ಮೈಸೂರು:
ಸಿದ್ದರಾಮಯ್ಯ ಅಂಡ್ ಟೀಂ ಸಿಂಧಗಿಯಲ್ಲಿ ಕುಳಿತೊರೋದೆ ಜೆಡಿಎಸ್ ಸೋಲಿಸಿ ಬಿಜೆಪಿಯನ್ನ ಗೆಲ್ಲಿಸಲು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ,ಸಿಂಧಗಿಯಲ್ಲಿ ಸ್ಪರ್ಧೆ ಇರೋದೆ ಜೆಡಿಎಸ್ ಬಿಜೆಪಿ ನಡುವೆ ಮಾತ್ರ ಆದ್ರೆ ಕಾಂಗ್ರೆಸ್‌ನವರು ಅಲ್ಲಿ ಯಾಕೆ ಬೀಡು ಬಿಟ್ಟಿದ್ದಾರೆ ಅವರ ಉದ್ದೇಶ ಜೆಡಿಎಸ್ ಸೋಲಿಸಿ ಬಿಜೆಪಿ ಗೆಲ್ಲಿಸೋದು.ಎಂದು ಕಾಂಗ್ರೆಸ್ ಗೆ ಚಾಟಿ ಬೀಸಿದ್ದಾರೆ..ಹಾಗೂ ಸಿದ್ದರಾಮಯ್ಯ ಪ್ರತಿ ಸಭೆಯಲ್ಲೂ ನನ್ನ ವಿರುದ್ದ ಹೊಲ ಉಳುಮೆ ಮಾಡಿದ್ದಾನಾ ಅಂತಾ ಆರೋಪ ಮಾಡ್ತಾರೆ.,ನಿಜವಾದ ರೈತ ನಾನು, ನಾವು ಕುರಿ ಮಂದೆಯ ನಡುವೆ ಊಟ ಮಾಡಿ ಮಲಗಿದ್ದೇನೆ.ನಾನು ಕೃಷಿಕನೋ ಅಲ್ಲವೋ ಅಂತ ಬಿಡದಿ ತೋಟಕ್ಕೆ ಬಂದು ನೋಡಲಿ.ಆದ್ರೆ ಸಿದ್ದರಾಮಯ್ಯ ಎಲ್ಲಿ ಹೊಲ ಉಳುಮೆ ಮಾಡಿದ್ದಾರೆ.ಅವರದ್ದು ಒಂದು ಫಾರಂ ಹೌಸ್ ಇದ್ಯಲ್ಲ, ಏನ್ ಬಿತ್ತಿದ್ದಾರೆ ಎಂದು
ಸಿದ್ದರಾಮಯ್ಯ ಮಾಡಿದ ಆರೋಪಕ್ಕೆ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದರೆ…