ನವದೆಹಲಿ:
2025ರೊಳಗೆ ದೇಶದ 25 ನಗರಗಳಲ್ಲಿ ಮೆಟ್ರೊ ಸೇವೆ ದೊರೆಯಲಿದೆ ಅಂತಾ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ಭಾರತದ ಮೊಟ್ಟ ಮೊದಲ ಚಾಲಕರಹಿತ ಮೆಟ್ರೊ ರೈಲು ಕಾರ್ಯಾಚರಣೆಗೆ ಆನ್ಲೈನ್ ಮೂಲಕ ಚಾಲನೆ ನೀಡಿದ ಬಳಿಕ ಈ ಘೋಷಣೆ ಮಾಡಿದ್ದಾರೆ. ಆಟೊಮ್ಯಾಟಿಕ್ ಮತ್ತು ಚಾಲಕರಹಿತ ಈ ಮೆಟ್ರೊ ರೈಲು, ಜನಕಪುರಿ ವೆಸ್ಟ್ನಿಂದ ಬೊಟಾನಿಕಲ್ ಗಾರ್ಡನ್ವರೆಗಿನ 37 ಕಿಲೋ ಮೀಟರ್ ನೀಲಿ ಮಾರ್ಗದಲ್ಲಿ ಸಂಚರಿಸಲಿದೆ. 2025ರೊಳಗೆ 25ಕ್ಕೂ ಅಧಿಕ ನಗರಗಳಲ್ಲಿ ಮೆಟ್ರೊ ಸೇವೆಯನ್ನು ವಿಸ್ತರಿಸಲಿದ್ದೇವೆ ಎಂದು ಮೋದಿ ಹೇಳಿದ್ದಾರೆ……