ದೇಶ ವಿದೇಶ/ನವದೆಹಲಿ:
ಕೊರೋನಾ ರೂಪಾಂತರಿ ವೈರಸ್ ಭಯ ತಲ್ಲಣ ಹುಟ್ಟಿಸಿದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಮುಂದಿನ ವರ್ಷ ಅಂದ್ರೆ 2021ರಲ್ಲಿ ಜನ ಜಾಗೃತಿಯಿಂದ ಇರಬೇಕಾಗಿದೆ ಎಂದು ಎಚ್ಚರಿಕೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ಸಮಸ್ಯೆಗಳ ಪಟ್ಟಿ ಸಿದ್ಧಪಡಿಸಿದೆ. ಜಗತ್ತಿನಾದ್ಯಂತ ಕೊರೋನಾ ವೈರಸ್ ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ಗಮನಿಸುತ್ತಿರುವ ಜಾಗತಿಕ ಆರೋಗ್ಯ ಸಂಸ್ಥೆ, ಕಳೆದ 20 ವರ್ಷಗಳಲ್ಲಿ ಮಾಡಲಾದ ಜಾಗತಿಕ ಆರೋಗ್ಯ ಪ್ರಗತಿಯಲ್ಲಿ ತೀವ್ರ ಗತಿಯಲ್ಲಿ ಇಳಿ ಮುಖವಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಾಗ, ಆರೋಗ್ಯ ಆರೈಕೆ ವ್ಯವಸ್ಥೆಗಳನ್ನ ಸರಿಪಡಿಸಲು ಮತ್ತು ಬಲಪಡಿಸಲು ವಿಶ್ವದ ರಾಷ್ಟ್ರಗಳು ಸಾಕಷ್ಟು ಸಂಪನ್ಮೂಲಗಳು ಮತ್ತು ಶಕ್ತಿಯನ್ನ ವಿನಿಯೋಗಿಸಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ…….