ಪಡೆದಿದ್ದ ಬೆಂಗಳೂರಿಗೆ ಈಗ ಮತ್ತೊಂದು ಕುಖ್ಯಾತಿ. ಇದೀಗ ವಿಶ್ವದ ವರ್ಸ್ಟ್​ ಟ್ರಾಫಿಕ್​ ಸಿಟಿ ಪಟ್ಟಿಯಲ್ಲಿ ಬೆಂಗಳೂರು ಅಗ್ರ ಸ್ಥಾನದಲ್ಲಿದೆ. ವಿಶ್ವದ 193 ದೇಶಗಳಲ್ಲೇ ನಂಬರ್​ 1 ಸ್ಥಾನದಲ್ಲಿ ಭಾರತವಿದೆ. ಜನಸಂಖ್ಯಾ ಸ್ಫೋಟ, ಕೆಟ್ಟ ರಸ್ತೆಗಳು, ಹೆಚ್ಚಿನ ವಾಹನಗಳ ಸಂಖ್ಯೆ, ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದು. ವಿವಿಐಪಿ ಸಂಸ್ಕೃತಿ, ಧಾರ್ಮಿಕ ಹಾಗೂ ರಾಜಕೀಯ ಮೆರವಣಿಗೆಗಳು, ಪ್ರತಿಭಟನೆಗಳು ಇಡೀ ಬೆಂಗಳೂರನ್ನು ಟ್ರಾಫಿಕ್​ ಸಿಟಿಯನ್ನಾಗಿ ಮಾಡಿದೆ.

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ವರ್ಷದಲ್ಲಿ 243 ಗಂಟೆ ಟ್ರಾಫಿಕ್​ ನಲ್ಲೇ ಕಾಲ ಕಳೆಯುತ್ತಾನೆ. ಆತ ಜರ್ನಿ ಮಾಡಲು ಬೇಕಾದ ಶೇಕಡಾ 75ರಷ್ಟು ಹೆಚ್ಚು ಸಮಯವನ್ನು ತಗೆದುಕೊಳ್ತಾನೆ. ಅಂದರೆ 10 ದಿನ 3 ಗಂಟೆಯನ್ನು ಟ್ರಾಫಿಕ್​ನಲ್ಲೇ ಕಳೆಯಬೇಕು ಎಂದು ಡೆನ್ಮಾರ್ಕ್​ನ ನ್ಯಾವಿಗೇಷನ್​ ಅಳವಡಿಕೆ ಕಂಪನಿಯಾದ ಟಾಂ ಟಾಂ ವರದಿ ರಿಲೀಸ್ ಮಾಡಿದೆ. ಪ್ರತಿವರ್ಷ ಭಾರತದಲ್ಲಿ ಸಂಚಾರ ದಟ್ಟಣೆಯಿಂದ ಅಂದಾಜು 15 ಸಾವಿರ ಕೋಟಿ ನಷ್ಟವಾಗುತ್ತಿದೆ ಎಂದು ವರದಿ ಹೇಳಿದೆ. ಈ ಮೊದಲು 2009ರಲ್ಲಿ ಕಸದ ಸಮಸ್ಯೆಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ತಲೆತಗ್ಗಿಸುವಂತಾಗಿತ್ತು. ಟ್ರಾಫಿಕ್​ ಇರುವ ವಿಶ್ವದ ಟಾಪ್​ 10 ಸಿಟಿಗಳಲ್ಲಿ ಮುಂಬೈ, ದಿಲ್ಲಿ, ಪುಣೆ ಕೂಡಾ ಸೇರಿವೆ. 57 ದೇಶಗಳ 416 ನಗರಗಳ ಸಂಚಾರ ದಟ್ಟಣೆಯನ್ನು ಅಧ್ಯಯನ ಮಾಡಿ ಈ ಱಂಕ್​ ನೀಡಲಾಗಿದೆ……