Breaking News

ಹೆಚ್.ಡಿ. ದೇವೇಗೌಡರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ..!

ಪ್ರಶಸ್ತಿ ನೀಡೋ ಚಾನ್ಸ್ ಮಿಸ್ ಮಾಡಿಕೊಂಡ HDK....

SHARE......LIKE......COMMENT......

ಬೆಂಗಳೂರು:

ಭಾರತದ ಮಾಜಿ ಪ್ರಧಾನಮಂತ್ರಿಗಳೂ, ಹಾಸನ ಲೋಕಸಭಾ  ಸದಸ್ಯರೂ ಆದ ಹೆಚ್.ಡಿ.ದೇವೇಗೌಡರನ್ನು ರಾಜ್ಯ ಸರ್ಕಾರ ಈ ಬಾರಿಯ ಪ್ರತಿಷ್ಠಿತ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ನೇಮಿಸಿದ್ದ ಸಮಿತಿ ಶಿಫಾರಿಸಿನಂತೆ ಈ ಪ್ರಶಸ್ತಿಯನ್ನು ಹೆಚ್.ಡಿ.ದೇವೇಗೌಡ ಅವರಿಗೆ ನೀಡಿ ಗೌರವಿಸಲು ಸರ್ಕಾರ ಮಂಜೂರಾತಿ ನೀಡಿದೆ.

ಇಂದು ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಶಾಸಕರ ಭವನದ ಆವರಣದಲ್ಲಿರುವ ವಾಲ್ಮೀಕಿ ಪ್ರತಿಮೆಗೆ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ  ಮಾಲಾರ್ಪಣೆ ಮಾಡಿದ್ರು. ಈ ವೇಳೆ ದೇವೇಗೌಡರಿಗೆ ಸಚಿವ ಪ್ರೀಯಾಂಕ್ ಖರ್ಗೆ ಸಾಥ್ ನೀಡಿದ್ರು. ಇನ್ನು ಮಾಲಾರ್ಪಣೆ ನಂತ್ರ ಮಾಜಿ ಪ್ರಧಾನಿ ದೇವೇಗೌಡರು ಲಂಡನ್​ಗೆ ಪ್ರಯಾಣ ಬೆಳೆಸಿದ್ದಾರೆ. ಈ ಮಧ್ಯೆ ಸಿಎಂ ಕುಮಾರಸ್ವಾಮಿ ಅವ್ರು ತಮ್ಮ ತಂದೆ ದೇವೇಗೌಡರಿಗೆ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಬೇಕಿತ್ತು. ಆದ್ರೆ ಗೌಡರು ಲಂಡನ್​ಗೆ ತೆರಳಿದ್ದರಿಂದ ಈ ಅಪೂರ್ವ ಅವಕಾಶ ಕೈತಪ್ಪಿದೆ……