ಬೆಂಗಳೂರು:
ನ್ಯೂ ಇಯರ್ಗೆ ಕೌಂಟ್ಡೌನ್ ಶುರುವಾಗ್ತಿದಂತೆ ಸಿಟಿ ಜನ್ರಲ್ಲಿ ಪಾರ್ಟಿಯದ್ದೇ ಚಿಂತೆ..ಆದ್ರೆ ಈ ಬಾರಿ ಕೊರೊನಾದಿಂದ ಪಾರ್ಟಿ ಮಾಡೋದಕ್ಕೂ ಕೊಂಚ ಬ್ರೇಕ್ ಬಿದ್ದಿದೆ. ಆದ್ರೆ ನಮ್ಮ ಸಿಟಿ ಜನ್ರು ಸೆಲೆಬ್ರೇಷನ್ ಮಾಡೋದಕ್ಕು ಮೊದ್ಲ್ ಸಖತ್ ಸ್ಟೈಲೀಶ್ ಆಗಿ ಕಾಣ್ಬೇಕು ಅನ್ಕೋಳ್ಳೋದು ಕಾಮನ್. ಅದ್ಕಾಗಿ ಇಷ್ಟು ದಿನ ಮನೆಯೊಳಗಿದ್ದ ಸಿಟಿ ಜನ್ರು ಹೊರ ಬಂದು ಶಾಪಿಂಗ್ನಲ್ಲಿ ತೊಡಗಿದ್ದಾರೆ. ಅದ್ರಲ್ಲೂ ಈ ಬಾರಿ ನ್ಯೂ ಇಯರ್ ಸೆಲೆಬ್ರೇಷನ್ಗೆ ಬ್ರೇಕ್ ವಾಪಸ್ ಬೆನ್ನಲೆ ಸಿಟಿ ಜನ್ರು ಸಖತ್ ಕುಷ್ ಆಗಿದ್ದಾರೆ. ಅದ್ರಲ್ಲೂ ನ್ಯೂ ಇಯರ್ಗಾಗಿ ಡಿಫರೆಂಟ್ ಡಿಫರೆಂಟ್ ಪಾರ್ಟಿ ಡ್ರೆಸ್ಗಳು ಮಲ್ಲೇಶ್ವರಂನ ಶಾಪಿಂಗ್ ಕಾಂಪ್ಲೇಕ್ಸ್ಗೆ ಎಂಟ್ರಿಯಾಗಿದೆ. ಆದ್ರಲ್ಲೂ ಬಾಂಬೆ, ಡೆಲ್ಲಿ ಎಲ್ಲಾ ಕಡೆಗಳಿಂದ ಈ ಬಾರಿ ತರಿಸಿದ್ದೇವೆ. ಕೊರೊನಾದಿಂದ ಲಾಸ್ ಆಗಿತ್ತು ಇದೀಗ ಮತ್ತೆ ಬ್ಯುಸಿನೆಸ್ ಚೆನ್ನಾಗಿ ನಡೆಯುತ್ತಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಒಟ್ಟಾರೆಯಾಗಿ ನ್ಯೂ ಇಯರ್ಗೆ ಕೌಂಟ್ಡೌನ್ ಶುರುವಾಗ್ತಿದಂತೆ 2020ಕ್ಕೆ ಬಾಯ್ ಬಾಯ್ ಹೇಳಿ, 2021ನ್ನ ವೆಲ್‌ಕಮ್ ಮಾಡೋದಕ್ಕೆ ಸಿಲಿಕಾನ್ ಸಿಟಿ ಸಜ್ಜಾಗುತ್ತಿದ್ದು, ತಮಗಿಷ್ಟವಾದ ಕಲರ್ಫುಲ್ ಡ್ರೆಸ್ ತೊಟ್ಟು ಮಿಂಚೋದಕ್ಕೆ ಮುಂದಾಗ್ತಿರೋದು ನಿಜ……