ರಾಜಸ್ತಾನ:
ಹೆಂಡ್ತಿ ಮೇಲಿದ್ದ ತನ್ನ ಪ್ರೀತಿಗೆ ಗಂಡ ತನ್ನ ವಿವಾಹ ವಾರ್ಷಿಕೋತ್ಸವವನ್ನ ವಿಶೇಷವಾಗಿ ಆಚರಿಸಿಕೊಳ್ಳಬೇಕು ಅಂತ ರಾಜಸ್ತಾನದ ಅಜ್ಮೀರ್ನ ಧರ್ಮೇಂದ್ರ ಅನಿಜಾ ಎಂಬವ್ರು ಚಂದ್ರನ ಮೇಲೆ 3 ಎಕರೆ ಪ್ರದೇಶವನ್ನ ಖರೀದಿ ಮಾಡಿದ್ದಾರೆ. ಆ 3 ಎಕರೆ ಪ್ರದೇಶವನ್ನ ಪತ್ನಿ ಸಪ್ನಾ ಅನಿಜಾಗೆ ಧರ್ಮೇಂದ್ರ ಗಿಫ್ಟ್ ನೀಡಿದ್ದಾರೆ. ಚಂದಿರನ ಮೇಲಿನ ಜಮೀನು ಖರೀದಿ ಪ್ರಕ್ರಿಯೆ ಪೂರ್ತಿಗೊಳಿಸಲು ಸುಮಾರು 1 ವರ್ಷ ಕಾಲಾವಕಾಶ ತೆಗೆದುಕೊಂಡಿದೆ. ನ್ಯೂಯಾರ್ಕ್ ನಗರದ ಲೂನ ಸೊಸೈಟಿ ಇಂಟರ್ನ್ಯಾಷನಲ್ನಿಂದ ಧರ್ಮೇಂದ್ರ ಚಂದ್ರನ ಮೇಲೆ ಜಾಗ ಖರೀದಿಸಿದ್ದು, ಗಂಡನ ಗಿಫ್ಟ್ಗೆ ಹೆಂಡ್ತಿ ಫುಲ್ ಥ್ರಿಲ್ ಆಗಿದ್ದಾರೆ……