Breaking News

ಭಾರತ-ಚೀನಾ ಅಘೋಷಿತ ಯುದ್ಧದಲ್ಲಿ 20 ಯೋಧರು ಹುತಾತ್ಮ ..!

ಸೈನಿಕರ ಸಂಘರ್ಷದಲ್ಲಿ ಚೀನಾದ 43 ಯೋಧರು ಫಿನಿಶ್...

SHARE......LIKE......COMMENT......

ಲಡಾಖ್:

ಭಾರತ-ಚೀನಾ ಅಘೋಷಿತ ಯುದ್ಧದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ ,ಸೈನಿಕರ ಸಂಘರ್ಷದಲ್ಲಿ ಚೀನಾದ 43 ಯೋಧರನ್ನ ಭಾರತ ಹೊಡೆದು ಉರುಳಿಸಿದೆ ಎಂದು ANI ಸುದ್ದಿ ಸಂಸ್ಥೆಯಿಂದ ಮಾಹಿತಿ ಕೊಟ್ಟಿದೆ….

ಇದ್ದಕ್ಕೆಲ್ಲಾ ಕಾರಣ ಗಲ್ವಾನ್ ರಿವರ್ ವ್ಯಾಲಿಯಲ್ಲಿ ಭಾರತದ ಅಭಿವೃದ್ಧಿ ಕಾರ್ಯ ನಡೆಸುತ್ತಿದೆ ಬೃಹತ್ ರಸ್ತೆ, ಸೇತುವೆ ನಿರ್ಮಿಸುತ್ತಿದೆ,ಹಾಗೂ ವಾಯುನೆಲೆ ರೆಡಿಮಾಡುತ್ತಿದೆ ಎಂದು ಚೀನಾ ಸೇನೆ ಕ್ಯಾತೆ ತೆಗೆಯುತ್ತಾ ಬರುತ್ತಿತ್ತು ಸೋಮವಾರ ರಾತ್ರಿ ಏಕಾಏಕಿ ಕ್ಯಾತೆ ತೆಗೆದು ಚೀನಾ ಸೈನಿಕರು ಭಾರತದ ಸೈನಿಕರ ಜೊತೆ ಸಂಘರ್ಷಕ್ಕೆ ಇಳಿದರು..

ಗಾಲ್ವನ್‌ ಕಣಿವೆ ಮತ್ತು ಪಾಂಗಾಂಗ್‌ ತ್ಸೊ ಸರೋವರ ಬಳಿ ಉತ್ತರ ದಂಡೆಯಲ್ಲಿ ಇನ್ನೂ ಚೀನಾದ ಸೈನಿಕರು ಬೀಡುಬಿಟ್ಟಿದ್ದಾರೆ ,45 ವರ್ಷಗಳ ನಂತರ ಚೀನಾ-ಭಾರತ ಗಡಿಯಲ್ಲಿ ನೆತ್ತರು ಹರಿದಿದ್ದು ಸಂಘರ್ಷದ ಬೆನ್ನಲ್ಲೇ ಗಡಿಯಲ್ಲಿ ಉಭಯಸೇನಾ ಹೆಲಿಕಾಪ್ಟರ್​​ಗಳ ಹಾರಾಟ ವಾರ್ ಟೆನ್ಷನ್​​ ಶುರುವಾಗಿದೆ….